Darshan: ಬಳ್ಳಾರಿ ಜೈಲಿನಿಂದ ಹೊರಬರುತ್ತಿದ್ದಂತೆ ಈ ಕೆಲಸ ಮಾಡಲಿದ್ದಾರೆ ದರ್ಶನ್‌

ನಟ ದರ್ಶನ್ ತೂಗುದೀಪ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಲಾಗಿದೆ. ದರ್ಶನ್‌ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರ ಏಕಸದಸ್ಯ ಪೀಠ, ದರ್ಶನ್‌ಗೆ ಸಂಬಂಧಿಸಿದ ಆರೋಗ್ಯ ವರದಿ ಸಲ್ಲಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದು, ಪ್ರಾಸಿಕ್ಯೂಷನ್‌ಗೆ ಆಕ್ಷೇಪಣೆ ಸಲ್ಲಿಸಲು ಕೇಳಿದೆ.

ದರ್ಶನ್ ಪರ ಹಿರಿಯ ವಕೀಲರಾದ ಸಿ.ವಿ ನಾಗೇಶ್ ವಾದ ಮಂಡಿಸಿದ್ದು, ದರ್ಶನ್ ಬೆನ್ನುಹುರಿ ನೋವಿನಿಂದ ಬಳಲುತ್ತಿದ್ದು, ವಿಜಯನಗರ ವೈದ್ಯಕೀಯ ಸಂಸ್ಥೆಯಲ್ಲಿ (ವಿಮ್ಸ್‌) ಸೋಮವಾರ ಎಂಆರ್‌ಐ ಸ್ಕ್ಯಾನ್‌ ಮಾಡಿಸಗಿದ್ದು. ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದು, ಸೂಕ್ತ ಚಿಕಿತ್ಸೆ ಪಡೆಯಲು ಅವರಿಗೆ ಜಾಮೀನು ಕೊಡಬೇಕು" ಎಂದು ಮನವಿ ಮಾಡಿದ್ದಾರೆ.

Darshan will do this after release from Ballari jail

ಅಕ್ಟೋಬರ್ 28ರಂದು ವೈದ್ಯರ ವರದಿ ಕೋರ್ಟ್ ಕೈಸೇರಲಿದ್ದು ಬಳಿಕ ಕೋರ್ಟ್ ಜಾಮೀನು ಕೊಡುವ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ. ದರ್ಶನ್ ಕೂಡ ಜಾಮೀನು ಸಿಕ್ಕರೆ ಸಾಕು ಎಂದು ಕಾಯುತ್ತಿದ್ದಾರೆ.

ಹೊರಗೆ ಬಂದ ತಕ್ಷಣ ಆಸ್ಪತ್ರೆಗೆ ದಾಖಲು

ಸದ್ಯ ದರ್ಶನ್‌ ನಡೆದಾಡಲು ಕೂಡ ಕಷ್ಟಪಡುತ್ತಿದ್ದಾರೆ, ವೈದ್ಯರ ಶಿಫಾರಸ್ಸಿನ ಬಳಿಕ ಜೈಲು ಅಧಿಕಾರಿಗಳು ಅವರಿಗೆ ಮೆಡಿಕಲ್ ಬೆಡ್ ಮತ್ತು ದಿಂಬು ಕೊಟ್ಟಿದ್ದರೂ ಅವರ ಬೆನ್ನು ನೋವಿಗೆ ಪರಿಹಾರ ಸಿಕ್ಕಿಲ್ಲ. ಜೈಲಿನಲ್ಲೇ ಅವರಿಗೆ ಫಿಸಿಯೋಥೆರಪಿ ಕೂಡ ನೀಡಲಾಗಿದೆ. ಆದರೂ ಬೆನ್ನು ನೋವು ಕಡಿಮೆಯಾಗುತ್ತಿಲ್ಲ, ದರ್ಶನ್‌ಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

ಜಾಮೀನು ಸಿಕ್ಕ ತಕ್ಷಣವೇ ಬಳ್ಳಾರಿ ಜೈಲಿನಿಂದ ಹೊರಬರುತ್ತಿದ್ದಂತೆ ಆಸ್ಪತ್ರೆಗೆ ದಾಖಲಾಗಿ ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ದರ್ಶನ್ ನಿರ್ಧರಿಸಿದ್ದಾರೆ. ಬಳ್ಳಾರಿಯಲ್ಲಿ ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಕೂಡ ಅವರು ನಿರಾಕರಿಸಿದ್ದರು. ಆದರೆ ನೋವು ಹೆಚ್ಚಾದ ಬಳಿಕ ಜೈಲು ಸಿಬ್ಬಂದಿ ದರ್ಶನ್‌ರ ಜೊತೆ ಮಾತನಾಡಿದ್ದು ಎಂಆರ್ ಐ ಸ್ಕ್ಯಾನಿಂಗ್ ಮಾಡಿಸಲು ಒಪ್ಪಿಕೊಂಡಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೊದಲು ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲಿರುವ ದರ್ಶನ್ ಬಳಿಕ ಪತ್ನಿ ಹರಕೆ ಹೊತ್ತಿರುವ ದೇವಸ್ಥಾನಗಳಿಗೆ ತೆರಳಿ ಹರಕೆ ತೀರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಾದ ಬಳಿಕ ತಮ್ಮ ನೆಚ್ಚಿನ ಫಾರ್ಮ್‌ಹೌಸ್‌ಗೆ ಕೂಡ ತೆರಳಿ ನೆಚ್ಚಿನ ಪ್ರಾಣಿ, ಪಕ್ಷಿಗಳ ಯೋಗ ಕ್ಷೇಮ ವಿಚಾರಿಸಲಿದ್ದಾರೆ ಎನ್ನಲಾಗಿದೆ.

ದರ್ಶನ್‌ಗೆ ಮಂಗಳವಾರ ಜಾಮೀನು ಸಿಗುತ್ತದೆ ಎಂದು ಕಾದಿದ್ದ ಅಭಿಮಾನಿಗಳು, ಕುಟುಂಬಸ್ಥರಿಗೆ ನಿರಾಸೆಯಾಗಿದೆ. ಆದರೂ ಕೋರ್ಟ್ ದರ್ಶನ್‌ರ ವೈದ್ಯಕೀಯ ವರದಿ ಕೇಳಿದ್ದು, ಅದೇ ಬೆನ್ನು ನೋವು ಅವರಿಗೆ ಜಾಮೀನು ಸಿಗಲು ಕಾರಣವಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಅಕ್ಟೋಬರ್ 28ರಂದೇ ಜಾಮೀನು ಸಿಕ್ಕರೆ ದರ್ಶನ್ ಅಭಿಮಾನಿಗಳು ಎರಡು ದಿನ ಮೊದಲೇ ದೀಪಾವಳಿ ಆಚರಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+