ದಾಸನ ಪತ್ನಿ ಕೈಯಲ್ಲಿ ದುಬಾರಿ ಪರ್ಸ್- ಬೆಲೆ ಎಷ್ಟು ಗೊತ್ತಾ?

ಸ್ಯಾಂಡಲ್‌ವುಡ್ ನಟ ದರ್ಶನ್ ಕೆಲ ತಿಂಗಳ ಕಾಲ ಜೈಲಿನಲ್ಲಿ ಇದ್ದು ಬಂದವರು. ಅನಾರೋಗ್ಯ ಕಾರಣಕ್ಕೆ ಮಧ್ಯಂತರ ಜಾಮೀನು ಪಡೆದು ಹೊರ ಬಂದ ದರ್ಶನ್ ಮತ್ತೆ ಜೈಲಿಗೆ ಹೋಗಲೇ ಇಲ್ಲ. ಹೊರಗಡೆ ಬಂದ ಬಳಿಕ ಪೂರ್ಣಾವಧಿ ಜಾಮೀನು ಪಡೆದರು. ಅದಾದ ಬಳಿಕ ರಾಜ್ಯದಲ್ಲೆಡೆ ಸುತ್ತಾಡಲು ಅನುಮತಿ ಪಡೆದರು, ಬಳಿಕ ದೇಶದಾದ್ಯಂತ ಸುತ್ತಾಡಲು ಕೂಡ ಅವರಿಗೆ ಕೋರ್ಟ್ ಅನುಮತಿ ನೀಡಿತು. ತಮಗೆ ಅಂಟಿಕೊಂಡಿದ್ದ ಸಂಕಷ್ಟಗಳ ಕೊಂಡಿಗಳನ್ನು ಕಳಚುತ್ತಾ ಬಂದ ದರ್ಶನ್ ಅವರಿಗೆ ಇದೀಗ ಸುಪ್ರೀಂ ಸಂಕಷ್ಟ ಶುರುವಾಗಿದೆ. ಇದೆಲ್ಲದರ ನಡುವೆ ಪತ್ನಿ ವಿಜಯಲಕ್ಷ್ಮೀ ಅವರ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಹೌದು ಸಾಮಾನ್ಯವಾಗಿ ವಿಜಯಲಕ್ಷ್ಮೀ ಅವರು ಎಲ್ಲಾದರೂ ಹೋದರೆ ಆ ಸ್ಥಳದ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ಅವರು ಶೇರ್ ಮಾಡಿಕೊಂಡ ಫೋಟೋ ವೈರಲ್ ಆಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಜಯಲಕ್ಷ್ಮೀ ಕೈಯಲ್ಲಿ ಇದ್ದ ಬ್ಯಾಗ್ ಬೆಲೆ ಬಗ್ಗೆ ಜನ ಮಾತನಾಡಲು ಶುರು ಮಾಡಿದ್ದಾರೆ.

darshan thoogudeepa wife vijaya lakshmi purse rate viral on social media

ವಿಜಯಲಕ್ಷ್ಮೀ ಅವರು ಇತ್ತೀಚೆಗೆ ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದರು. ಆ ಫೋಟೋಗಳಲ್ಲಿ ಅವರು ಆರೆಂಜ್ ಕಲರ್ ಡ್ರೆಸ್ ಹಾಕಿಕೊಂಡಿದ್ದಾರೆ. ಜೊತೆಗೆ ಕೈಯಲ್ಲಿ ಒಂದು ಪರ್ಸ್ ಹಿಡಿದುಕೊಂಡಿದ್ದಾರೆ. ವಿಜಯಲಕ್ಷ್ಮೀ ಅವರು ಯಾವುದಾದರೂ ಸ್ಥಳ, ಹೋಟೆಲ್ ಹೋದರೆ ಅಥವಾ ರೆಸಾರ್ಟ್‌ಗೆ ಹೋದರೆ ಅಲ್ಲಿನ ವಿಶೇಷವಾಗಿರುವ ಫುಡ್ ಅಥವಾ ಕಾಫಿ ಇನ್ನಿತರ ಪೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಇದೆಲ್ಲದರ ಜೊತೆಗೆ ಇದೀಗ ಅವರ ಕೈಯಲ್ಲಿ ಇದ್ದ ಬ್ಯಾಗ್ ಬಾರೀ ಸುದ್ದಿಯಾಗಿದೆ. ಅವರ ಕೈಯಲ್ಲಿ ಇದ್ದ ಬಾಗ್ ಬೆಲೆ ಕೇಳಿ ಜನ ಶಾಕ್ ಆಗಿದ್ದಾರೆ. ಅಂದಹಾಗೆ ವಿಜಯಲಕ್ಷ್ಮೀ ಅವರ ಕೈಯಲ್ಲಿ ಇದ್ದ ಬ್ಯಾಗ್ Louis Vuitton ಬ್ರ್ಯಾಂಡ್‌ನ ಬ್ಯಾಗ್ ಆಗಿದೆ. ಈ ಬ್ರ್ಯಾಂಡ್‌ನ ಪರ್ಸ್ ಬೆಲೆಯನ್ನು ಸರ್ಚ್‌ ಮಾಡಿದಾಗ 5,60,000 ರೂಪಾಯಿ ತೋರಿಸಿದೆ. ಈ ಬೆಲೆ ನೋಡಿ ಜನ ಇದು ಇಷ್ಟೊಂದು ದುಬಾರಿ ಬ್ಯಾಗಾ ಎಂದು ಅಚ್ಚರಿಗೊಂಡಿದ್ದಾರೆ.

