ಡಾ. ರಾಜ್‌ಕುಮಾರ್ ಮೊಮ್ಮಗ, ನಟ ಷಣ್ಮುಖ ಗೋವಿಂದರಾಜ್‌ಗೆ ಸೋಷಿಯಲ್ ಮೀಡಿಯಾದಲ್ಲಿ Body Shaming!
ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಉದಯೋನ್ಮುಖ ನಟನ ಎಂಟ್ರಿಯಾಗಿದೆ. ಅದೂ ಸಹ ನಟ ಸಾರ್ವಭೌಮ ಡಾ. ರಾಜಕುಮಾರ್ ಅವರ ಕುಟುಂಬದಿಂದ ಸಿನಿಮಾ ರಂಗಕ್ಕೆ ಬಂದಿದ್ದಾರೆ. ಡಾ. ರಾಜಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅವರ ಮೊದಲ ಸಿನಿಮಾ ಇನ್ನು ಎರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ, ಅವರ ಮೊದಲ ಸಿನಿಮಾ ಬಿಡುಗಡೆಗೂ ಮುಂಚೆಯೇ ಸೋಷಿಯಲ್ ಮೀಡಿಯಾದಲ್ಲಿ ಜನ ಕೆಳಮಟ್ಟದ ಕಮೆಂಟ್‌ಗಳನ್ನು ಮಾಡಲು ಶುರು ಮಾಡಿಕೊಂಡಿದ್ದಾರೆ. ಮೊದಲ ಸಿನಿಮಾ ಬಿಡುಗಡೆಗೆ ಎರಡು ದಿನವಿರುವಾಗ ಬರುತ್ತಿರುವ ಪ್ರತಿಕ್ರಿಯೆ ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ಇಷ್ಟಕ್ಕೂ ಸೋಷಿಯಲ್ ಮೀಡಿಯಾದಲ್ಲಿ ಏನಾಗುತ್ತಿದೆ ಎನ್ನುವ ವಿವರ ಇಲ್ಲಿದೆ.
ಡಾ. ರಾಜಕುಮಾರ್ ಅವರ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅವರು ಪ್ರಪ್ರಥಮ ಬಾರಿಗೆ ನಾಯಕನಟನಾಗಿ ನಟಿಸುತ್ತಿರುವ "ನಿಂಬಿಯ ಬನಾದ ಮ್ಯಾಗ " ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಅವರ ಮೊದಲ ಸಿನಿಮಾ ಏಪ್ರಿಲ್ 4ಕ್ಕೆ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ಬಿಡುಗಡೆಗೂ ಮುಂಚೆಯೇ ಅವರ ಚಿತ್ರಕ್ಕಿಂತ ಅವರ ರೂಪದ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡಲು ಶುರು ಮಾಡಿದ್ದಾರೆ. ಈ ಕೆಟ್ಟ ಮನಸ್ಥಿತಿಗೆ ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

ನಿಂಬಿಯ ಬನಾದ ಮ್ಯಾಗ ಸಿನಿಮಾವು ಏಪ್ರಿಲ್ 4ಕ್ಕೆ ಬಿಡುಗಡೆಯಾಗಲಿದೆ. ಈ ಸಿನಿಮಾದ ಬಿಡುಗಡೆಗೆ namma_hubli_memes ಎನ್ನುವ ಪೇಜ್‌ನಿಂದ ಶುಭಕೋರಿ ಪೋಸ್ಟ್ ಮಾಡಲಾಗಿದೆ. "ಡಾ. ರಾಜ್‌ಕುಮಾರ್ ಅವರ ಮೊದಲನೆಯ ಮೊಮ್ಮಗ ಷಣ್ಮುಖ ಗೋವಿಂದ್ ರಾಜ್ ಅವರು ಪ್ರಪ್ರಥಮ ಬಾರಿಗೆ ನಾಯಕ ನಟನಾಗಿ ನಟಿಸುತ್ತಿರುವ "ನಿಂಬಿಯ ಬನಾದ ಮ್ಯಾಗ " ಚಿತ್ರದ ಬಿಡುಗಡೆ ದಿನಾಂಕವನ್ನು ಇದೇ April 04 ಕ್ಕೆ ಬಿಡುಗಡೆಯಾಗಲಿದೆ.
ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಶುಭಕೋರುತ್ತ ನಿಮ್ಮೆಲ್ಲರ ಹಾರೈಕೆ ಇರಲಿ.❤️ ಕಲೆ ಅನ್ನೋದು ಬ್ಲಡ್ ಅಲ್ಲೇ ಬಂದಿದೆ 🔥 ನಿಮ್ಮ ಸಪೋರ್ಟ್ ಒಂದು ಬೇಕೋ ಅಷ್ಟೇ 😍 ಅಂತ ಪೋಸ್ಟ್ ಮಾಡಲಾಗಿದೆ. ಆದರೆ ಈ ಪೋಸ್ಟ್‌ಗೆ ಕೆಲವರು ಸಪೋರ್ಟ್ ಮಾಡುವುದಕ್ಕಿಂತಲೂ ಕೆಲವರು ಕೆಳಮಟ್ಟದ ಕಮೆಂಟ್‌ಗಳನ್ನೇ ಮಾಡಿದ್ದಾರೆ. ಇದು ಭಾರೀ ಚರ್ಚೆಗೆ ಕಾರಣವಾಗಿದೆ.

