Get Updates
Get notified of breaking news, exclusive insights, and must-see stories!

ಕಾನ್ 2024 ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದು ಇತಿಹಾಸ ಬರೆದ ನಿರ್ದೇಶಕಿ ಪಾಯಲ್ ಕಪಾಡಿಯಾ

ಕಾನ್ ಚಲನಚಿತ್ರೋತ್ಸವ 2024ದಲ್ಲಿ (Cannes Film Festival 2024) ಈ ಬಾರಿ ಭಾರತೀಯರು ಸದ್ದು ಮಾಡಿದ್ದಾರೆ. ಸಿನಿಮಾ ತಾರೆಯರು ಚಂದ ಚಂದ್ ಬಟ್ಟೆ ತೊಟ್ಟು ಕ್ಯಾಮೆರಾಗಳ ಕಡೆ ಕೈ ಬೀಡುವುದು ಕಾಮನ್. ಆದರೆ, ಈ ಬಾರಿ ಕನ್ನಡಿಗರು ಸೇರಿ ಅನೇಕ ನಿರ್ದೇಶಕರು, ನಟರು ಇತಿಹಾಸ ಸೃಷ್ಟಿಸಿದ್ದಾರೆ.

ನಿರ್ದೇಶಕಿ ಪಾಯಲ್ ಕಪಾಡಿಯಾ ಅವರು ಮೇ 25 ರಂದು ಕಾನ್ ಚಲನಚಿತ್ರೋತ್ಸವ 2024ದಲ್ಲಿ ಇತಿಹಾಸವನ್ನು ನಿರ್ಮಿಸಿದ್ದಾರೆ. 77 ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಮಲಯಾಳಂ ಹಿಂದಿ ಭಾಷೆಯ ಚಲನಚಿತ್ರ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಗಾಗಿ ಅವರು ದೇಶದ ಮೊದಲ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

Filmmaker Payal Kapadia Makes History at Cannes bags Grand Pix Award For All We Imagine As Light

'ಆಲ್ ವಿ ಇಮ್ಯಾಜಿನ್ ಆಸ್ ಲೈಟ್'ಗೆ ಕ್ಯಾನೆಸ್ ಗ್ರ್ಯಾಂಡ್ ಪ್ರಿಕ್ಸ್

ಕ್ಯಾನೆಸ್ ಗ್ರ್ಯಾಂಡ್ ಪ್ರಿಕ್ಸ್ ಪಾಮ್ ಡಿ'ಓರ್ ನಂತರ ಈ ಚಲನಚಿತ್ರೋತ್ಸವದಲ್ಲಿ ನೀಡಲಾಗುವ ಎರಡನೇ ಅತ್ಯುನ್ನತ ಪ್ರಶಸ್ತಿಯಾಗಿದೆ. ಅಮೇರಿಕನ್ ನಿರ್ದೇಶಕ ಸೀನ್ ಬೇಕರ್ ಅನೋರಾಗೆ ಅತ್ಯುನ್ನತ ಗೌರವ ನೀಡಲಾಗಿದೆ. ಇಲ್ಲಿ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಸಿನಿಮಾ ಕೂಡ ಇತಿಹಾಸ ಬರೆದಿದೆ.

ಪಿಟಿಐ ವರದಿಯ ಪ್ರಕಾರ, 30 ವರ್ಷಗಳಲ್ಲಿ ಕಾನ್ ಉತ್ಸವದ ಮುಖ್ಯ ಸ್ಪರ್ಧೆಯಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಚಲನಚಿತ್ರ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್. ಪಾಯಲ್ ಕಪಾಡಿಯಾ ಭಾರತದ ಮೊದಲ ಮಹಿಳಾ ನಿರ್ದೇಶಕಿ. ಶಾಜಿ ಎನ್ ಕರುಣ್ ಅವರ 'ಸ್ವಾಹಂ' 1994 ರಲ್ಲಿ ಮುಖ್ಯ ಸ್ಪರ್ಧೆಗೆ ಆಯ್ಕೆಯಾಗಿ ಸ್ಪರ್ಧೆ ನೀಡಿತ್ತು.

77ನೇ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅದರ ಪ್ರದರ್ಶನದ ನಂತರ, ಚಲನಚಿತ್ರಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಬಳಿಕ ಬರೋಬ್ಬರಿ ಎಂಟು ನಿಮಿಷಗಳ ಸ್ಟಾಂಡಿಂಗ್ ಓವಿಯೇಷನ್ ಈ ಸಿನಿಮಾಕ್ಕೆ ದೊರೆತಿದೆ. ಇದಾದ ನಂತರ ಅಂತರಾಷ್ಟ್ರೀಯ ವಿಮರ್ಶಕರು ಪ್ರಶಸ್ತಿ ಘೋಷಿಸಿದ್ದಾರೆ. ಚಿತ್ರದಲ್ಲಿ ಕನಿ ಕಸ್ತೂರಿ, ದಿವ್ಯಾ ಪ್ರಭಾ ಹಾಗೂ ಕಾವ್ಯಾ ಕದಮ್ ನಟಿಸಿದ್ದಾರೆ.

Filmmaker Payal Kapadia Makes History at Cannes bags Grand Pix Award For All We Imagine As Light

ಪಾಯಲ್ ಕಪಾಡಿಯಾ ಯಾರು..?

