ಸೋನಾಲ್ ಬಳಿ ಮನಸಾರೆ ಕ್ಷಮೆ ಕೇಳಿದ ತರುಣ್ ಸುಧೀರ್: ಯಾಕೆ ಗೊತ್ತಾ..?
ಕನ್ನಡ ಚಿತ್ರರಂಗದಲ್ಲಿ ಸದ್ಯ ಟ್ರೆಂಡಿಂಗ್‌ನಲ್ಲಿರುವ ಜೋಡಿ ಎಂದರೆ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ. ಸ್ಯಾಂಡಲ್ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಜೊತೆ ನಟಿ ಸೋನಲ್ ಮೊಂಥೆರೋ ಇತ್ತೀಚಿಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರು, ಸ್ನೇಹಿತರು, ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ಈ ಜೋಡಿ ಬೆಂಗಳೂರಿನ ಮೈಸೂರು ರೋಡ್‌ನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಈ ಜೋಡಿ ಮದುವೆಯಾಗಿದ್ದಾರೆ.
ನಟಿ ಸೋನಲ್‌ಗೆ ಮದುವೆ ಮುಂಚೆ ಒಂದು ಆಸೆ ಇತ್ತಂತೆ ಆದರೆ ಅದನ್ನು ಈಡೇರಿಸಲು ತರುಣ್ ಸುಧೀರ್ ಅವರಿಗೆ ಸಾಧ್ಯವಾಗಿರಲಿಲ್ಲವಂತೆ. ಈ ಬಗ್ಗೆ ಅನುಶ್ರಿ ಆ್ಯಂಕರ್ ಯೂಟ್ಯೂಬ್ ಚಾನೆಲ್‌ನಲ್ಲಿ ಸೋನಾಲ್ ಹೇಳಿಕೊಂಡಿದ್ದಾರೆ. ಈ ವೇಳೆ ತರುಣ್ ಸುಧೀರ್ ಮನಸಾರೆ ಕ್ಷಮೆ ಕೇಳಿ ಸೋನಲ್ ಆಸೆಯನ್ನು ಈಡೇರಿಸಿದ್ದಾರೆ.

ಈ ವೇಳೆ ಮಾತನಾಡಿದ ತರುಣ್ ಸುಧೀರ್, ಮದುವೆಗೆ ಮುಂಚೆ ಸೋನಾಲ್ ಅವರೇ ಸಪ್ರೈಸ್ ಅರೆಂಜ್ ಮಾಡಿದ್ದರು. ಉಂಗುರು ಹಾಗೂ ಹೂ ಕೊಟ್ಟು ವಿಲ್ ಯು ಮ್ಯಾರಿ ಮಿ ಅಂದರು. ನನಗೆ ಆ ಕ್ಷಣಕ್ಕೆ ಖುಷಿ ಹಾಗೂ ಮುಜುಗರ ಎಲ್ಲಾ ಒಟ್ಟಿಗೆ ಆಯ್ತು ಎಂದಿದ್ದಾರೆ. ಮದುವೆಗೆ ಮುಂಚೆ ಸರಿಯಾಗಿ ಪ್ರಪೋಸ್ ಮಾಡದ ಕಾರಣ ಅನುಶ್ರೀ ಕಾರ್ಯಕ್ರಮದಲ್ಲಿ ತರುಣ್ ಸುಧೀರ್ ಬಹಳ ಸುಂದರವಾಗಿ ಸೋನಾಲ್‌ಗೆ ಪ್ರಪೋಸ್ ಮಾಡಿದ್ದಾರೆ.
'ಸೋನಾ, ಮದುವೆಗೆ ಮುಂಚೆ ಪ್ರಪೋಸ್ ಮಾಡಲು ಯಾವ ಅವಕಾಶವನ್ನೂ ಬಳಸಿಕೊಳ್ಳಲದ ಕಾರಣ ನಾನು ಮನಸಾರೆ ಕ್ಷಮೆ ಕೇಳುತ್ತಿದ್ದೇನೆ. ಬಹುಶಃ ನಾನು ಮಾಡಬೇಕಿತ್ತು. ಆದರೆ ಅಂತಹ ಅವಕಾಶ ಸಿಗಲಿಲ್ಲ. ಬೇರೆ ಕಾರಣಗಳಿಂದ ನಾನು ಮಾಡಲಾಗಲಿಲ್ಲ. ಆದರೆ ನನ್ನ ಪ್ರೀತಿ ಯಾವಾಗಲೂ ಒಂದೇ ರೀತಿ ಇರುತ್ತದೆ' ಎಂದು ಸೋನಾಲ್‌ಗೆ ಸ್ವೀಟ್ ಪ್ರಾಮಿಸ್ ಮಾಡಿದ್ದಾರೆ.

'ಈ ಮೂರು ಪದಗಳನ್ನು ಹೇಳಿದರನೇ ಪ್ರೀತಿಗೆ ಅರ್ಥ ಸಿಗುತ್ತದೆ ಎನ್ನುವುದು ಇಲ್ಲ ನನಗೆ. ಆದರೆ ಇಲ್ಲಿ ನಾನು ಆ ಅವಕಾಶವನ್ನು ಬಳಿಸಿಕೊಳ್ಳುತ್ತಿದ್ದೇನೆ. ಮಂಗಳೂರಿನಲ್ಲಿ ಮತ್ತೆ ನನ್ನನ್ನು ಮದುವೆಯಾಗುತ್ತೀಯಾ..? ಐ ಲವ್ ಯೂ' ಎಂದು ತರುಣ್ ಸುಧೀರ್ ಮಂಡಿಯೂರಿ ಸೋನಾಲ್‌ಗೆ ಪ್ರಪೋಸ್ ಮಾಡಿದ್ದಾರೆ.












Click it and Unblock the Notifications