ಷಣ್ಮುಖ ಗೋವಿಂದರಾಜ್ ಅವರ ರೂಪದ ಬಗ್ಗೆ ಹಲವರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಕೆಲವರು ಅವರ ಮೂಗು ಸರಿ ಇಲ್ಲ ಎಂದರೆ, ಇನ್ನೂ ಕೆಲವರು ಕೇವಲ ಡಾ. ರಾಜ್‌ಕುಮಾರ್ ಅವರ ಹೆಸರು ಹೇಳಿಕೊಂಡು ಸಿನಿಮಾರಂಗಕ್ಕೆ ಬರುವುದರಲ್ಲಿ ಅರ್ಥವಿಲ್ಲ. ಸ್ವಂತ ಪರಿಶ್ರಮದಿಂದ ಬೇಕಾದರೆ ಸಿನಿಮಾರಂಗದಲ್ಲಿ ಬೆಳೆಯಲಿ ಅಂತ ಹೇಳಿದ್ದಾರೆ.
ಈ ರೀತಿ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವವರ ನಡುವೆಯೂ ಹಲವರು ಷಣ್ಮುಖ ಗೋವಿಂದರಾಜ್ ಅವರಿಗೆ ಶುಭಕೋರಿದ್ದಾರೆ. ಸಿನಿಮಾದಲ್ಲಿ ನಟಿಸಬೇಕು ಅಂತಾದರೆ ಕೇವಲ ಒಳ್ಳೆಯ ರೂಪವಿರಬೇಕು, ನೋಡುವುದಕ್ಕೆ ಕಟುಮಸ್ತಾಗಿರಬೇಕು ಎಂದೇನು ಇಲ್ಲ. ಸಿನಿಮಾದಲ್ಲಿ ನಟಿಸುವುದಕ್ಕೆ ಒಳ್ಳೆಯ ನಟನೆ ಬಂದರೆ ಸಾಕು. ಇದು ಷಣ್ಮುಖ ಗೋವಿಂದ್ ರಾಜ್ ಅವರ ಮೊದಲ ಸಿನಿಮಾ ಅವರು ಹೇಗೆ ನಟಿಸಿದ್ದಾರೆ ಎಂದು ನೋಡೋಣ.. ಮೊದಲು ಸಿನಿಮಾ ಬಿಡುಗಡೆಯಾಗಲಿ ಈ ರೀತಿ ಕಮೆಂಟ್‌ಗಳನ್ನು ಮಾಡಬೇಡಿ ಅಂತಲೂ ಕೆಲವರು ಹೇಳಿದ್ದಾರೆ.
ಮೊದಲ ಸಿನಿಮಾದಲ್ಲೇ ಸಂಕಷ್ಟ: ಸಾಮಾನ್ಯವಾಗಿ ಮೊದಲ ಸಿನಿಮಾ ಬಿಡುಗಡೆಯಾದ ಮೇಲೆ ಆ ನಟರ ಅಭಿನಯ ಹಾಗೂ ಮೂವಿಯ ಸ್ಕ್ರಿಪ್ಟ್ ಆಧಾರದ ಮೇಲೆ ಅವರ ಬಗ್ಗೆ ಚರ್ಚೆ ಮತ್ತು ವಿಮರ್ಶೆಗಳನ್ನು ಮಾಡಲಾಗುತ್ತದೆ. ಆದರೆ, ನಟ ಷಣ್ಮುಖ ಗೋವಿಂದರಾಜ್ ಅವರಿಗೆ ಮೊದಲ ಸಿನಿಮಾ ಬಿಡುಗಡೆಗೂ ಮುಂಚೆಯೇ ಹಾಗೂ ಅವರ ಮೂಗಿನ ಬಗ್ಗೆ ಕೆಲವರು ಮಾತನಾಡುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇಷ್ಟು ಕೆಟ್ಟ ಮನಸ್ಥಿತಿಯ ಜನರು ಕರ್ನಾಟಕದಲ್ಲೂ ಇದ್ದಾರೆಯೇ ಅಂತ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ.












Click it and Unblock the Notifications