Darshan Thoogudeepa: ದರ್ಶನ್ ಇನ್ನು ನಟಿಸೋದೇ ಕಷ್ಟ!, ಆ್ಯಕ್ಷನ್ ಸಿನಿಮಾ ಮಾಡೋದು, ಭರ್ಜರಿ ಸ್ಟೆಪ್ಸ್ ಹಾಕೋದು ಡೌಟ್!
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಅನಾರೋಗ್ಯ ಕಾರಣ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಬಳ್ಳಾರಿ ಜೈಲಿನಲ್ಲಿ ದರ್ಶನ್‌ಗೆ ಬೆನ್ನು ನೋವು ಹೆಚ್ಚಾದ ಕಾರಣ ಅವರಿಗೆ ಸರ್ಜರಿ ಮಾಡಿಸುವ ಅವಶ್ಯಕತೆ ಇದೆ ಎಂದು ವೈದ್ಯರು ಹೇಳಿದ ಬೆನ್ನಲ್ಲೇ ದರ್ಶನ್‌ಗೆ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿದೆ. ಆದರೆ ದರ್ಶನ್ ಜೈಲಿನಿಂದ ಹೊರ ಬಂದು ಸುಮಾರು ದಿನಗಳೇ ಕಳೆದರು ಕೂಡ ಸರ್ಜರಿ ಮಾಡಿಸಿಕೊಂಡಿಲ್ಲ. ಯಾಕೆಂದರೆ ದರ್ಶನ್ ಸರ್ಜರಿ ಮಾಡಿಸಿಕೊಂಡರೆ ಮುಂದೆ ಅವರ ನಟನಾ ವೃತ್ತಿಗೆ ಅದು ದೊಡ್ಡ ಸಮಸ್ಯೆ ಆಗಲಿದೆ.
ಹೌದು... ದರ್ಶನ್‌ಗೆ ಕೋರ್ಟ್ ಜಾಮೀನು ನೀಡಿರುವುದು ಸರ್ಜರಿ ಮಾಡಿಸಿಕೊಳ್ಳಲೆಂದು. ಆದರೆ ದರ್ಶನ್ ಈವರೆಗೂ ಸರ್ಜರಿ ಮಾಡಿಸಿಕೊಂಡಿಲ್ಲ. ಇದರಿಂದಾಗಿ ದರ್ಶನ್ ಆರು ವಾರಗಳಿಗೂ ಮೊದಲೇ ಮತ್ತೆ ಜೈಲಿಗೆ ಹೋಗಬೇಕಾದ ಅನಿವಾರ್ಯ ಎದುರಾಗುವ ಸಂಕಷ್ಟ ಶುರುವಾಗಿದೆ. ದರ್ಶನ್ ಒಂದು ವೇಳೆ ಸರ್ಜರಿ ಮಾಡಿಸಿಕೊಂಡರೆ ಅದಕ್ಕೂ ನಾನಾ ಸಮಸ್ಯೆಗಳು ಎದುರಾಗುವ ಲಕ್ಷಣಗಳು ಇವೆ. ಹಾಗಾದರೆ ದರ್ಶನ್ ಸರ್ಜರಿ ಮಾಡಿಸಿಕೊಳ್ಳುತ್ತಿಲ್ಲ ಯಾಕೆ?

ದರ್ಶನ್ ಸರ್ಜರಿ ಮಾಡಿಸಿಕೊಳ್ಳಲು ಹಿಂದೇಟಾಕುತ್ತಿರುವುದೇಕೆ?
ದರ್ಶನ್ ಅವರಿಗೆ ಸರ್ಜರಿ ಮಾಡಿದರೆ ಮುಂದೆ ಅವರ ನಟನಾ ವೃತ್ತಿಗೆ ಅದು ದೊಡ್ಡ ಸಮಸ್ಯೆ ಆಗಲಿದೆ. ಹೆಚ್ಚಾಗಿ ಸಾಹಸಮಯ ಪಾತ್ರಗಳಲ್ಲಿ ನಟಿಸುವ ದಚ್ಚು ಭವಿಷ್ಯದಲ್ಲಿ ಆಕ್ಷನ್ ಸಿನಿಮಾಗಳಲ್ಲಿ ನಟಿಸಲು ಆಗೋದಿಲ್ಲ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ರಿಸ್ಕ್ ತೆಗೆದುಕೊಂಡು ಇನ್ಮುಂದೆ ಸ್ಟೆಪ್ಸ್ ಹಾಕೋದು ಕೂಡ ಅನುಮಾನ ಇದೆ. ಇದೇ ಕಾರಣಕ್ಕೆ ದರ್ಶನ್ ಆಪರೇಷನ್ ಬೇಡ ಎನ್ನುತ್ತಿದ್ದಾರಂತೆ. ಹಾಗಾದರೆ ಡಿಬಾಸ್ ಸದ್ಯಕ್ಕೆ ಅವರ ಬೆನ್ನು ನೋವಿಗೆ ಯಾವ ರೀತಿ ಚಿಕಿತ್ಸೆ ಪಡೆಯುತ್ತಾರೆ ಅನ್ನೋದೇ ಅವರ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.
ವೈದ್ಯರ ಸಲಹೆ ಏನು?
ಫಿಸಿಯೋಥೆರಪಿಯಿಂದ ದರ್ಶನ್ ಅವರನ್ನು ವಾಸಿ ಮಾಡಬಹುದು ಅನ್ನೋದು ವೈದ್ಯರ ನಂಬಿಕೆ. ಆದರೆ ಫಿಸಿಯೋಥೆರಪಿ ಫಲಿತಾಂಶ ಕೊಡಲು ಸರಿಸುಮಾರು ಐದಾರು ತಿಂಗಳು ಬೇಕಾಗುತ್ತದೆ. ಸದ್ಯ ದರ್ಶನ್‌ಗೆ ಸಿಕ್ಕಿರುವ ಮಧ್ಯಂತರ ಜಾಮೀನಿನ ಅವಧಿ ಕೇವಲ ಆರು ವಾರಗಳು ಅಷ್ಟೇ. ಅದರಲ್ಲಿ ಈಗಾಗಲೇ ಮೂರು ವಾರಗಳು ಮುಗಿದಿವೆ. ಹೀಗಾಗಿ ದರ್ಶನ್ ಬಳಿ ಹೆಚ್ಚು ಸಮಯವೂ ಇಲ್ಲ. ಹಾಗಾಗಿ ವೈದ್ಯರು ಶಸ್ತ್ರಚಿಕಿತ್ಸೆಗಾಗಿ ದರ್ಶನ್ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ ಇತ್ತ ದರ್ಶನ್ ಮಧ್ಯಂತರ ಜಾಮೀನು ರದ್ದತಿಗೆ ಬೆಂಗಳೂರು ಪೊಲೀಸರು ನ್ಯಾಯಾಲಯ ಮೊರೆ ಹೋಗಿದ್ದಾರೆ.

