Dhurandhar OTT Release: ರಣವೀರ್ ಸಿಂಗ್ ಧುರಂಧರ್ ಓಟಿಟಿನಲ್ಲಿ ರಿಲೀಸ್ ಆದ ಬೆನ್ನಲ್ಲೇ ರೊಚ್ಚಿಗೆದ್ದ ವೀಕ್ಷಕರು
Dhurandhar OTT Release: ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರ ಕೊನೆಗೂ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ. ಭಾರತದಾದ್ಯಂತ ಚಿತ್ರಮಂದಿರಗಳಲ್ಲಿ 1,000 ಕೋಟಿ ರೂಪಾಯಿಗೂ ಅಧಿಕ ಆದಾಯ ಗಳಿಸಿದ ಕೆಲವೇ ದಿನಗಳಲ್ಲಿ ಓಟಿಟಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚಗೆ ಕಾರಣವಾಗಿದೆ. ಯಾಕೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಮಾಹಿತಿ ಪ್ರಕಾರ ಈ ಚಿತ್ರ ಈಗಾಗಲೇ 1,300 ಕೋಟಿ ರೂಪಾಯಿ ಅಧಿಕ ಹಣವನ್ನು ಬಾಚಿದೆ. ಚಿತ್ರಮಂದಿರಗಳಲ್ಲಿ 'ಧುರಂಧರ್' ಸಿನಿಮಾವನ್ನು ಬಹುತೇಕರು ಹಲವು ಬಾರಿ ವೀಕ್ಷಣೆ ಮಾಡಿದ್ದಾರೆ. ಆದರೂ, ಸಹ ಭಾರೀ ಸಂಖ್ಯೆಯ ಸಿನಿ ಪ್ರೇಮಿಗಳು ಅದರ ಓಟಿಟಿ ಬಿಡುಗಡೆಯನ್ನೇ ಕಾದು ಕುಳಿತಿದ್ದರು. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸಿನಿಮಾ ಸ್ಟ್ರೀಮ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಆದರೆ, ಓಟಿಟಿ ಬಿಡುಗಡೆಯಾದ ಬಳಿಕ ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಕೆಲ ವೀಕ್ಷಕರು ಸಿನಿಮಾ ತಯಾರಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಕೆಲವು ಅಂಶಗಳ ಕುರಿತು ಟೀಕೆಗಳನ್ನು ಕೂಡ ಮಾಡಿದ್ದಾರೆ. ಇದರಿಂದ "ಧುರಂಧರ್" ಮತ್ತೊಮ್ಮೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡಿಂಗ್ ವಿಷಯವಾಗಿದ್ದು, ಚಿತ್ರ ಕುರಿತು ಪರಸ್ಪರ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದಕ್ಕೆ ಕಾರಣವೂ ಇದೆ. ಇಲ್ಲಿದೆ ನೋಡಿ ವೀಕ್ಷಕರು ಬಿಚ್ಚಿಡುತ್ತಿರುವ ಮಾಹಿತಿ.
ವೀಕ್ಷಕರು ಕೋಪಗೊಂಡಿದ್ದೇಕೆ?: ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ "ಧುರಂಧರ್" ಚಿತ್ರದ ಸಮಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. ಕೋಪಗೊಂಡ ವೀಕ್ಷಕರು, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗುತ್ತಿರುವುದು "ಸೆನ್ಸಾರ್ ಮಾಡಲಾದ ದೃಶ್ಯ" ಎಂದು ಆರೋಪಿಸಿದ್ದಾರೆ.
ಅಸಮಾಧಾನಕ್ಕೆ ಪ್ರಮುಖ ಕಾರಣ ಏನು?: ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿದ್ದ "ಧುರಂಧರ್" ಚಿತ್ರದ ಮೂಲ ಸಮಯ 3 ಗಂಟೆ 34 ನಿಮಿಷ ಆಗಿದ್ದರೆ, ಓಟಿಟಿಯಲ್ಲಿ ಲಭ್ಯವಿರುವ ಆವೃತ್ತಿಯ ಸಮಯ 3 ಗಂಟೆ 25 ನಿಮಿಷ ಮಾತ್ರವಾಗಿದೆ. ಅಂದರೆ, ಸುಮಾರು 9 ನಿಮಿಷಗಳ ವ್ಯತ್ಯಾಸ ಇರುವುದೇ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.
