ಧನ್ವೀರ್ ಸಿನಿಮಾ ನೋಡಲು ಬಂದ ನಟ ದರ್ಶನ್‌ಗೆ ಪೊಲೀಸರಿಂದ ಶಾಕ್
ನಟ ದರ್ಶನ್ ತೂಗುದೀಪ ಅವರು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಜೊತೆಗೆ ಬೇರೆ ನಟರ ಕೈಹಿಡಿದು ನಡೆಸುವ ಹಳೆಯ ಕೆಲಸವನ್ನು ಮುಂದುವರಿಸಿದ್ದಾರೆ. ತಮ್ಮ ಆಪತ್ಕಾಲದಲ್ಲಿ ಜೊತೆ ಜೊತೆಯಲ್ಲೇ ಇದ್ದ ನಟ ಧನ್ವೀರ್ ಗೌಡ ಅವರ ವಾಮನ ಸಿನಿಮಾಗೂ ದರ್ಶನ್ ಸಾಥ್ ಕೊಟ್ಟಿದ್ದಾರೆ. ಸದ್ಯ ಧನ್ವೀರ್ ನಟನೆಯ ವಾಮನ ಸಿನಿಮಾ ರಿಲೀಸ್ ಆಗಿದ್ದು, ಈ ಸಿನಿಮಾ ಥಿಯೇಟರ್‌ನಲ್ಲಿ ವೀಕ್ಷಿಸುವ ಮೂಲಕ ದರ್ಶನ್ ಅವರು ಬಲ ತುಂಬಿದ್ದಾರೆ. ಇದೇ ವೇಳೆ ಪೊಲೀಸರು ಕೂಡ ಶಾಕ್ ಕೊಟ್ಟಿದ್ದಾರೆ.
ಹೌದು, ನಟ ದರ್ಶನ್ ಸೇರಿದಂತೆ ಕನ್ನಡ ಸ್ಟಾರ್ ನಟ-ನಟಿಯರಿಗೆ ಪೊಲೀಸರು ಖಡಕ್ ರೂಲ್ಸ್ ಜಾರಿ ಮಾಡಿದ್ದಾರೆ. ಇನ್ನು ಮುಂದೆ ನಟ ನಟಿಯರು ಥಿಯೇಟರ್‌ಗಳಿಗೆ ಬರುವ ಮುನ್ನ ಪೊಲೀಸರ ಭದ್ರತೆ ಪಡೆಯಬೇಕು ಎನ್ನಲಾಗಿದೆ. ಇದಕ್ಕಾಗಿ ಅವರು ಭಾರಿ ಮೊತ್ತವನ್ನು ಪೊಲೀಸರಿಗೆ ಪಾವತಿಸಬೇಕು ಎಂದು ಹೇಳಲಾಗುತ್ತಿದೆ. ಧನ್ವೀರ್ ಸಿನಿಮಾ ನೋಡಲು ಬಂದಿದ್ದ ದರ್ಶನ್ ಅವರಿಗೂ ಪೊಲೀಸರು ಈ ರೂಲ್ಸ್ ಜಾರಿ ಮಾಡಿದ್ದಾರೆ.

ಈ ಹಿಂದೆ ಸೆಲೆಬ್ರಿಟಿಗಳು ಎಲ್ಲೆಂದರಲ್ಲಿ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದರು. ಆದರೆ ಇನ್ನು ಮುಂದೆ ಹಾಗೆಲ್ಲ ಮಾಡುವಂತಿಲ್ಲ. ಬದಲಾಗಿ ಮೊದಲೇ ಪೊಲೀಸರು ಭದ್ರತೆ ಕೋರಬೇಕು. ಇದಕ್ಕೆ ಪೊಲೀಸರಿಗೆ ಹಣ ಕೂಡ ಕಟ್ಟಲೇಬೇಕು ಎಂಬ ನಿಯಮ ತರಲಾಗಿದೆ. ಅದರಂತೆ ರಾಜ್ಯದಲ್ಲಿ ಸ್ಟಾರ್ ನಟರು ಸಿನಿಮಾ ವೀಕ್ಷಿಸಲು ಥಿಯೇಟರ್ ಅಥವಾ ಮಾಲ್‌ಗಳಿಗೆ ಬಂದರೆ ಪೊಲೀಸ್ ಭದ್ರತೆ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಇದಕ್ಕೂ ಮುನ್ನ ಪೊಲೀಸ್ ಇಲಾಖೆಗೆ ಲಕ್ಷ ಲಕ್ಷ ಹಣ ಕೂಡ ಕಟ್ಟಬೇಕು.
