ಕಲಾ ಸಾಮ್ರಾಟ್ S.ನಾರಾಯಣ್ ಮೇಲೆ FIR: ಪುತ್ರ ಸೇರಿ ಇಬ್ಬರ ಬಂಧನ ಸಾಧ್ಯತೆ! ಆಗಿದ್ದಾದರು ಏನು?
ಬೆಂಗಳೂರು, ಸೆಪ್ಟಂಬರ್ 11: ಸೆಲೆಬ್ರೆಟಿಗಳ ಜೀವನದಲ್ಲಿ ಏನೇ ನಡೆದರೂ ಸಹ ಅದು ದೊಡ್ಡ ಸುದ್ದಿಯಾಗುತ್ತಿದೆ. ಇದೀಗ ಕನ್ನಡಕ್ಕೆ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಕಲಾಸಾಮ್ರಾಟ್ ಎಸ್.ನಾರಾಯಣ್ ಅವರ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ಎಸ್.ನಾರಾಯಣ್ ಹಾಗೂ ಅವರ ಪುತ್ರನ ಬೆಂಗಳೂರಿನ ಜ್ಞಾನಭಾರತಿ ಆವರಣದಲ್ಲಿ ದೂರು ದಾಖಲಾಗಿದೆ. ಪೊಲೀಸರು FIR ಹಾಕಿದ್ದಾರೆ.
ಕನ್ನಡದ ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ಎಸ್.ನಾರಾಯಣ್ ಸಹ ಒಬ್ಬರು. ಅವರು ತಮ್ಮ ನಟನೆಗಿಂತ ಸಿನಿಮಾ ನಿರ್ದೇಶನದಿಂದಲೇ ಹೆಚ್ಚು ಖ್ಯಾತಿ ಪಡೆದವರು. ಅವರ ಪುತ್ರ ಪವನ್ ಪತ್ನಿ (ಸೊಸೆ) ತಮ್ಮ ಮೇಲೆ ವರದಕ್ಷಿಣೆ ಕಿರುಕುಳ ನಡೆದಿದೆ ಎಂದು ಆರೋಪಿ ದೂರು ನೀಡಿದ್ದಾರೆ. ಅದರ ಮೇರೆಗೆ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಪವನ್ ಅನ್ನು A1 ಮತ್ತು ಎಸ್ ನಾರಾಯಣ್ ಅವರನ್ನು A2 ಆರೋಪಿಯನ್ನಾಗಿ ಮಾಡಿದ್ದಾರೆ.

ಏನಿದು ಪ್ರಕರಣ? ಸೊಸೆ ಹೇಳುತ್ತಿರುವುದೇನು?
ಎಸ್.ನಾರಾಯಣ್ ಅವರ ಪುತ್ರ ಪವನ್ ಹಾಗೂ ಸೊಸೆ 2021ರಲ್ಲಿ ಸಂಪ್ರದಾಯದಂತೆ ವಿವಾಹವಾಗಿದ್ದರು. 'ತಮ್ಮ ಪತಿ ಹೆಚ್ಚು ಓದಿಲ್ಲ ಹೀಗಾಗಿ ಅವರಿಗೆ ಎಲ್ಲಿಯೂ ಕೆಲಸ ಸಿಕ್ಕಿರಲಿಲ್ಲ. ಎಲ್ಲ ಕೆಲಸ ಮಾಡಿ ನಾನೇ ಸಂಸಾರ ಬಂಡಿ ಸಾಗಿಸುತ್ತಿದ್ದೆ. ಈ ಮಧ್ಯೆ 'ಕಲಾ ಸಾಮ್ರಾಟ್ ಟೀಂ ಅಕಾಡೆಮಿ' ಎಂಬ ಸಿನಿಮಾ ಸಂಸ್ಥೆಯನ್ನು ಸ್ಥಾಪಿಸಲಾಗಿತ್ತು. ಅದನ್ನು ಆರಂಭಿಸಲು ಪವನ್ ತಮ್ಮ ಬಳಿಕ ಹತ್ತು ಲಕ್ಷ ರೂಪಾಯಿ ಕೇಳಿದ್ದರು. ನಾನು ನನ್ನಮ್ಮನ ಚಿನ್ನಭರಣ ಒತ್ತೆ ಇಟ್ಟು ಹತ್ತು ಲಕ್ಷ ರೂಪಾಯಿ ನೀಡಿದ್ದೆ. ಆದರೆ ಸಂಸ್ಥೆ ನಷ್ಟ ಅನುಭವಿಸಿತು. ಅದನ್ನು ತೂಗಿಸಲು ಮತ್ತೆ ಸಾಲ ಮಾಡಿ ಪತಿ ಪವನ್‌ಗೆ ನೀಡಿದ್ದೆ.
ಇಷ್ಟೆಲ್ಲ ಆದರೂ ಸಾಲದೆಂಬಂತೆ ಪತಿ ಹಾಗೂ ಅತ್ತೆ (ಎಸ್.ನಾರಾಯಣ್ ಪತ್ನಿ ಭಾಗ್ಯಲಕ್ಷ್ಮಿ) ಅವರು ವರದಕ್ಷಿಣೆ ತರುವಂತೆ ನಿರಂತರ ಕಿರುಕುಳ ನೀಡುತ್ತಲೆ ಇದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅತ್ತೆ, ಗಂಡ ಸೇರಿಕೊಂಡು ಮನೆಯಿಂದ ಹೊರದೂಡಿದ್ದಾರೆ. ನನ್ನ ಮದುವೆ ಸಮಯದಲ್ಲೂ ಉಂಗುರು, ಇತರ ಕಾರಣಗಳಿಗಾಗಿ ಖರ್ಚು ವೆಚ್ಚದ ಹೆಸರು ಹೇಳಿ ಹಣ ಪಡೆದಿದ್ದರು ಅಂತಲೂ ದೂರುದಾರೆ (ಸೊಸೆ) ಆರೋಪಿಸಿದ್ದಾರೆ.
ಇದೆಲ್ಲ ವಿಚಾರ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ಜ್ಞಾನಭಾರತಿ ಪೊಲೀಸರು, ಪವನ್ ಹಾಗೂ ನಿರ್ದೇಶಕ ಎಸ್.ನಾರಾಯಣ್ ಅವರನ್ನು ಯಾವ ಕ್ಷಣದಲ್ಲಾದರೂ ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಸೊಸೆಯ ಆರೋಪ ಬಗ್ಗೆ ಎಸ್.ನಾರಾಯಣ್ ಅವರು ಪ್ರತಿಕ್ರಿಯೆ ನೀಡಿದರೆ ಎರಡು ಕಡೆಗಿನ ಮಾಹಿತಿ ಲಭ್ಯವಾಗಲಿದೆ.












Click it and Unblock the Notifications