Darshan Thoogudeepa: ಜೈಲಿನಲ್ಲಿ ಹಠ ಹಿಡಿದಿದ್ದ ನಟ 'ದರ್ಶನ್' ಭೇಟಿ ಮಾಡಿ ಫ್ಯಾನ್ಸ್ ಮನಗೆದ್ದ ಪತ್ನಿ 'ವಿಜಯಲಕ್ಷ್ಮೀ'
ಬೆಂಗಳೂರು, ಅಕ್ಟೋಬರ್ 23: ಹತ್ಯೆ ಪ್ರಕರಣದಲ್ಲಿ ಕಳೆದ 120 ದಿನಗಳಿಂದಲೂ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ತೂಗುದೀಪ್ (Darshan Thoogudeepa) ಪರವಾಗಿ ನಡೆದುಕೊಂಡ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ ಹೆಸರು ವಿವಿಧ ವಿಚಾರವಾಗಿ ಪ್ರಸ್ತಾಪವಾಗುತ್ತಲೇ ಇರುತ್ತದೆ. ಇದೀಗ ಬಳ್ಳಾರಿ ಜೈಲಿನಲ್ಲಿ ನಟ ದರ್ಶನ್ ಭೇಟಿ ಮಾಡುವ ಮುಖೇನ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಈ ಮೂಲಕ ಫ್ಯಾನ್ಸ್ ಮತ್ತೊಮ್ಮೆ ಇವರು ನಮ್ಮತ್ತಿಗೆ ಎಂದು ಕೊಂಡಾಡುತ್ತಿದ್ದಾರೆ.
ನಟ ದರ್ಶನ್ ಸಿನಿಮಾಗಳು, ನಟನೆ, ತಮ್ಮ ನೇರ ಮಾತುಗಳಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಸ್ಟಾರ್ ನಟನ ಬಂಧನದಿಂದ ಅತೀವ ದುಃಖದಲ್ಲಿರುವ ಅಭಿಮಾನಿಗಳಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಬಳ್ಳಾರಿ ಜೈಲು ಭೇಟಿಯಿಂದ ಒಂದಷ್ಟು ನಿರಾಳರಾಗಿದ್ದಾರೆ. ದರ್ಶನ್ ಬಂಧನದಿಂದ ಇಲ್ಲಿಯವರೆಗೆ ಪತಿಗೆ ಜಾಮೀನು ಕೊಡಿಸಲು ವಿಜಯಲಕ್ಷ್ಮೀ ಅವರು ನಿರಂತರ ಹೋರಾಟ ನಡೆಸುತ್ತಿದ್ದಾರೆ. ಅನೇಕ ವಕೀಲರನ್ನು ಭೇಟಿ ಮಾಡಿದ್ದಾರೆ. ಜೈಲುಗಳಿಗೆ ಭೇಟಿ ನೀಡಿ ಪತಿಗೆ ಧೈರ್ಯ ಹೇಳಿದ್ದಾರೆ. ಅವರ ಈ ನಡೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಪತ್ನಿ ಎಂದರೆ ಹೀಗಿರಬೇಕು ಎಂದೆಲ್ಲ ಶಹಬ್ಬಾಶ್‌ಗಿರಿ ಕೊಟ್ಟಿದ್ದಾರೆ.

ಮನವೊಲಿಕೆ ಬಳಿಕ ದರ್ಶನ್ ವಿಮ್ಸ್‌ಗೆ ದಾಖಲು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ನಟ ದರ್ಶನ್ ಅನ್ನು ಎರಡೂವರೆ ತಿಂಗಳ ಬಳಿಕ ಬಳ್ಳಾರಿ ಜೈಲಿಗೆ ಶೀಫ್ಟ್ ಮಾಡಲಾಗಿತ್ತು. ದಿನಗಳಂತೆ ದರ್ಶನ್ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡರಾದರೂ ಇದೀಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನನ್ನೆಯಷ್ಟೇ ಅವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೊಂಡು ಹಠ ಹಿಡಿದಿದ್ದ ನಟ ದರ್ಶನ್
ಈ ಆಸ್ಪತ್ರೆಗೆ ದಾಖಲಾಗುವ ಒಂದೆರಡು ವಾರಗಳ ಮೊದಲೇ ಆರೋಪಿ ನಟ ದರ್ಶನ್ ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ಆದರೆ ದಶನ್ ಬೆನ್ನು ನೋವಿಗೆ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದಿಲ್ಲ. ನನ್ನನ್ನು ಬೆಂಗಳೂರಿಗೆ ಸ್ಥಳಾಂತರಿಸಿ, ಅಲ್ಲಿಯೇ ನಾನು ಚಿಕಿತ್ಸೆ ಪಡೆದುಕೊಳ್ಳುತ್ತೇನೆ ಎಂದು ಹಠ ಹಿಡಿದಿದ್ದರು. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಮುಂದೆ ಹೇಗೆ ಎಂದು ಜೈಲಾಧಿಕಾರಿಗಳು ಒದ್ದಾಡುತ್ತಿದ್ದರು.