ಧನ್ವೀರ್ ನಟನೆಯ ವಾಮನ ಸಿನಿಮಾದ ಪ್ರೀಮಿಯರ್ ಶೋ ನೋಡಲು ದರ್ಶನ್ ಹಾಗೂ ಚಿಕ್ಕಣ್ಣ ಬೆಂಗಳೂರಿನ ಜಿ.ಟಿ.ಮಾಲ್‌ಗೆ ಬಂದಿದ್ದರು. ಈ ವೇಳೆಯೂ ಪೊಲೀಸರು ಅವರಿಗೆ ಹೆಚ್ಚುವರಿ ಭದ್ರತೆ ಕೊಟ್ಟಿದ್ದಾರಂತೆ. ಈ ಭದ್ರತೆ ಒದಗಿಸಲು ವಾಮನ ಚಿತ್ರತಂಡವೇ ಪೊಲೀಸರಿಗೆ ಹಣ ಪಾವತಿ ಮಾಡಿದೆ. ಇನ್ನು ಮುಂದೆ ಸಿನಿಮಾ ವೀಕ್ಷಣೆಗೆ ಬರುವ ಸೆಲೆಬ್ರಿಟಿಗಳು ಪೊಲೀಸರಿಗೆ ಹಣ್ಣ ಕಟ್ಟಬೇಕಾಗಿದ್ದು, ಹೆಚ್ಚುವರಿ ಭದ್ರತೆ ಪಡೆಯುವುದು ಕಡ್ಡಾಯವಾಗಿದೆ.
ವಾಮನ ಸಿನಿಮಾಗೂ ಕೂಡ ದರ್ಶನ್ ಬರುವ ವಿಚಾರ ತಿಳಿದು ಭದ್ರತೆಗೆ ಸಂಬಂಧ ಪೊಲೀಸರು ಚಿತ್ರತಂಡಕ್ಕೆ ಕೇಳಿದ್ದಾರೆ. ಸೆಲೆಬ್ರಿಟಿಗಳು ಬರುವುದರಿಂದ ಜನ ಹೆಚ್ಚಾಗಿ ಸೇರಿ ಏನಾದ್ರೂ ಅಹಿತಕರ ಘಟನೆ ನಡೆದರೆ ಯಾರು ಹೊಣೆ ಎಂದು ಖಡಕ್ ಆಗಿ ಕೇಳಿದ್ದಾರೆ. ಅಲ್ಲದೆ ದರ್ಶನ್ ಬರುವುದರಿಂದ ಹೆಚ್ಚುವರಿ ಪೊಲೀಸರ ಭದ್ರತೆ ಪಡೆಯಬೇಕು. ಇದಕ್ಕಾಗಿ ಇಲಾಖೆಗೆ ಹಣ ಕಟ್ಟಬೇಕು ಎಂದು ಸೂಚಿಸಿದ್ದಾರೆ. ಅದರಂತೆ ವಾಮನ ಚಿತ್ರತಂಡವು ಪೊಲೀಸ್ ಇಲಾಖೆ ಸುಮಾರು ಮೂರು ಲಕ್ಷ ರೂಪಾಯಿ ಹಣ ಪಾವತಿಸಿದೆ ಎಂದು ತಿಳಿದುಬಂದಿದೆ. ಬಳಿಕ ಪೊಲೀಸರು ದರ್ಶನ್ ಅವರು ಸಿನಿಮಾ ಬಂದಾಗ ಅಲ್ಲಿ ಭದ್ರತೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ದಿಢೀರ್ ಈ ರೂಲ್ಸ್ ಏಕೆ?
ಇತ್ತೀಚೆಗೆ ಟಾಲಿವುಡ್ ನಟ ಅಲ್ಲು ಅರ್ಜುನ್ ನಟನೆಯ ಪುಷ್ಪ-2 ಸಿನಿಮಾ ಶೋ ವೇಳೆ ಹೈದಾರಾಬಾದ್‌ನ ಸಂಧ್ಯಾ ಥಿಯೇಟರ್ ಬಳಿ ಅಭಿಮಾನಿಗಳ ನೂಕುನುಗ್ಗಲು ಉಂಟಾಗಿ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಇದೇ ಆರೋಪದ ಮೇರೆಗೆ ನಟ ಅಲ್ಲು ಅರ್ಜುನ್ ಅವರು ಬಂಧನವಾಗಿ ಜೈಲಿಗೂ ಹೋಗಿಬಂದಿದ್ದರು. ಕೊನೆಗೆ ಇದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತುಕೊಂಡು ಹೊಸ ರೂಲ್ಸ್ ಜಾರಿ ಮಾಡಲಾಗುತ್ತಿದೆ.












Click it and Unblock the Notifications