Darshan Thoogudeepa: ದರ್ಶನ್ ಮತ್ತೆ ಬಳ್ಳಾರಿ ಜೈಲಿಗೆ ಹೋಗೋಕೆ ಉಳಿದಿರುವುದು ಎಷ್ಟು ದಿನ ಗೊತ್ತಾ!
Actor Darshan Thugudeep: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿರುವ ನಟ ದರ್ಶನ್ ತುಗೂದೀಪ್‌ಗೆ ಒಂದಿಲ್ಲೊಂದು ಸಂಕಷ್ಟಗಳು ಬರ್ತಾನೆ ಇದೆ. ಇನ್ನು ದರ್ಶನ್‌ಗೆ ಬೆನ್ನು ನೋವಿನ ಚಿಕಿತ್ಸೆಗೆ ಅಂತ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಕೊಡಲಾಗಿತ್ತು. ಈಗ ಈ ಅವಧಿ ಮುಕ್ತಾಯವಾಗುತ್ತಾ ಬರ್ತಿದೆ. ಆದರೆ, ಇಲ್ಲಿಯವರೆಗೂ ಆಪರೇಷನ್ ಮಾಡಿಸಿಕೊಂಡಿಲ್ಲ. ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಮುಂಚೆ ದರ್ಶನ್‌ಗೆ ತುರ್ತು ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ದರ್ಶನ್ ಪರ ವಕೀಲರು ವಾದ ಮಾಡಿದ್ದರು. ಆದರೆ, ಜೈಲಿನಿಂದ ಮಧ್ಯಂತರ ಜಾಮೀನು ಸಿಕ್ಕು ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲು ಬಂದರೂ ಆಪರೇಷನ್ ಮಾತ್ರ ಆಗಿಲ್ಲ. ಈ ರೀತಿ ಇರುವಾಗಲೇ...
ದರ್ಶನ್ ತೂಗುದೀಪ್ ಜೈಲಿನಿಂದ ಬಿಡುಗಡೆಯಾದ ಮೇಲೆ ನೇರವಾಗಿ ಆಸ್ಪತ್ರೆ ಸೇರಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನಡಿತಿದೆ. ಅವರ ಲಕ್ಷಾಂತರ ಜನ ಅಭಿಮಾನಿಗಳು ಡಿ - ಬಾಸ್ ಬೇಗ ಗುಣಮುಖರಾಗಲಿ. ದರ್ಶನ್ ಅವರನ್ನ ನಾವು ಅವರು ಮೊದಲು ಇದ್ರಲ್ಲ ಆತರ ನೋಡ್ಬೇಕು ಅಂತ ಕಾಯ್ತಾ ಇದ್ದಾರೆ.

