ಸ್ಯಾಂಡಲ್‌ವುಡ್ ಅಂಗಳಕ್ಕೆ ‘ಧೈರ್ಯಂ ಸರ್ವತ್ರ ಸಾಧನಂ’ ಎಂಟ್ರಿ!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸಬರ ಸಿನಿಮಾಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗ್ತಿದೆ. ಹೀಗೆ ಬರುವ ಹೊಸಬರ ಸಿನಿಮಾಗಳು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಭಾರಿ ಸರ್ಪ್ರೈಸ್ ನೀಡಿ ರಂಜಿಸುತ್ತಿವೆ. ಅದೇ ರೀತಿ ಇದೀಗ 'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾ ಕೂಡ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಸೃಷ್ಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇನ್ನು ಹೊಸಬರ ಈ ಪ್ರಯತ್ನಕ್ಕೆ ಸೀನಿಯರ್ಸ್ ಕೂಡ ಸಾಥ್ ಕೊಡುತ್ತಿದ್ದು, ವಸಿಷ್ಠ ಕೂಡ ಬೆನ್ನುತಟ್ಟಿದ್ದಾರೆ.
ಅಷ್ಟಕ್ಕೂ ಎ.ಆರ್. ಸಾಯಿರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತ ರಚನೆಯನ್ನು ಮಾಡಿರುವ 'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಎ.ಆರ್. ಸಾಯಿರಾಮ್ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಈ ಸಿನಿಮಾಗೆ ಕೈಜೋಡಿಸಿರುವ ತಂಡ ಕೂಡ ಹೊಸಬರದ್ದು. ಹೀಗಾಗಿ ಆರಂಭದಿಂದಲೇ ಈ ಸಿನಿಮಾ ಟೈಟಲ್ ಮೂಲಕ ಸಾಕಷ್ಟು ಗಮನವನ್ನ ಸೆಳೆದಿತ್ತು. ಈಗ ಹೊಸಬರ ಸಿನಿಮಾಗೆ ನಟ ವಸಿಷ್ಠ ಸಿಂಹ ಸಾಥ್ ನೀಡಿ ಶುಭ ಹಾರೈಸಿದ್ದಾರೆ. ಟೀಸರ್ ಕೂಡ ರಿಲೀಸ್ ಮಾಡಿದ್ದಾರೆ.

'ಧೈರ್ಯಂ ಸರ್ವತ್ರ ಸಾಧನಂ' ಟೀಸರ್ ಹೇಗಿದೆ?
ಇನ್ನು ಹೊಸಬರ 'ಧೈರ್ಯಂ ಸರ್ವತ್ರ ಸಾಧನಂ' ಟೀಸರ್ ಮೇಕಿಂಗ್‌ನಲ್ಲಿ ಡಿಫರೆಂಟ್ ಆಗಿ ಕಾಣಿಸಿಕೊಂಡಿದೆ. ಹಾಗೇ ಫೈಟ್ & ಆಕ್ಷನ್ ಮೂಲಕ ಒಂದಷ್ಟು ಥ್ರಿಲ್ಲಿಂಗ್ ಕಥಾ ಹಂದರ ಹೊಂದಿದೆ ಎಂಬ ಸೂಚನೆ ಸಿಗುತ್ತಿದೆ. ಹಾಗೇ ತಂದೆಯ ಕನಸು ಈಡೇರಸಲು ಮಗ ಹೇಗೆ ಪರದಾಡುತ್ತಾನೆ? ಅನ್ನೋ ಕಥೆಯನ್ನು ಈ ಸಿನಿಮಾ ಹೇಳುತ್ತೆ, ಜೊತೆಗೆ ತಂದೆ & ಮಗನ ಬಾಂಧವ್ಯದ ಬಗ್ಗೆಯೂ ವಿವರಿಸಲಿದೆ ಅಂತಿದೆ ಸಿನಿಮಾ ತಂಡ.
ವಸಿಷ್ಠ ಸಿಂಹ ಹೇಳಿದ್ದೇನು?
ಇನ್ನು ಟೀಸರ್ ಬಿಡುಗಡೆ ಮಾಡಿ ಮಾತನಾಡಿರುವ ನಟ ವಸಿಷ್ಠ ಸಿಂಹ, ಸಿನಿಮಾದ ಕುರಿತು ಟೀಸರ್ ಕುತೂಹಲ ಕೆರಳಿಸಿದೆ ಎಂದಿದ್ದಾರೆ. ಹಾಗೇ ಈ ಕುತೂಹಲಕ್ಕೆ ಉತ್ತರ ಪಡೆಯಲು ಥಿಯೇಟರ್‌ಗೆ ಬರಬೇಕು ಎಂದಿದ್ದಾರೆ. ಹಾಗೆ ಮತ್ತೊಂದು ಕಡೆ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನಿರ್ದೇಶನ ಮಾಡಿದ್ದ ಪಾ.ರಂಜಿತ್ ಡಿಜಿಟಲ್‌ನಲ್ಲಿ ಟೀಸರ್ ಬಿಡುಗಡೆ ಮಾಡಿ, ಚಿತ್ರ ನೋಡಲು ನಾನು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಹೀಗಾಗಿ ಸಿನಿಮಾ ಟೀಸರ್ ಈಗ ಗಮನ ಸೆಳೆಯುತ್ತಿದೆ.

