Bigg Boss: ಬಿಗ್‌ಬಾಸ್‌ನಿಂದ ಎಲಿಮಿನೇಟ್ ಆದ ಧನರಾಜ್; ಫಿನಾಲೆ ವಾರದ ಸ್ಪರ್ಧಿಗಳು ಇವರೇ

ಬಿಗ್ ಬಾಸ್ ಮುಗಿಯಲು ಇನ್ನೊಂದು ವಾರ ಮಾತ್ರ ಬಾಕಿಯಿದ್ದು ಈ ವಾರ ಡಬಲ್ ಎಲಿಮಿನೇಷನ್ ನಡೆದಿದೆ. ಶನಿವಾರ ಗೌತಮಿ ಎಲಿಮಿನೇಟ್ ಆಗಿ ಮನೆಯಿಂದ ಹೊರಬಂದಿದ್ದು, ಭಾನುವಾರ ಯಾರು ಬರುತ್ತಾರೆ ಎನ್ನುವ ಕುತೂಹಲಕ್ಕೂ ತೆರೆ ಬಿದ್ದಿದೆ. ಕಳೆದ ವಾರದ ಟಾಸ್ಕ್‌ನಲ್ಲಿ ಮಾಡಿಕೊಂಡ ಎಡವಟ್ಟಿನಿಂದ ಧನರಾಜ್ ಮನೆಯಿಂದ ಹೊರಬರುವಂತಾಗಿದೆ.

ಭಾನುವಾರ ನಡೆದ ಎಪಿಸೋಡ್‌ನಲ್ಲಿ ಧನರಾಜ್ ಎಲಿಮಿನೇಟ್ ಆಗಿದ್ದು ಮನೆಯಿಂದ ಹೊರಬಂದರು. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹಾಸ್ಯಮಯ ವಿಡಿಯೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ಧನರಾಜ್, ಬಿಗ್‌ ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದರು.

dhanraj eliminated from bigg boss kannada here the list of final week contestants

ಪುಟ್ಟ ಮಗುವನ್ನು ಬಿಟ್ಟು ಮನೆಯಲ್ಲಿ ಆಡಿದ್ದ ಧನರಾಜ್‌ ಹಲವು ಏಳು ಬೀಳುಗಳನ್ನು ಕಂಡಿದ್ದಾರೆ. ಕೊನೆಯ ವಾರಗಳಲ್ಲಿ ಅತ್ಯುತ್ತಮವಾಗಿ ಆಡಿದ್ದ ಅವರು, ಕಳೆದ ವಾರದ ಟಾಸ್ಕ್‌ನಲ್ಲಿ ಗೆಲುವು ಸಾಧಿಸಿ ಎಲಿಮಿನೇಷನ್‌ನಿಂದ ಪಾರಾಗಿದ್ದರು. ಆದರೆ ಅವರು ಆಟ ಆಡುವಾಗ ಕನ್ನಡಿ ನೋಡಿದ್ದು ಸಾಬೀತಾದ ಕಾರಣ ಟಾಸ್ಕ್ ಫಲಿತಾಂಶ ರದ್ದು ಮಾಡಿದ್ದಲ್ಲದೆ, ಧನರಾಜ್‌ರನ್ನು ಎಲಿಮಿನೇಷನ್ ಲಿಸ್ಟ್‌ಗೆ ಸೇರ್ಪಡೆ ಮಾಡಲಾಗಿತ್ತು.

ಮೊದಲು ಭವ್ಯ ಬಳಿಕ ರಜತ್ ಫಿನಾಲೆ ವಾರಕ್ಕೆ ತಲುಪಿದರು. ಬಳಿಕ ಉಗ್ರಂ ಮಂಜು ಮತ್ತು ಧನರಾಜ್ ನಡುವೆ ಯಾರು ಎಲಿಮಿನೇಟ್ ಆಗುತ್ತಾರೆ ಎನ್ನುವ ಕುತೂಹಲ ಇತ್ತು, ಅಂತಿಮವಾಗಿ ಧನರಾಜ್‌ಗೆ ಮನೆಯ ಬಾಗಿಲು ತೆರೆದಿದ್ದು ಹೊರಬಂದಿದ್ದರು.

ಫಿನಾಲೆ ವಾರ ತಲುಪಿದ್ದು ಯಾರು?

ಫಿನಾಲೆ ಟಿಕೆಟ್ ಪಡೆದುಕೊಂಡಿದ್ದ ಹನುಮಂತು ಮೊದಲು ಫಿನಾಲೆ ತಲುಪಿದ್ದರು. ಬಳಿಕ ಯಾರೂ ನಾಮಿನೇಟ್ ಮಾಡದ ಹಿನ್ನಲೆಯಲ್ಲಿ ತ್ರಿವಿಕ್ರಮ್ ಎರಡನೇ ಸ್ಪರ್ಧಿಯಾಗಿ ಫಿನಾಲೆ ವಾರಕ್ಕೆ ತಲುಪಿದ್ದರು. ಬಳಿಕ ಹನುಮಂತನಿಗೆ ಒಬ್ಬರನ್ನು ಸೇವ್ ಮಾಡಲು ಅವಕಾಶ ಸಿಕ್ಕಿದ್ದರಿಂದ ಅವರು ಮೋಕ್ಷಿತಾರನ್ನು ಆಯ್ಕೆ ಮಾಡಿದ್ದರಿಂದ, ಅವರು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಈ ಮೂವರ ಜೊತೆ ರಜತ್, ಭವ್ಯ ಮತ್ತು ಉಗ್ರಂ ಮಂಜು ಫಿನಾಲೆ ವಾರ ತಲುಪಿದ್ದಾರೆ.

ಭವ್ಯ ಕಾಲೆಳೆದ ಸುದೀಪ್‌

ಸುದೀಪ್‌ ಭವ್ಯ ಮತ್ತು ತ್ರಿವಿಕ್ರಂ ಕಾಲೆಳೆದಿದ್ದು ನೋಡುಗರಿಗೆ ಮನರಂಜನೆ ಕೊಟ್ಟಿತು. ತ್ರಿವಿಕ್ರಂ ಭವ್ಯಾಗೆ ಪ್ರಪೋಸ್ ಮಾಡಿದ್ದರ ಬಗ್ಗೆ ಮಾತಾನಡಿದ್ದು, ಗೋಲ್ಡ್‌ ಸುರೇಶ್ ಮನೆಗೆ ಬಂದಿದ್ದಾಗ ಈ ಬಗ್ಗೆ ಪ್ರಶ್ನಸಿದ ವಿಡಿಯೋ ಪ್ಲೇ ಮಾಡಿ ಇಬ್ಬರ ನಡುವೆ ಏನಿದೆ ಎಂದು ಪ್ರಶ್ನೆ ಮಾಡಿದರು. ಬಳಿಕ ಇಬ್ಬರೂ ನಮ್ಮ ನಡುವೆ ಏನಿಲ್ಲ, ಫ್ರೆಂಡ್‌ಶಿಪ್ ಅಷ್ಟೇ ಎಂದರೂ ಸುದೀಪ್‌ ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ತಡಬಡಾಯಿಸುವಂತೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+