Boys Hostel: ಕನ್ನಡದ ‘ಬಾಯ್ಸ್ ಹಾಸ್ಟೆಲ್’ಗೆ ತೆಲುಗು ಪ್ರೇಕ್ಷಕ ಫಿದಾ!

'ಪ್ಯಾನ್ ಇಂಡಿಯಾ' ಜಮಾನದಲ್ಲಿ ಕನ್ನಡ ಸಿನಿಮಾಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದ್ರಲ್ಲೂ ಕೆಜಿಎಫ್ ಮತ್ತು ಕಾಂತಾರ ಸಿನಿಮಾಗಳ ನಂತರ ಕನ್ನಡ ಸಿನಿಮಾಗಳ ಖದರ್‌ಗೆ ಬಾಲಿವುಡ್ ಕೂಡ ಶೇಕ್ ಆಗಿದೆ. ಹೀಗಿದ್ದಾಗಲೇ ಕನ್ನಡದ ಉತ್ತಮ ಚಿತ್ರಗಳನ್ನ ಪರಭಾಷೆ ಜನರು ಪ್ರೀತಿಸುತ್ತಿದ್ದಾರೆ. ಈ ಪ್ರಯತ್ನದ ಭಾಗವಾಗಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತೆಲುಗು ಚಿತ್ರರಂಗದಲ್ಲೂ ಗೆದ್ದು ಬೀಗಿದೆ.

ಹೌದು, ಕರ್ನಾಟಕದಲ್ಲಿ ರಿಲೀಸ್ ಆಗಿ ಕೋಟಿ ಕೋಟಿ ಬಾಚಿರುವ ಮತ್ತು ಕನ್ನಡಿಗರ ಹೃದಯ ಗೆದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ತೆಲುಗು ಚಿತ್ರರಂಗದಲ್ಲೂ ಸದ್ದು ಮಾಡಿದೆ. ಈ ಸಿನಿಮಾ ನೋಡಿ ಕನ್ನಡಿಗರು ಹೊಟ್ಟೆ ಹಿಡಿದುಕೊಂಡು ನಕ್ಕಿದ್ದರು. ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಟೈಟಲ್‌ನಲ್ಲಿ ರಿಲೀಸ್ ಆಗಿರುವ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ'ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಹಾಗೇ ಸ್ಟಾರ್ ನಟರು ಕೂಡ ಈ ಸಿನಿಮಾ ನೋಡಿ ಗ್ರೇಟ್ ಅಂತಿದ್ದಾರೆ. ಉತ್ತಮ ಚಿತ್ರಗಳು ಬಂದರೆ ಜನರು ಒಪ್ಪಿಕೊಳ್ಳೋದು ಪಕ್ಕಾ ಅನ್ನೋದು ಈಗ ಮತ್ತೆ ಮತ್ತೆ ಪ್ರೂವ್ ಆಗುತ್ತಿದೆ.

hostel-hudugaru-bekagiddare-telugu-version

ಹೊಸಬರ ಚಿತ್ರಕ್ಕೆ ಗ್ರ್ಯಾಂಡ್ ರೆಸ್ಪಾನ್ಸ್

ಕೊರೊನಾ ಬಳಿಕ ಚಿತ್ರರಂಗ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಚಿತ್ರ ಮಂದಿರಕ್ಕೆ ಜನರು ಬರ್ತಿಲ್ಲ ಅನ್ನೋ ಕೊರಗು ಕಾಡುತ್ತಿದೆ. ಹೀಗೆ ಹಲವು ಚಿತ್ರ ಮಂದಿರಗಳು ಬಾಗಿಲು ಹಾಕಿ ಬೇರೆ ದಾರಿ ಹಿಡಿಯುತ್ತಿವೆ. ಚಿತ್ರ ಮಂದಿರಗಳು ಕಾಣೆಯಾಗ್ತಿರುವ ಹಿನ್ನೆಲೆಯಲ್ಲಿ ಭವಿಷ್ಯದ ಬಗ್ಗೆಯೂ ಭಯ ಶುರುವಾಗಿದೆ, ಇದೇ ಉದ್ಯಮ ನಂಬಿ ಬದುಕುತ್ತಿದ್ದವರಿಗೆ ಮುಂದೆ ಏನು ಅನ್ನೋ ಚಿಂತೆ ಕಾಡುತ್ತಿದೆ. ಅದರಲ್ಲೂ ಕರ್ನಾಟಕದಲ್ಲಿ ಚಿತ್ರ ಮಂದಿರಗಳ ಸಿಬ್ಬಂದಿ & ಮಾಲೀಕರಿಗೆ ಸಂಕಷ್ಟ ಎದುರಾಗಿದೆ. ಈ ಹೊತ್ತಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಎಲ್ಲಾ ದಾಖಲೆ ಧೂಳ್ ಧೂಳ್ ಮಾಡಿತ್ತು. ಚಿತ್ರ ಮಂದಿದ ಮಾಲೀಕರು ಮತ್ತು ಸಿಬ್ಬಂದಿಗೆ ರಿಲೀಫ್ ನೀಡಿತ್ತು.