ಬಂಡವಾಳ ಹಾಕಿರುವುದು ಯಾರು?
ಅಂದಹಾಗೆ ಎ.ಪಿ.ಪ್ರೊಡಕ್ಷನ್ ಅಡಿ ಉದ್ಯಮಿ ಆನಂದ್ ಬಾಬು.ಜಿ ನಿರ್ಮಾಣ ಮಾಡಿದ್ದಾರೆ. ನಾಯಕನಾಗಿ ವಿವಾನ್.ಕೆ.ಕೆ & ನಾಯಕಿಯಾಗಿ ಅನುಷಾ ರೈ, ವಿಶಿಷ್ಟ ಪಾತ್ರಗಳಲ್ಲಿ ಯಶ್ ಶೆಟ್ಟಿ, ಬಲರಾಜ ವಾಡಿ, ಚಕ್ರವರ್ತಿ ಚಂದ್ರಚೂಡ್, ವರ್ಧನ್, ಪ್ರದೀಪ್ ಪೂಜಾರಿ ರಾಮ್ ಪವನ್ ನಟಿಸಿದ್ದಾರೆ. ಹಾಗೇ ಪದ್ಮಿನಿ ಶೆಟ್ಟಿ, ಅರ್ಜುನ್ ಪಾಳೆಗಾರ ಮತ್ತೆ ರಾಮ್ ನಾಯಕ್, ಹೊಂಗಿರಣ ಚಂದ್ರು ಈ ಸಿನಿಮಾದ ತಾರಾ ಬಳಗದಲ್ಲಿ ಇದ್ದಾರೆ. ಜೊತೆಗೆ ಹೊಸಬರಿಗೂ ಹೆಚ್ಚಿನ ಅವಕಾಶವನ್ನು 'ಧೈರ್ಯಂ ಸರ್ವತ್ರ ಸಾಧನಂ' ಸಿನಿಮಾದಲ್ಲಿ ನೀಡಲಾಗಿದೆ.
ಈ ಸಿನಿಮಾಗೆ ಹೃದಯಶಿವ, ಕಿನ್ನಾಳ್ ರಾಜ್, ಅರಸು ಅಂತಾರೆ ಸಾಹಿತ್ಯ ಬರೆದಿದ್ದಾರೆ. ಈ ಮೂಲಕ ಐದು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತವನ್ನ ಸಂಯೋಜಿಸಿದ್ದಾರೆ. ಭಾರತದ ಹಲವು ಭಾಷೆ ಚಿತ್ರಗಳಿಗೆ ಕೆಲಸ ಮಾಡಿರುವ ರವಿಕುಮಾರ್ ಸನಾ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಚಂದ್ರು ಸಾಹಸ, ಕ್ಯಾಪ್ಟನ್ ಕಿಶೋರ್ ನೃತ್ಯ ಇರಲಿದೆ. ತುಮಕೂರು ಸೇರಿದಂತೆ, ಕೊರಟಗೆರೆ, ದೇವರಾಯನದುರ್ಗದ ಸುಂದರ ಜಾಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನೂ ಈ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಅಂತಿಮ ಹಂತದ ಸಿದ್ಧತೆಗಳನ್ನ ಸಿನಿಮಾ ತಂಡ ಮಾಡಿಕೊಳ್ಳುತ್ತಿದೆ.












Click it and Unblock the Notifications