ದರ್ಶನ್‌ಗೆ ನೀಡಿರುವ ಮಧ್ಯಂತರ ಜಾಮೀನು ವಜಾಗೊಳಿಸುವಂತೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ರಾಜ್ಯ ಪೊಲೀಸರ ಪ್ರಸ್ತಾಪಕ್ಕೆ ಗೃಹ ಇಲಾಖೆ ಅನುಮತಿ ನೀಡಿದ್ದು ಮುಂದಿನ ವಾರ ಅರ್ಜಿ ಸಲ್ಲಿಸಲು ಸಿದ್ಧತೆಗಳು ನಡೆದಿವೆ.
ದರ್ಶನ್ ನಂಬಿ ನಿರ್ಮಾಪಕರಿಂದ ಕೋಟ್ಯಾಂತರ ರೂ. ಬಂಡವಾಳ
ನಟ ದರ್ಶನ್ ಅವರನ್ನು ನಂಬಿ ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಬಂಡವಾಳವನ್ನು ಹಾಕಿದ್ದಾರೆ. ಒಂದು ವೇಳೆ ದರ್ಶನ್ ಶಸ್ತ್ರಚಿಕಿತ್ಸೆಯ ನಂತರ ಅಭಿನಯಕ್ಕೆ ಬ್ರೆಕ್ ತೆಗೆದುಕೊಂಡರೂ ಕೂಡ ನಿರ್ಮಾಪಕರಿಗೆ ಸಮಸ್ಯೆಯಾಗಲಿದೆ. ಅಲ್ಲದೆ ಭವಿಷ್ಯದಲ್ಲಿ ಅವರಿಗೆ ರೆಗ್ಯೂಲರ್ ಜಾಮೀನು ಸಿಗದೇ ಹೋದರೆ ಸಿನಿಮಾಗಳೇ ನಿಂತು ಹೋಗುವ ಆತಂಕವಿದೆ. ಒಟ್ಟಾರೆ ದರ್ಶನ್ ಸಿನಿಮಾಕ್ಕೆ ಕೋಟಿ ಕೋಟಿ ಹಣ ಸುರಿದಿರುವ ನಿರ್ಮಾಪಕರು ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಜೊತೆಗೆ ಫಿಸಿಯೋಥೆರಪಿ ಮಾಡಿದ ನಂತರ ದರ್ಶನ್ ಹುಷಾರ್ ಆಗಲು ಕನಿಷ್ಠ ಮೂರರಿಂದ ನಾಲ್ಕು ತಿಂಗಳು ಬೇಕು. ಹಾಗಂತ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಅವರೇನು ಎದ್ದು ಕುಣಿದಾಡಿ ಬಿಡುವುದಿಲ್ಲ. ಆಪರೇಷನ್ ನಂತರವೂ ವಿಶ್ರಾಂತಿ ಬೇಕೇ ಬೇಕು. ಇದೆಲ್ಲರ ನಂತರ ದರ್ಶನ್ ಅವರಿಗೆ ರೆಗ್ಯೂಲರ್ ಜಾಮೀನು ಸಿಕ್ಕು ಅವರಿಗೆ ಸಿನಿಮಾದಲ್ಲಿ ಭಾಗವಹಿಸುವ ಅವಕಾಶ ಸಿಗಬೇಕು. ಇವೆಲ್ಲಾ ಆದಾಗ ಮಾತ್ರ ಡೆವೆಲ್ ಈಸ್ ಬ್ಯಾಕ್ ಅನ್ನಬಹುದು. ಅಲ್ಲಿವರೆಗೂ ದರ್ಶನ್ ತೆರೆ ಮೇಲೆ ಕಾಣಿಸುವುದು ಡೌಟ್ ಎನ್ನುತ್ತಿವೆ ಬಲ್ಲ ಮೂಲಗಳು..












Click it and Unblock the Notifications