ಹಾಸ್ಟೆಲ್ ಹುಡುಗರ ಚಿತ್ರಕ್ಕೆ ನಗುವೇ ಭೂಷಣ!

ನಿತಿನ್ ಕೃಷ್ಣಮೂರ್ತಿ ಚೊಚ್ಚಲ ಪ್ರಯತ್ನದ ಫಲವಾಗಿ ಹಾಸ್ಟೆಲ್ ಹುಡುಗರು ತೆರೆಯ ಮೇಲೆ ಅಬ್ಬರಿಸಿದೆ. ಈ ಸಿನಿಮಾ ರಾಜ್ಯ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯ ಹಾಗೂ ವಿದೇಶದಲ್ಲಿಯೂ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡಿತ್ತು. ತುಂಗಾ ಬಾಯ್ಸ್ ಹಾಸ್ಟೆಲ್ ಹುಡುಗರ ಕಾಮಿಡಿ ಪ್ರೇಕ್ಷಕರಿಗೆ ನಗುವಿನ ಕಚಗುಳಿ ಇಟ್ಟಿತ್ತು. ಈಗ ಆಂಧ್ರ ಹಾಗೂ ತೆಲಂಗಾಣ ರಾಜ್ಯದಲ್ಲಿ ಬಾಯ್ಸ್ ಹಾಸ್ಟೆಲ್ ಹೆಸರಿನಡಿ ತೆಲುಗು ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ಸಾಕಷ್ಟು ಕನ್ನಡ ಚಿತ್ರಗಳು ತೆಲುಗು ಭಾಷೆಯಲ್ಲಿ ಡಬ್ ಆಗಿ ರಿಲೀಸ್ ಆಗಿದ್ದಲ್ಲದೆ ಸದ್ದು ಮಾಡಿದ್ದವು. ಈಗ ಅದೇ ಸಾಲಿಗೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಕೂಡ ಸೇರ್ಪಡೆಯಾಗಿದೆ.

hostel-hudugaru-bekagiddare-telugu-version

ರಿಷಬ್, ಪವನ್, ಶೈನ್ ಶೆಟ್ಟಿ ಸಾಥ್

ಚಾಯ್ ಬಿಸ್ಕೆಟ್ ಫಿಲ್ಮ್ಸ್ & ಅನ್ನಪೂರ್ಣ ಸ್ಟುಡಿಯೋಸ್ ಜಂಟಿಯಾಗಿ ತೆಲುಗಿನಲ್ಲಿ 'ಬಾಯ್ಸ್ ಹಾಸ್ಟೆಲ್' ಶೀರ್ಷಿಕೆಯಲ್ಲಿ ಚಿತ್ರವನ್ನ ರಿಲೀಸ್ ಮಾಡಿವೆ. ಕನ್ನಡದಲ್ಲಿ ಚಿತ್ರವನ್ನು ನಟ ರಕ್ಷಿತ್ ಶೆಟ್ಟಿ ತಮ್ಮ ಪರವಃ ಪಿಕ್ಚರ್ಸ್ ಬ್ಯಾನರ್‌ ಅಡಿ ಪ್ರೆಸೆಂಟ್ ಮಾಡಿದ್ದರು. ರಂಗಭೂಮಿ ಹಿನ್ನೆಲೆ ಹೊಂದಿದ ಈ ಪ್ರತಿಭಾನ್ವಿತರ ತಂಡಕ್ಕೆ ರಿಷಬ್ ಶೆಟ್ಟಿ, ರಮ್ಯಾ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ & ಇನ್ನಿತರರು ಸಾಥ್ ಕೊಟ್ಟಿದ್ದರು.

ಗುಲ್ಮೊಹರ್ ಫಿಲ್ಮ್ಸ್ ಹಾಗೂ ವರುಣ್ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದರು. ಇದೀಗ ತೆಲುಗು ಸಿನಿಮಾ ಪ್ರೇಕ್ಷಕರು ಅವರದ್ದೇ ಭಾಷೆಯಲ್ಲಿ ಚಿತ್ರ ಕಣ್ತುಂಬಿಕೊಂಡು ಜೈ ಎಂದಿದ್ದಾರೆ. ಹಾಗೇ ಕನ್ನಡದಲ್ಲಿ ರಮ್ಯಾ ಅವರು ನಿರ್ವಹಿಸಿದ್ದ ಪಾತ್ರವನ್ನ ನಟಿ ರಶ್ಮಿ ನಿರ್ವಹಿಸಿದ್ದಾರೆ. ಪ್ರೀಮಿಯರ್ ಶೋಗಳ ಮೂಲಕವೇ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಚಿತ್ರ ತೆಲುಗು ರಾಜ್ಯಗಳಲ್ಲಿ ಸೌಂಡ್ ಮಾಡಿತ್ತು. ಈ ಮೂಲಕ ಕನ್ನಡದ ಮತ್ತೊಂದು ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+