Deepavali 2024: ಆನೆ ಪಟಾಕಿ, ಆಟಂ ಬಾಂಬ್ ಪಟಾಕಿ ಹೇಗೆ ತಯಾರಿಸುತ್ತಾರೆ? ವಿಡಿಯೋ ನೋಡಿ ತಿಳಿದುಕೊಳ್ಳಿ!
ದೀಪಾವಳಿ ಅಂದ್ರೆ ಪಟಾಕಿ, ದೀಪಾವಳಿ ಹಬ್ಬದ ಜೊತೆಗೆ ಬೆರೆತು ಹೋಗಿದೆ ಈ ವಸ್ತು... ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಭೂ ಮಾಲಿನ್ಯ... ಹೀಗೆ ಹಲವು ರೀತಿಯ ಸಮಸ್ಯೆ ಸೃಷ್ಟಿ ಮಾಡುವ ಆರೋಪ ದೀಪಾವಳಿಯ ಪಟಾಕಿ ಮೇಲೆ ಇದ್ದರು ಕೂಡ ಜನರು ಮಾತ್ರ ದೀಪಾವಳಿ ಹಬ್ಬಕ್ಕೆ ಪಟಾಕಿಯನ್ನ ಇಷ್ಟಪಟ್ಟು ಹೊಡೆಯುತ್ತಾರೆ. ಹಾಗಾದರೆ, ದೀಪಾವಳಿ ಹಬ್ಬಕ್ಕೆ ಹಚ್ಚುವ & ಬ್ಲಾಸ್ಟ್ ಮಾಡುವ ಪಟಾಕಿಗಳನ್ನ ಹೇಗೆ ತಯಾರಿಸುತ್ತಾರೆ? ವಿಡಿಯೋ ಮಿಸ್ ಮಾಡದೆ ನೋಡಿ!
ದೀಪಾವಳಿ ಹಬ್ಬದ ಸಂಭ್ರಮ ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಾದ್ಯಂತ ಮೇಳೈಸಿ ಎಲ್ಲೆಲ್ಲೂ ಸಂಭ್ರಮದ ಆಚರಣೆ ಕಾಣುತ್ತಿದೆ. ಭಾರತದ ಜೊತೆಗೆ ಅಮೆರಿಕ, ಯುರೋಪ್, ರಷ್ಯಾ, ಹೀಗೆ ಎಲ್ಲೆಲ್ಲೂ ಹಬ್ಬದ ವಾತಾವರಣ ಬಲು ಜೋರಾಗಿದೆ. ಇಂತಹ ಸಮಯದಲ್ಲಿ ಭಾರತದ ಮೂಲೆ ಮೂಲೆಯಲ್ಲೂ ಪಟಾಕಿ ಹಚ್ಚಿ ದೀಪಾವಳಿ ಹಬ್ಬ ಆಚರಣೆ ಮಾಡ್ತಿದ್ದಾರೆ ಜನ. ಇಂತಹ ಸಮಯದಲ್ಲಿ ಪಟಾಕಿ ಹೇಗೆ ತಯಾರಿಸುತ್ತಾರೆ? ಆಟಂ ಬಾಂಬ್, ಆನೆ ಪಟಾಕಿ ಹೇಗೆ ರೆಡಿಯಾಗುತ್ತೆ? ಬನ್ನಿ ವಿಡಿಯೋಗಳನ್ನ ನೋಡೋಣ.

ಪಟಾಕಿ ಎಷ್ಟು ಸಂಭ್ರಮ ತರುತ್ತದೆಯೋ, ಹಚ್ಚುವಾಗ ಸ್ವಲ್ಪ ಎಡವಟ್ಟು ಮಾಡಿಕೊಂಡರೆ ಅಷ್ಟೇ ದೊಡ್ಡ ಅನಾಹುತಕ್ಕೆ ಕೂಡ ಪಟಾಕಿಗಳು ಕಾರಣವಾಗುತ್ತವೆ ಅನ್ನೋದು ಗ್ಯಾರಂಟಿ. ಪಟಾಕಿ... ಪಟಾಕಿ... ಪಟಾಕಿ... ಪಟ ಪಟ ಪಟಾಕಿ.. ಇಲ್ಲಿದೆ ನೋಡಿ ನೀವು ಹಚ್ಚುವ ಪಟಾಕಿ ಹೇಗೆ ತಯಾರು ಮಾಡುತ್ತಾರೆ ಅನ್ನೋ ವಿಡಿಯೋ.
