ಸೆಲೆಬ್ರಿಟಿಗಳ ಡಿವೋರ್ಸ್‌ಗೆ ಶಾಕಿಂಗ್ ಕಾರಣ ಬಿಚ್ಚಿಟ್ಟ ಖ್ಯಾತ ವಕೀಲೆ
ಇತ್ತೀಚೆಗೆ ಸೆಲೆಬ್ರಿಟಿಗಳ ಡಿವೋರ್ಸ್ ಸಾಮಾನ್ಯವಾಗಿಬಿಟ್ಟಿದೆ. ಇದಪ್ಪಾ ಒಳ್ಳೆ ಜೋಡಿ ಎಂದು ಹೆಸರು ಪಡೆದುಕೊಂಡಿದ್ದ ಅದೆಷ್ಟೋ ಜೋಡಿಗಳ ಸಂಬಂಧ ಮುರಿದುಬಿದ್ದಿರುವ ಉದಾಹರಣೆಗಳಿವೆ. ಇನ್ನು ಇತ್ತೀಚೆಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರ ಡಿವೋರ್ಸ್ ವಿಚಾರ ಎಲ್ಲರಿಗೂ ಶಾಕ್ ನೀಡಿತ್ತು.
ಈ ಬೆಳವಣಿಗೆಗಳ ಬಗ್ಗೆ ಎ.ಆರ್.ರೆಹಮಾನ್ ಹಾಗೂ ಸೈರಾ ಬಾನು ದಂಪತಿಯ ವಕೀಲೆಯಾಗಿರುವ ವಂದನಾ ಶಾ ಅವರು ಶಾಕಿಂಗ್ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇನ್ನು ಸೆಲೆಬ್ರಿಟಿಗಳ ಜೀವನದಲ್ಲಿ ಎದುರಾಗುತ್ತಿರುವ ಡಿವೋರ್ಸ್ ಕೇಸ್‌ಗಳ ಬಗ್ಗೆಯೂ ಅವರು ನೀಡಿರುವ ಹೇಳಿಕೆ ಸಂಚಲನ ಮೂಡಿಸುತ್ತಿದೆ.

ಬಾಲಿವುಡ್‌ನಲ್ಲಿ ವಿಚ್ಛೇದನದ ಕಾರಣಗಳು ಸಾಮಾನ್ಯ ವಿಚ್ಛೇದನ ಪ್ರಕರಣಗಳಿಗಿಂತ ಬಹಳ ಭಿನ್ನವಾಗಿವೆ ಎಂದು ವಕೀಲ ವಂದನಾ ಶಾ ವಿವರಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ಬಾಲಿವುಡ್‌ನಲ್ಲಿ ವಿಚ್ಛೇದನಕ್ಕೆ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.
ಬಾಲಿವುಡ್ ದಂಪತಿ ತನ್ನ ಜೀವನಶೈಲಿ ಹಾಗೂ ಅವರು ಹೇಗೆ ಡಿವೋರ್ಸ್ ಪರಿಗಣಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ. ಸೆಲೆಬ್ರಿಟಿಗಳ ಜೀವನವು ತುಂಬಾ ವಿಭಿನ್ನವಾಗಿದೆ. ದಾಂಪತ್ಯ ದ್ರೋಹವು ಡಿವೋರ್ಸ್‌ಗೆ ಕಾರಣ ಎಂದು ನಾನು ಭಾವಿಸುವುದಿಲ್ಲ.