Take a Poll

ವಿಜಯಲಕ್ಷ್ಮೀ ಅವರು ಯಾವಾಗಲು ಬ್ರ್ಯಾಂಡ್ ಬಟ್ಟೆ, ಚಪ್ಪಲಿ, ಜ್ಯೂವೆಲರಿಗಳನ್ನು ಆಯ್ಕೆ ಮಾಡುತ್ತಾರೆ. ಅವರು ಆಯ್ಕೆ ಮಾಡುವ ವಸ್ತುಗಳು ಹೆಚ್ಚು ದುಬಾರಿಯಾಗೇ ಇರುತ್ತವೆ. ಆದರೆ ಕೇವಲ ಬ್ಯಾಗ್ ಬೆಲೆ ಹೀಗಿದ್ದರೆ ವಿಜಯಲಕ್ಷ್ಮೀ ಅವರ ಚಪ್ಪಲಿ, ಬಟ್ಟೆ, ಜ್ಯೂವೆಲರಿಗಳ ಬೆಲೆ ಇನ್ನೂ ಯಾವ ರೀತಿ ಇರಬಹುದು ಎಂದು ಜನ ಯೋಚನೆ ಮಾಡಲು ಶುರು ಮಾಡಿದ್ದಾರೆ.

ನಮ್ಮ ಜೀವನ ಎಷ್ಟೇ ದುಬಾರಿಯಾಗಿದ್ದರೂ ಕೂಡ ಕಟ್ಟಿಕೊಂಡ ಪತಿ ಜೊತೆಗಿರುವುದು ಎಲ್ಲದಕ್ಕಿಂತ ದೊಡ್ಡದು. ದರ್ಶನ್ ಬದಲಾಗಿದ್ದರಿಂದ ವಿಜಯಲಕ್ಷ್ಮೀ ಅವರು ತುಂಬಾ ಖುಷಿಯಾಗಿದ್ದಾರೆ. ಅಲ್ಲದೆ ದರ್ಶನ್ ಅವರ ಅಭಿಮಾನಿಗಳೂ ಕೂಡ ಈ ವಿಚಾರದಲ್ಲಿ ಹೆಚ್ಚು ಸಂತೋಷವಾಗಿದ್ದಾರೆ. ಪತ್ನಿ ಹಾಕಿದ ಗೆರೆಯನ್ನು ಡಿ ಬಾಸ್ ದಾಟದೆ ತಾವಾಯ್ತು ತಮ್ಮ ಕೆಲಸ ಆಯ್ತು ಎಂದಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಕೂಡ ಪತಿ ಆರೋಗ್ಯಕ್ಕಾಗಿ ಹಾಗೂ ಅವರ ಸಮಸ್ಯೆಗಳಿಂದ ಹೊರಬರಲು ಹಲವಾರು ಶಕ್ತಿ ದೇವರುಗಳ ಮೊರೆ ಹೋಗುತ್ತಿದ್ದಾರೆ. ಈ ಜೋಡಿಯ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳದೇ ಇರಲು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿರುವುದು ಇದೆ.

ಇನ್ನೂ ಮಂಗಳವಾರ (ಏಪ್ರಿಲ್ 22) ಸುಪ್ರೀಂ ಕೋರ್ಟ್ ನಲ್ಲಿ ದರ್ಶನ್ ಜಾಮೀನು ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮೇ 14ಕ್ಕೆ ಮುಂದೂಡಲಾಗಿದೆ. ಹೀಗಾಗಿ ದರ್ಶನ್ ನೆಮ್ಮದಿಯಾಗಿ ಇರಲು ಸಾಧ್ಯವಾಗುತ್ತಲೇ ಇಲ್ಲ. ಈ ಸಂಕಷ್ಟಗಳಿಂದ ಪಾರಾಗಲು ದರ್ಶನ್ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಒಂದಾದ ಮೇಲೊಂದರಂತೆ ಸಮಸ್ಯೆಗಳು ಎದುರಾಗುತ್ತಲೇ ಇವೆ.

ಒಟ್ಟಿನಲ್ಲಿ ದರ್ಶನ್ ಈ ಎಲ್ಲಾ ಸಮಸ್ಯೆಗಳಿಂದ ಹೊರ ಬಂದು ಒಬ್ಬ ಮಾದರಿ ವ್ಯಕ್ತಿಯಾಗಿ ಜೀವನ ಮಾಡಬೇಕು ಅನ್ನೋ ಆಸೆ ಎಲ್ಲರಿಗೂ ಇದೆ. ಅದರಂತೆ ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಕೂಡ ತುಂಬಾ ಬದಲಾಗಿದ್ದಾರೆ. ಆದರೂ ಈ ಎಲ್ಲಾ ಸಮಸ್ಯೆಗಳಿಂದ ಹೊರ ಬರಲು ಅವರು ಸಾಕಷ್ಟು ಶ್ರಮ ಪಡಬೇಕಾದ ಅನಿವಾರ್ಯ ಇರುವುದಂತು ನಿಜ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+