Sonu Nigam: ಕನ್ನಡ ಸಿನಿಮಾಗಳನ್ನ ಹಿಂದಿಗೆ ಡಬ್ ಮಾಡಬೇಡಿ; ಸೋನು ನಿಗಮ್ ಟ್ವೀಟ್ ಭಾರೀ ವೈರಲ್
Sonu Nigam: ಕರ್ನಾಟಕದಲ್ಲಿ ಅನ್ಯ ಭಾಷಿಗರ ಹಾವಳಿ ಹೆಚ್ಚಾಗಿಬಿಟ್ಟಿದೆ. ಇಲ್ಲಿಯೇ ವಾಸ ಇದ್ದುಕೊಂಡು ಇಲ್ಲಿನ ಜನರ ಮೇಲೆ ದಬ್ಬಾಳಿಕೆ ಮಾಡುವುದಲ್ಲದೆ, ಕೊನೆಗೆ ನೆಪ ಮಾತ್ರಕ್ಕೆ ಅಮಾಯಕರಂತೆ ಕ್ಷಮೆಯಾಚನೆ ಮಾಡುತ್ತಿರುವ ಘಟನೆಗಳು ನಡೆಯುತ್ತಲೇ ಇವೆ. ಈ ನಡುವೆ ಇದೀಗ ಸೋನು ನಿಗಮ್ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದು, ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಇತ್ತೀಚೆಗಷ್ಟೇ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್‌ವೊಬ್ಬರು ನಾನು ಕನ್ನಡ ಮಾತನಾಡುವುದಿಲ್ಲ. ನೀವು ಬೇಕಾದರೆ ಹಿಂದಿಯಲ್ಲಿ ಮಾತನಾಡಿ ಎಂದು ಗ್ರಾಹಕರ ಮುಂದೆಯೇ ಅವಾಜ್ ಹಾಕುವ ಮೂಲಕ ದರ್ಪ ಮೆರೆದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ ಇದು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿತ್ತು. ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಅವರು ಕೂಡ ಪ್ರತಿಕ್ರಿಯಿಸಿ ಬ್ಯಾಂಕ್ ಮ್ಯಾನೇಜರ್ ದರ್ಪದ ವಿರುದ್ಧ ಕಿಡಿಕಾರಿದ್ದರು.

ತೇಜಸ್ವಿ ಸೂರ್ಯ ಹೇಳಿದ್ದೇನು?: ಎಸ್‌ಬಿಐ ಬ್ಯಾಂಕ್‌ನ ಬ್ರ್ಯಾಂಚ್ ಮ್ಯಾನೇಜರ್ ಅವರ ಈ ರೀತಿಯ ದುಂಡಾವರ್ತನೆ ಸಹಿಸಲು ಆಗದು. ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ, ಅದರಲ್ಲಿಯೂ ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರು ಮಾತನಾಡುವ ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸಬೇಕು. ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಸ್ಥಳೀಯ ಕನ್ನಡಿಗರನ್ನು ಪರಿಗಣಿಸುವಂತೆ ನಾನು ಸಂಸತ್ತಿನ ಒಳಗೆ ಮತ್ತು ಹೊರಗೆ ಹಲವು ಬಾರಿ ಪ್ರಸ್ತಾಪಿಸಿದ್ದೇನೆ.
ಇತ್ತೀಚೆಗಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಮುಂದೆಯೂ ನಾನು ಇದನ್ನೇ ಪುನರುಚ್ಚರಿಸಿ, ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದು, ಈ ಕುರಿತಂತೆ ಡಿಎಫ್‌ಎಸ್ ನೀತಿಯಡಿಯಲ್ಲಿಯೇ ನೇಮಕಾತಿ ಕೈಗೊಳ್ಳುವಂತೆ @TheOfficialSBIರಲ್ಲೂ ವಿನಂತಿಸುತ್ತೇನೆ ಎಂದು ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದರು.
ಎಸ್ ಬಿ ಐ ಬ್ಯಾಂಕ್ ನ ಬ್ರ್ಯಾಂಚ್ ಮ್ಯಾನೇಜರ್ ರವರ ಈ ರೀತಿಯ ದುಂಡಾವರ್ತನೆ ಸಹಿಸಲು ಆಗದು.
— Tejasvi Surya (@Tejasvi_Surya) May 21, 2025
ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭದಲ್ಲಿ, ಅದರಲ್ಲಿಯೂ ಬ್ಯಾಂಕಿಂಗ್ ವಲಯದಲ್ಲಿ ಗ್ರಾಹಕರು ಮಾತನಾಡುವ ಸ್ಥಳೀಯ ಭಾಷೆಯಲ್ಲಿಯೇ ವ್ಯವಹರಿಸತಕ್ಕದ್ದು.
ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಸ್ಥಳೀಯ ಕನ್ನಡಿಗರನ್ನು ಪರಿಗಣಿಸುವಂತೆ…
ಅಲ್ಲದೆ, ಈ ರೀತಿಯ ವರ್ತನೆ ತೋರಿರುವ ಬ್ಯಾಂಕ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟವರ ಬಳಿ ನಾನು ಒತ್ತಾಯಿಸಿದ್ದು, ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಬ್ಯಾಂಕಿಂಗ್ ವಲಯ ಸಿಬ್ಬಂದಿ ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುವ ಅಗತ್ಯತೆ ಇದೆ ಅಂತಲೂ ಬರೆದುಕೊಂಡಿದ್ದರು. ಇದಾದ ಬಳಿಕವೇ ಸೋನು ನಿಗಮ್ ಎಂಬುವವರು ಕನ್ನಡ ಸಿನಿಮಾಗಳ ಬಗ್ಗೆ ಕೇವಲವಾಗಿ ಟ್ವೀಟ್‌ನಲ್ಲಿ ಬರೆದುಕೊಂಡು ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಸೋನು ನಿಗಮ್ ಯಾರು?: Sonu Nigam ಎಂಬ ಹೆಸರಿನಲ್ಲಿ ಈ ಟ್ವೀಟ್ ಇದ್ದು, ಬಹುತೇಕ ಮಂದಿ ಇದನ್ನು ಗಾಯಕ ಸೋನು ಎಂದುಕೊಂಡಿರುತ್ತಾರೆ. ಆದರೆ, ಅಸಲಿ ಸತ್ಯವೇ ಬೇರೆ ಆಗಿದೆ. ತೇಜಸ್ವಿ ಸೂರ್ಯ ಅವರ ಟ್ವೀಟ್‌ಗೆ ಪ್ರತಿ ಟ್ವೀಟಾಗಿ ಮಾಡಿರುವುದು ಸಿಂಗರ್ ಸೋನು ನಿಗಮ್ ಅಲ್ಲ. ಬದಲಿಗೆ ಇದೇ ಹೆಸರಿನ ಮತ್ತೊಬ್ಬ ಎನ್ನುವುದು ಗೊತ್ತಾಗಿದೆ.
ಸೋನು ನಿಗಮ್ ಹೆಸರಿನ ಟ್ವಿಟರ್ ಖಾತೆಯಲ್ಲಿ "ಸೂರ್ಯನನ್ನು ನೀವು ಕೇವಲ ಇನ್ನೊಬ್ಬ ಭಾಷಾ ಹೋರಾಟಗಾರರಾ? ಕನ್ನಡ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಬೇಡಿ. ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾದಲ್ಲಿ ಬಿಡುಗಡೆ ಮಾಡಬೇಡಿ. ಕನ್ನಡ ಚಲನಚಿತ್ರ ತಾರೆಯರಿಗೆ ಈ ಮಾತನ್ನು ಹೇಳುವ ಧೈರ್ಯ ನಿಮಗಿದೆಯೇ? ಮಿಸ್ಟರ್ @Tejasvi_Surya, ಅಥವಾ ನೀವು ಕೇವಲ ಬೇರೆ ಭಾಷಾ ಯೋಧ?," ಎಂದು ಬರೆದುಕೊಳ್ಳಲಾಗಿದೆ.
Don't dub Kannada movies in Hindi!
— Sonu Nigam (@SonuNigamSingh) May 21, 2025
Don't release Kannada movies pan-India!
Do you have the guts to say this to Kannada film stars, Mr. @Tejasvi_Surya, or you are just another language warrior?
ಇತ್ತೀಚೆಗಷ್ಟೇ ಗಾಯಕ ಸೋನು ನಿಗಮ್ ಕನ್ನಡದ ಬಗ್ಗೆ ಮಾತನಾಡಿ ಕ್ಷಮೆಯಾಚನೆಯನ್ನು ಕೂಡ ಮಾಡಿದ್ದಾರೆ. ಆದರೆ ಈ ಬಾರಿ ಟ್ವೀಟ್ ಮಾಡಿರುವುದು ಗಾಯಕ ಸೋನು ನಿಗಮ್ ಅಲ್ಲ. ಬದಲಿದೆ ಅವರ ಹೆಸರಿನ ಮತ್ತೊಬ್ಬ ವ್ಯಕ್ತಿ ಎಂದು ತಿಳಿದುಬಂದಿದೆ. ಈ ಸೋನು ನಿಗಮ್ ಬಿಹಾರ ಮೂಲದ ವಕೀಲ ಆಗಿದ್ದಾನೆ ಎನ್ನಲಾಗಿದೆ.
ಘಟನೆ ಹಿನ್ನೆಲೆ: ಬೆಂಗಳೂರಿನ ಚಂದಾಪುರದ ಎಸ್ಬಿಐ ಬ್ಯಾಂಕ್ಗೆ ಕೆಲಸದ ನಿಮಿತ್ತ ಗ್ರಾಹಕರೊಬ್ಬರು ಹೋಗಿದ್ದರು. ಈ ವೇಳೆ ಅಲ್ಲಿನ ಲೇಡಿ ಬ್ಯಾಂಕ್ ಮ್ಯಾನೇಜರೊಬ್ಬರು ದರ್ಪ ಮೆರೆದಿದ್ದರು. ಹಿಂದಿ ಮಾತನಾಡಿ ವ್ಯವಹರಿಸಿ, ನಾನು ಮಾತ್ರ ಕನ್ನಡದಲ್ಲಿ ಮಾತನಾಡುವುದಿಲ್ಲ ಎಂದು ಅವಾಜ್ ಹಾಕಿ ದರ್ಪ ತೋರಿದ್ದು, ಇದು ಎಲ್ಲೆಡೆ ವೈರಲ್ ಆಗಿತ್ತು. ಬಳಿಕ ಆ ಪರಭಾಷಿಕ ಮ್ಯಾನೇಜರ್ ಕ್ಷಮೆಯಾಚನೆ ಮಾಡಿ ಇನ್ಮುಂದೆ ಕರ್ನಾಟಕದಲ್ಲಿನ ಗ್ರಾಹಕರೊಂದಿಗೆ ಕನ್ನಡದಲ್ಲೇ ವ್ಯವಹರಿಸುತ್ತೇನೆ ಎಂದು ಹೇಳಿದ್ದರು.












Click it and Unblock the Notifications