https://kannada.oneindia.com/entertainment/ranveer-singhs-blockbuster-dhurandhar-streams-on-netflix-from-today-441745.htmlಸಮಯವನ್ನು ಯಾಕೆ ಕಡಿತ ಏಕೆ ಮಾಡಲಾಗಿದೆ ಎಂಬುದರ ಬಗ್ಗೆ ನಿರ್ಮಾಪಕರು ಅಥವಾ ನೆಟ್‌ಫ್ಲಿಕ್ಸ್ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಇದರಿಂದ ಅಭಿಮಾನಿಗಳಲ್ಲಿ ಗೊಂದಲ ಹಾಗೂ ಅಸಮಾಧಾನ ಹೆಚ್ಚಿದ್ದು, ಚಿತ್ರದ ಪೂರ್ಣ ಸಮಯ ಬೇಕೆಂಬ ಬೇಡಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ.
ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭ: ಧುರಂಧರ್ ಸಿನಿಮಾ ಇದೀಗ ಅಧಿಕೃತವಾಗಿ ಓಟಿಟಿ ವೇದಿಕೆಗೆ ಕಾಲಿಟ್ಟಿದೆ. ಚಿತ್ರವು ಜನವರಿ ಅಂತ್ಯದಲ್ಲಿ ನೆಟ್‌ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆರಂಭಿಸಿದ್ದು, ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಸಾಕಷ್ಟು ಗಮನ ಸೆಳೆದ ಈ ಸಿನಿಮಾ, ಇದೀಗ ಡಿಜಿಟಲ್ ವೀಕ್ಷಕರನ್ನು ತಲುಪಿದೆ.
ಓಟಿಟಿ ರಿಲೀಸ್ ಬಳಿಕ ಚಿತ್ರದ ಅವಧಿ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕೆಲವು ದೃಶ್ಯಗಳನ್ನು ಕಡಿತಗೊಳಿಸಲಾಗಿದೆ ಎಂಬ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವು ನೆಟ್ಟಿಗರು ನಿರ್ದಿಷ್ಟ ದೃಶ್ಯಗಳು ಅಥವಾ ಸಂಭಾಷಣೆಗಳನ್ನು ತೆಗೆದು ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.
ಧುರಂಧರ್ ಚಿತ್ರವು ಗಂಭೀರ ಕಥಾಹಂದರ, ಶಕ್ತಿಶಾಲಿ ಪಾತ್ರಗಳು ಹಾಗೂ ರಾಜಕೀಯ-ಸಾಮಾಜಿಕ ದೃಶ್ಯಗಳೊಂದಿಗೆ ಗಮನ ಸೆಳೆದಿತ್ತು. ಚಿತ್ರಮಂದಿರಗಳಲ್ಲಿ ಇದು ವಿಭಿನ್ನ ಪ್ರತಿಕ್ರಿಯೆ ಪಡೆದರೂ, ಓಟಿಟಿ ಬಿಡುಗಡೆಯೊಂದಿಗೆ ಮತ್ತೊಮ್ಮೆ ಚರ್ಚೆಗೆ ಕಾರವಾಗಿದೆ.
ಥಿಯೇಟರ್‌ಗೆ ಹೋಗಲು ಸಾಧ್ಯವಾಗದ ಪ್ರೇಕ್ಷಕರಿಗೆ ಇದೀಗ ಧುರಂಧರ್ ಮನೆಮಾತಾಗಿದೆ. ವಿಶೇಷವಾಗಿ ದೀರ್ಘಾವಧಿಯ ಚಿತ್ರಗಳನ್ನೂ ಓಟಿಟಿಯಲ್ಲಿ ನೋಡಲು ಇಷ್ಟಪಡುವ ವೀಕ್ಷಕರಿಗೆ ಇದು ಉತ್ತಮ ಅವಕಾಶವಾಗಿದೆ. ಒಟ್ಟಿನಲ್ಲಿ ಧುರಂಧರ್ ಓಟಿಟಿ ರಿಲೀಸ್ ಚಿತ್ರದ ಬಗ್ಗೆ ಹೊಸ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಅಧಿಕೃತ ಸ್ಪಷ್ಟನೆ ಹೊರಬೀಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.












Click it and Unblock the Notifications