ನಾನು ನೋಡಿರುವಂತೆ ಬಾಲಿವುಡ್ ದಂಪತಿ ವಿಭಿನ್ನ ಲೈಂಗಿಕ ಜೀವನ ನಡೆಸುತ್ತಾರೆ. ಬಾಲಿವುಡ್‌ನಲ್ಲಿ ಸಾಮಾನ್ಯ ಜನರಿಗಿಂತ ಲೈಂಗಿಕ ಜೀವನದ ನಿರೀಕ್ಷೆಗಳು ಹೆಚ್ಚು. ಅಲ್ಲಿ ವ್ಯಭಿಚಾರವು ಬಹಳಷ್ಟಿದೆ. ಒಂದು ರಾತ್ರಿಯ ವಿಚಾರ ಅವರಿಗೆ ಹೆಚ್ಚೇನಲ್ಲ. ನಾನು ಬಾಲಿವುಡ್‌ನ ಭಾಗವಲ್ಲ, ಆದರೆ ನನ್ನ ಬಳಿ ಬಂದಿರುವ ಪ್ರಕರಣಗಳಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದಿದ್ದಾರೆ.
ಬಾಲಿವುಡ್‌ನ ಬಹುಪಾಲು ಜೋಡಿಗಳು ಪರಸ್ಪರ ಒಪ್ಪಿಗೆಯಿಂದ ಡಿವೋರ್ಸ್ ಪಡೆಯುತ್ತಾರೆ. ಈ ಬೆಳವಣಿಗೆ ಒಳ್ಳೆಯದು. ಏಕೆಂದರೆ, ಇದು ಸಾರ್ವಜನಿಕರ ಮುಂದೆ ಅನಗತ್ಯ ನಾಟಕವನ್ನು ತಪ್ಪಿಸುತ್ತದೆ. ಇಬ್ಬರ ಮೇಲಿನ ಹಣಕಾಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಡಿವೋರ್ಸ್ ಪಡೆಯಲು ಯೋಜಿಸುತ್ತಿದ್ದರೆ, ಬಾಲಿವುಡ್ ಮಂದಿಯ ಮಾರ್ಗವನ್ನು ಅನುಸರಿಸಿ ಎಂದಿದ್ದಾರೆ.

ಪ್ರತಿ ಸುದೀರ್ಘ ದಾಂಪತ್ಯವು ಏರಿಳಿತಗಳ ಮೂಲಕ ಸಾಗುತ್ತದೆ. ಅದು ಗೌರವಯುತವಾಗಿ ಅಂತ್ಯಗೊಂಡಿದ್ದರೆ ನನಗೆ ತುಂಬಾ ಸಂತೋಷ. ರೆಹಮಾನ್ ಮತ್ತು ಸೈರಾ ಇಬ್ಬರೂ ಪರಸ್ಪರ ಬೆಂಬಲಿಸುವುದನ್ನು ಮುಂದುವರಿಸುತ್ತಾರೆ. ಪರಸ್ಪರ ಶುಭ ಹಾರೈಸುತ್ತಾರೆ ಎಂದು ವಕೀಲೆ ಹೇಳಿದ್ದಾರೆ.
ರೆಹಮಾನ್ ಮತ್ತು ಸೈರಾ ಇಬ್ಬರೂ ಅತ್ಯಂತ ಪ್ರಾಮಾಣಿಕರು. ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಂಡಿಲ್ಲ. ಅವರು ತಮ್ಮ ಡಿವೋರ್ಸ್ ಸೌಹಾರ್ದಯುತವಾಗಿದೆ ಎಂದೇ ಭಾವಿಸಿದ್ದಾರೆ. ಸದ್ಯಕ್ಕೆ ಅವರ ಹಣಕಾಸಿನ ಅಂಶದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಶಾ ಸ್ಪಷ್ಟಪಡಿಸಿದ್ದಾರೆ.
ಎ.ಆರ್.ರೆಹಮಾನ್ ಮತ್ತು ಸೈರಾ ಬಾನು 1995ರಲ್ಲಿ ಮದುವೆಯಾಗಿದ್ದರು. ಅವರಿಗೆ ಖತೀಜಾ, ರಹೀಮಾ, ಅಮೀನ್ ರೆಹಮಾನ್ ಎನ್ನುವ ಮೂವರು ಮಕ್ಕಳಿದ್ದಾರೆ. ಇತ್ತೀಚೆಗೆ ಈ ದಂಪತಿ ಜಂಟಿ ಹೇಳಿಕೆಯ ಮೂಲಕ ತಮ್ಮ ಡಿವೋರ್ಸ್ ಸ್ಪಷ್ಟಪಡಿಸಿದರು.












Click it and Unblock the Notifications