38 ವರ್ಷ ವಯಸ್ಸಿನ ಪಾಯಲ್ ಕಪಾಡಿಯಾಗೆ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಚೊಚ್ಚಲ ನಿರ್ದೇಶನದ ಚಿತ್ರ. ಆದರೆ, ಅವರಿಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಿಕ್ಕ ಗೆಲುವು ಮೊದಲಲ್ಲ. 2021 ರಲ್ಲಿ, ಅವರ ಸಾಕ್ಷ್ಯಚಿತ್ರ 'ಎ ನೈಟ್ ಆಫ್ ನೋಯಿಂಗ್ ನಥಿಂಗ್' ಕ್ಯಾನೆಸ್ ಚಲನಚಿತ್ರೋತ್ಸವದ ನಿರ್ದೇಶಕರ ಫೋರ್ಟ್‌ನೈಟ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಓಯಿಲ್ ಡಿ'ಓರ್ (ಗೋಲ್ಡನ್ ಐ) ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಪಾಯಲ್ ಕಪಾಡಿಯಾ ಅವರ ಕಿರುಚಿತ್ರ 'ಆಫ್ಟರ್‌ನೂನ್ ಕ್ಲೌಡ್ಸ್' ಅನ್ನು ಸಿನಿಫೋಂಡೇಶನ್‌ನಲ್ಲಿ ಪ್ರದರ್ಶಿಸಲಾಗಿತ್ತು.

ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್ (ಎಫ್‌ಟಿಐಐ) ನ ಹಳೆಯ ವಿದ್ಯಾರ್ಥಿಯಾಗಿರುವ ಪಾಯಲ್ ಕಪಾಡಿಯಾ ಅವರು 2015 ರಲ್ಲಿ ಆಗಿನ ಎಫ್‌ಟಿಐಐ ಅಧ್ಯಕ್ಷ ಗಜೇಂದ್ರ ಚೌಹಾಣ್ ವಿರುದ್ಧ ನಾಲ್ಕು ತಿಂಗಳ ಪ್ರತಿಭಟನೆಯನ್ನು ನಡೆಸಿದ್ದರು. ಪ್ರತಿಭಟನೆಯ ಸಮಯದಲ್ಲಿ ಅವರು ತರಗತಿಗಳನ್ನು ಬಹಿಷ್ಕರಿಸಿದರು. ಬಳಿಕ ಅವರ ಎಫ್‌ಟಿಐಐ ಅನುದಾನಕ್ಕೆ ಕಡಿತ ಸೇರಿದಂತೆ ಶಿಸ್ತು ಕ್ರಮವನ್ನು ಎದುರಿಸಿದರು ಎಂದು ವರದಿಯಾಗಿದೆ.

'ದಯವಿಟ್ಟು ಇನ್ನೂ 30 ವರ್ಷ ಕಾಯಬೇಡಿ'

ಅಮೇರಿಕನ್ ನಟ ವಿಯೋಲಾ ಡೇವಿಸ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ ಪಾಯಲ್ ಕಪಾಡಿಯಾ, ಈ ಚಿತ್ರವನ್ನು ಸಾಧ್ಯವಾಗಿಸಿದ್ದಕ್ಕಾಗಿ ತನ್ನ ನಾಯಕಿಯರಿಗೆ ಧನ್ಯವಾದ ಅರ್ಪಿಸಿದ್ದಾರೆ. ಆಲ್ ವೀ ಇಮ್ಯಾಜಿನ್ ಆಸ್ ದಿ ಲೈಟ್ ಚಿತ್ರದಲ್ಲಿ ಛಾಯಾ ಕದಂ, ದಿವ್ಯ ಪ್ರಭಾ ಮತ್ತು ಕನಿ ಕಸ್ತೂರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿರುವ ಅವರು, "ನಾನು ತುಂಬಾ ನರ್ವಸ್ ಆಗಿದ್ದೇನೆ. ನಮ್ಮ ಚಿತ್ರವನ್ನು ಆಯ್ಕೆ ಮಾಡಿದ್ದಕ್ಕಾಗಿ ಕಾನ್ ಚಲನಚಿತ್ರೋತ್ಸವಕ್ಕೆ ಧನ್ಯವಾದಗಳು. ಮತ್ತೊಂದು ಭಾರತೀಯ ಚಲನಚಿತ್ರಕ್ಕಾಗಿ ದಯವಿಟ್ಟು 30 ವರ್ಷ ಕಾಯಬೇಡಿ. ಈ ಚಿತ್ರವು ಸ್ನೇಹದ ಬಗ್ಗೆ, ಮೂರು ವಿಭಿನ್ನ ಮಹಿಳೆಯರ ಬಗ್ಗೆ. ಆಗಾಗ್ಗೆ, ಮಹಿಳೆಯರನ್ನು ಪರಸ್ಪರ ಎತ್ತಿ ಕಟ್ಟುತ್ತಾರೆ. ಇದು ನಮ್ಮ ಸಮಾಜ ಮಾಡಿರುವುದು. ನಿಜವಾಗಿಯೂ ದುರದೃಷ್ಟಕರ. ಆದರೆ ನನಗೆ, ಸ್ನೇಹವು ಬಹಳ ಮುಖ್ಯವಾದ ಸಂಬಂಧ. ಏಕೆಂದರೆ ಹೆಚ್ಚಿನ ಒಗ್ಗಟ್ಟು, ಒಳಗೊಳ್ಳುವಿಕೆ ಮತ್ತು ಸಹಾನುಭೂತಿಗೆ ಕಾರಣವಾಗುತ್ತ" ಎಂದು ಪಾಯಲ್ ಕಪಾಡಿಯಾ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+