ದರ್ಶನ್‌ಗೆ ಬೆನ್ನು ನೋವಿನ ಸಮಸ್ಯೆ ತೀವ್ರವಾಗಿದ್ದು, ಕೂಡಲೇ ಅವರಿಗೆ ಆಪರೇಷನ್‌ನ ಅಗತ್ಯ ಇದೆ. ಅವರ ಆರೋಗ್ಯ ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ ಎಂದು ಹೇಳಲಾಗಿತ್ತು. ಆದರೆ, ಇಲ್ಲಿಯ ವರೆಗೂ ಆಪರೇಷನ್‌ನ ವಿಚಾರದಲ್ಲಿ ಏನಾಗ್ತಿದೆ ಅಂತ ಗೊತ್ತಾಗಿಲ್ಲ. ಅಲ್ಲದೇ ದರ್ಶನ್‌ಗೆ ಹೈಕೋರ್ಟ್‌ನಿಂದ ಅಕ್ಟೋಬರ್ 30ಕ್ಕೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿತ್ತು.
ಅಲ್ಲಿಂದ ಆರು ವಾರಗಳ ಕಾಲ ಈ ಮಧ್ಯಂತರ ಜಾಮೀನಿನ ಅವಧಿ ಇರಲಿದೆ. ಇಂದಿಗೆ ನವೆಂಬರ್ 28ಕ್ಕೆ ನಾಲ್ಕು ವಾರಗಳ ಅವಧಿ ಹೆಚ್ಚು ಕಡಿಮೆ ಮುಕ್ತಾಯವಾದಂತಾಗಿದೆ. ಇನ್ನು ಕೇವಲ ಎರಡು ವಾರಗಳು ಮಾತ್ರ ಮಧ್ಯಂತರ ಜಾಮೀನು ಅವಧಿ ಇರಲಿದೆ. ಈ ಅವಧಿಯ ಒಳಗೆ ಅವರ ಬೆನ್ನು ನೋವಿಗೆ ಸಂಬಂಧಿಸಿದಂತೆ ಚಿಕಿತ್ಸೆ ಇಲ್ಲವೇ ಶಸ್ತ್ರಚಿಕಿತ್ಸೆ ಆಗಬೇಕಿದೆ.
ಆರು ವಾರಗಳ ಕಾಲ ಮಾತ್ರ ಮಧ್ಯಂತ ಜಾಮೀನು ನೀಡಲಾಗಿದೆ. 41 ವರ್ಷ ವಯಸ್ಸಿನ ದರ್ಶನ್ ಅವರು ಬೆನ್ನು ನೋವಿನ ಸಮಸ್ಯೆಯಿಂದ ತೀವ್ರವಾಗಿ ಬಳಲುತ್ತಿದ್ದಾರೆ ಅಂತ ಹೇಳಲಾಗಿದೆ. ಆದರೆ, ಅವರು ಯಾವ ಕಾರಣಕ್ಕೆ ಇಲ್ಲಿಯ ವರೆಗೆ ಇನ್ನೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ಇಲ್ಲ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲವೇ ಎನ್ನುವ ಬಗ್ಗೆ ಮಾಹಿತಿ ಇಲ್ಲ.

ಜಿ. ಪರಮೇಶ್ವರ್ ಗರಂ
ಇನ್ನು ನಟ ದರ್ಶನ್ ಆಪರೇಷನ್ ವಿಚಾರದಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸಹ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದರ್ಶನ್‌ಗೆ ಮಧ್ಯಂತರ ಜಾಮೀನು ಸಿಗುವುದಕ್ಕೂ ಮುಂಚೆ ಅವರಿಗೆ ಆಪರೇಷನ್ ಮಾಡಿಸಲೇಬೇಕು. ತುರ್ತಾಗಿ ಆಗಬೇಕು ಅಂತ ಹೇಳಿದ್ದರು. ಆದರೆ, ಇಲ್ಲಿಯ ವರೆಗೆ ಅದು ಆಗಿಲ್ಲ. ಹೀಗಾಗಿ, ಇದರಲ್ಲೇ ಅವರಿಗೆ ಆಪರೇಷನ್‌ನ ಅವಶ್ಯಕತೆ ಇಲ್ಲ ಅನ್ನೋದು ಗೊತ್ತಾಗಲ್ವಾ ಎಂಬರ್ಥದಲ್ಲಿ ಅವರು ಮಾತನಾಡಿದ್ದರು.
ಇನ್ನು ದರ್ಶನ್ ಅವರಿಗೆ ಸಿಕ್ಕಿರುವ ಮಧ್ಯಂತರ ಜಾಮೀನಿನ ಅವಧಿ ಇನ್ನು ಕೇವಲ ಎರಡು ವಾರಗಳಷ್ಟು ಮಾತ್ರ ಇದೆ. ಇದರ ನಡುವೆ ಹಲವು ಬೆಳವಣಿಗೆಗಳು ನಡೆದಿವೆ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಯಾವ ರೀತಿಯ ತಿರುವು ಸಿಗಲಿದೆ ಎನ್ನುವ ಕುತೂಹಲ ಈಗ ಎದುರಾಗಿದೆ.












Click it and Unblock the Notifications