ಜೈಲಾಧಿಕಾರಿಗಳು ಬೆಂಗಳೂರಿಗೆ ಶಿಫ್ಟ್ ಮಾಡುವ ಸಾಧ್ಯತೆ ಪರಿಶೀಲಿಸಿದಾಗ ಅದಕ್ಕೆ ಅವಕಾಶ ಇಲ್ಲ ಎಂಬುದು ಗೊತ್ತಾಗಿದೆ. ಬಳಿಕ ದರ್ಶನ್ ಮನವೊಲಿಸಲು ಪರಿ ಪರಿಯಾಗಿ ಪ್ರಯತ್ನಿಸಿದ್ದಾರೆ. ಬೆನ್ನು ನೋವು ಜಾಸ್ತಿಯಾಗುವ ಮೊದಲೇ ಆರೈಕೆ ಪಡೆಯುವಂತೆ ಒತ್ತಾಯಿಸಿದ್ದಾರೆ. ಆದರೆ ಜೈಲಾಧಿಕಾರಿಗಳು ಮನವಿಗೆ ಸ್ಪಂದಿಸದ ದರ್ಶನ್ ಮೊಂಡು ಹಠ ಪ್ರದರ್ಶಿಸಿದ್ದರು ಎನ್ನಲಾಗಿದೆ.

ಕಾಡಿತ್ತು ತೀವ್ರ ಬೆನ್ನು ನೋವು
ಜೈಲಿನಲ್ಲಿ ಸಹ ಚಿಕಿತ್ಸೆ ಪಡೆಯುವುದಿಲ್ಲ ಎಂದಿದ್ದ ದರ್ಶನ್ ಆಪ್ತರ ಭೇಟಿ ವೇಳೆ ಬೆನ್ನು ಮೇಲೆ ಕೈ ಇಟ್ಟುಕೊಂಡ ವಿಡಿಯೋಗಳು ಮಾಧ್ಯಮದಲ್ಲಿ ಪ್ರಸಾರವಾಗಿದೆ. ಹೀಗೆ ಆರೋಗ್ಯ ಸಂಕಷ್ಟ ಎದುರಾದರೂ ಪಟ್ಟು ಸಡಿಲಿಸಿರಲಿಲ್ಲ. ಕೊನೆಗೆ ವೈದ್ಯತರನ್ನು ಆಸ್ಪತ್ರೆಗೆ ಕರೆಯಿಸಿ ಚಿಕಿತ್ಸೆ ಕೊಡಿಲಾಗುತ್ತಿತ್ತು. ಅಷ್ಟರಲ್ಲಾಗಲೇ ಸ್ಕ್ಯಾನಿಂಗ್, ಇನ್ನಿತರ ಆರೋಗ್ಯ ಆರೈಕೆ ಅಗತ್ಯವಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ತಿಳಿಸಲಾಯಿತು.
ಆದರೆ ನಟ ದರ್ಶನ್ ಆಸ್ಪತ್ರೆಗೆ ಬರಲು ಒಪ್ಪಲಿಲ್ಲ. ಇತ್ತ ನಟ ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿರುವ ವಿಚಾರ ಅಭಿಮಾನಿಗಳಿಗೆ ತಿಳಿದು ಚಿಕಿತ್ಸೆ ಪಡೆಯುವಂತೆ ಅವರು ಒತ್ತಾಯಿಸಿದ್ದಾರೆ. ನಟ ದರ್ಶನ್‌ಗಾಗಿ ಪ್ರಾರ್ಥಿಸುತ್ತಿದ್ದರು. ಇದೀಗ ಬಳ್ಳಾರಿ ಜೈಲಿಗೆ ಭೇಟಿ ನೀಡಿ ಪತ್ನಿ ವಿಜಯಲಕ್ಷ್ಮೀ ಅವರು ಪತಿಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪತಿ ಮನವೊಲಿಸಿ ಮನಗೆದ್ದ ವಿಜಯಲಕ್ಷ್ಮೀ ದರ್ಶನ್
ಜೈಲಾಧಿಕಾರಿಗಳು ಮಾಡದ ಕೆಲಸವನ್ನು ಪತ್ನಿ ವಿಜಯಲಕ್ಷ್ಮೀ ದರ್ಶನ್ ಒಂದೇ ದಿನದಲ್ಲಿ ಮಾಡಿ ಮುಗಿಸಿದ್ದಾರೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ಗೆ ತಿಳಿಹೇಳಿ ಬಳ್ಳಾರಿಯಲ್ಲಿಯೇ ಚಿಕಿತ್ಸೆ ಕೊಡಿಸಲು ಒಪ್ಪಿಸಿದ್ದಾರೆ. ಪತ್ನಿ ಮಾತಿಗೆ ಒಪ್ಪಿದ ನಟ ದರ್ಶನ್ ಅನ್ನು ಇಲ್ಲಿನ ವಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಸ್ಕ್ಯಾನಿಂಗ್ ಇನ್ನಿತರ ಪರೀಕ್ಷೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಪತಿಗೆ ಬೆನ್ನೆಲುಭಾಗಿ ನಿಂತ ಪತ್ನಿ ವಿಜಯಲಕ್ಷ್ಮೀ ಪತಿಯ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಿದ್ದಂತೆ ಅಭಿಮಾನಿಗಳು ನಿರಾಳಗಾಗಿದ್ದಾರೆ. ಅಂತೂ ಇಂತೂ ದರ್ಶನ್‌ಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ನಿಟ್ಟುಸಿರು ಬಿಟ್ಟ ಫ್ಯಾನ್ಸ್ ಅತ್ತಿಗೆಗೆ ಥ್ಯಾಕ್ಸ್ ಹೇಳಿದ್ದಾರೆ. ದರ್ಶನ್ ಬಂಧನ ಬಳಿಕ ಅಭಿಮಾನಿಗಳಿಗೆ ಧೈರ್ಯ ತುಂಬಿದ್ದ ವಿಜಯಲಕ್ಷ್ಮೀ ಅವರು ಮತ್ತೊಮ್ಮೆ ಫ್ಯಾನ್ ಮನಗೆದ್ದಿದ್ದಾರೆ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications