Kiccha Sudeep: ಕಿಚ್ಚ ಸುದೀಪ್ ಜೀವನದಲ್ಲಿರುವ ಇಬ್ಬರು ಬಾಸ್ ಯಾರು ಗೊತ್ತಾ..?
ಅಭಿನಯ ಚಕ್ರವರ್ತಿ, ಬಾದ್ ಶಾ ನಟ ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳ ಆರಾಧ್ಯ ದೈವ. ಅಭಿಮಾನಿಗಳು ಪ್ರೀತಿಯಿಂದ ಸುದೀಪ್ ಅವರನ್ನು ಬಾಸ್ ಎಂದು ಕರೆಯುತ್ತಾರೆ. ಆದರೆ ಸುದೀಪ್ ತಮ್ಮ ಜೀವನದಲ್ಲಿ ಬಾಸ್ ಎಂದು ಕರೆದಿದ್ದು ಇಬ್ಬರಿಗೆ ಮಾತ್ರವಂತೆ. ಈ ಬಗ್ಗೆ 'ಗೌರಿ' ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಡುತ್ತಿರುವ ಸಮರ್ಜಿತ್ ಲಂಕೇಶ್ ಜೊತೆಗೆ ನಡೆಸಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ಕಲಾ ಮಾಧ್ಯಮ' ಯೂಟ್ಯೂಬ್ ಚಾನೆಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ. ನನ್ನ ಮೆಚ್ಚಿನ ಹೀರೋ ನೀವು ನಿಮ್ಮ ಮೆಚ್ಚಿನ ಹೀರೋ ಯಾರು ಎನ್ನುವ ಸಮರ್ಜಿತ್ ಲಂಕೇಶ್ ಪ್ರಶ್ನೆಗೆ ಉತ್ತರಿಸಿದ ಕಿಚ್ಚ ಸುದೀಪ್, ವಿಷ್ಣು ಸರ್ ಎಂದು ಉತ್ತರಿಸಿದ್ದಾರೆ. ಕನ್ನಡದಲ್ಲಿ ನನ್ನ ಆಲ್ ಟೈಮ್ ಫೇವರೇಟ್ ಅಂದ್ರೆ ವಿಷ್ಣು ಸರ್. ನಾನು ಯಾವಾಗಲೂ ಎಲ್ಲಾ ಕಡೆಯಲ್ಲೂ ಅದನ್ನು ಹೇಳಿದ್ದೇನೆ.

ನಾನು ಲೈಪ್ ಅಲ್ಲಿ ಇಬ್ಬರಿಗೆ ಬಾಸ್ ಅಂತಾ ಕರೆದಿರುವುದು. ಒಂದು ನಮ್ಮ ತಂದೆಗೆ. ಅವರನ್ನು ಇವತ್ತಿಗೂ ಬಾಸ್ ಅಂತಾ ಕರೆಯುತ್ತೇನೆ. ಇನ್ನೊಂದು ವಿಷ್ಣು ಸರ್. ಅವರು ಒಬ್ಬ ನಟನಾಗಿ ಮಾತ್ರವಲ್ಲದೇ, ನಟನೆಗಿಂತ ಹೆಚ್ಚಾಗಿ ಅವರ ವ್ಯಕ್ತಿತ್ವ. ಈ ಗತ್ತು ಅದೆನೆಲ್ಲಾ ಮೊದಲು ನೋಡಿದ್ದು ಅವರಲ್ಲೆ ನಾನು. ಆ ವ್ಯಕ್ತಿ ಅವರಿದ್ದ ರೀತಿ, ಆ ಗತ್ತು, ಅವರೇ ನನಗೆ ಎಲ್ಲಾ ಸಮಯದಲ್ಲೂ ಫೇವರೇಟ್ ಎಂದು ಹೇಳಿದ್ದಾರೆ.
ಇನ್ನು ತಮ್ಮ ತಂದೆ ಬಗ್ಗೆ ಮಾತನಾಡಿದ ಸುದೀಪ್, ನಮ್ಮ ತಂದೆ ಬ್ಯುಸಿನೆಸ್‌ಮ್ಯಾನ್. ಮೊದಲು ಕ್ರಿಕೆಟರ್ ಆಗಬೇಕು ಎಂದುಕೊಂಡೆ ಅದಕ್ಕೆ ಬಿಡಲಿಲ್ಲ. ನಾನು ಕ್ರಿಕೆಟ್ ನಿಲ್ಲಿಸಿದಾಗ ನನ್ನ ಅಮ್ಮ ಹಾಗೂ ಕೆಲವರು ನಮ್ಮ ತಂದೆಗೆ ಹೇಳಿದ್ದು ಏನೆಂದರೆ, ಎಲ್ಲವನ್ನೂ ತಡೆಯಬೇಡಿ, ಮಾಡಲು ಬಿಡಿ ಅವನಿಗೆ. ನಮ್ಮ ತಂದೆಗೆ ಇಂಡಸ್ಟ್ರಿಯಲ್ಲಿ ತುಂಬಾ ಜನ ಗೆಳೆಯರಿದ್ದರು. ಅವರಿಗೆ ಗೊತ್ತಿತ್ತು ಯಾರ್ಯಾರು ಹೇಗೆ ಒದ್ದಾಡಿದ್ದಾರೆ ಅಂತಾ. ಅವರು ಅಂದುಕೊಂಡಿದ್ದರು ಹೋಗಿ ವಾಪಸ್ ಬರುತ್ತಾನೆ ಅಂತಾ. ಆದರೆ ನಾನು ಯಾವ ಕಾರಣಕ್ಕೂ ಬಿಡಬಾರದು ಅಂತಾ ನಿರ್ಧರಿಸಿದ್ದೆ ಎಂದು ಸುದೀಪ್ ಹೇಳಿದ್ದಾರೆ.












Click it and Unblock the Notifications