ಆನೆ ಪಟಾಕಿ ಅಥವಾ ಬಿಜಲಿ
ನೋಡಿದ್ರಲ್ಲ ನೀವು ಹಚ್ಚುವ ದೊಡ್ಡ ಪಟಾಕಿ ಆಟಂ ಬಾಂಬ್ ಎಂದೇ ಕರೆಯಲಾಗುವ ಈ ಕ್ರಾಕರ್ ಹೇಗೆ ರೆಡಿ ಆಗುತ್ತೆ ಅಂತಾ. ಇದರ ಜೊತೆಗೆ ಆನೆ ಪಟಾಕಿ ಕೂಡ ನಿಮ್ಮ ಗಮನವನ್ನ ಸೆಳೆಯುತ್ತದೆ. ಯಾಕಂದ್ರೆ ಆನೆ ಪಟಾಕಿ ಅಥವಾ ಬಿಜಲಿ ಅಂತಾ ಕರೆಯುವ ಪಟಾಕಿ ಕೂಡ ಸಖತ್ ಗಮನ ಸೆಳೆಯುತ್ತದೆ. ಚೀಪ್ & ಬೆಸ್ಟ್ ಅಂತಾ ಕೂಡ ಈ ಪಟಾಕಿಯನ್ನ ಕರೆಯುವ ವಾಡಿಕೆ ಇದೆ. ಹಾಗಿದ್ರೆ ಆನೆ ಪಟಾಕಿ ಅಥವಾ ಬಿಜಲಿ ಪಟಾಕಿ ಹೇಗೆ ತಯಾರು ಮಾಡ್ತಾರೆ? ಮುಂದೆ ವಿಡಿಯೋ ನೋಡಿ.
ಪಟಾಕಿ ಹಚ್ಚುವ ಸಮಯದಲ್ಲಿ ಹುಷಾರು
ದೀಪಾವಳಿ ಹಬ್ಬದ ದಿನ ಪಟಾಕಿ ಹೊಡೆಯುವ ಬಗ್ಗೆ ಸಾಕಷ್ಟು ವಿವಾದಗಳು ಇವೆ. ಒಂದು ಕಡೆ ಪಟಾಕಿ ದೀಪಾವಳಿ ಹಬ್ಬದ ಸಂಸ್ಕೃತಿ ಅಂತಾ ಕೆಲವರು ಹೇಳಿದರೆ, ಇನ್ನೂ ಕೆಲವರು ಪಟಾಕಿ ನಮ್ಮ ಸಂಸ್ಕೃತಿ ಅಲ್ಲ ಅಂತಾರೆ. ಇದೆಲ್ಲಾ ಒಂದು ಕಡೆ ಇರಲಿ ಆದ್ರೆ ನಮ್ ಹುಡುಗರು ಮಾತ್ರ ಭರ್ಜರಿಯಾಗಿ ಡಿಸೈನ್ ಡಿಸೈನ್ ಆಗಿ ಪಟಾಕಿ ಹಚ್ಚುತ್ತಾರೆ. ಅದರಲ್ಲೂ ಸುಮ್ಮನೆ, ಪಟಾಕಿ ಹೊಡೆದು ಬರ್ರೋ ಅಂದ್ರೆ ಪಟಾಕಿ ಹಚ್ಚುವಾಗ ಮಹಾಯುದ್ಧವನ್ನೇ ಮಾಡ್ತಿದ್ದಾರೆ. ಒಟ್ನಲ್ಲಿ ದೀಪಾವಳಿ ಸಂಭ್ರಮ ಇನ್ನೇನು ಕೊನೆಯ ಹಂತಕ್ಕೆ ಬಂದಿದ್ದು, ಪಟಾಕಿ ಹಚ್ಚುವ ಸಮಯದಲ್ಲಿ ಹುಷಾರಾಗಿ ಇರಿ.












Click it and Unblock the Notifications