Kaatera OTT: ಇಂದಿನಿಂದ ಮಿನಿಪರದೆಯಲ್ಲಿ 'ಕಾಟೇರ'ನ ಅಬ್ಬರ, ಥಿಯೇಟರ್‌ನಲ್ಲಿ ಇರುವಾಗಲೇ ಒಟಿಟಿಗೆ ಬಂದಿದ್ದೇಕೆ?
ಬೆಂಗಳೂರು, ಫೆಬ್ರವರಿ 09: ಇಷ್ಟು ದಿನ ಥಿಯೇಟರ್‌ಗಳಲ್ಲಿ ಭರ್ಜರಿ ಸೌಂಡ್ ಮಾಡಿದ ಕನ್ನಡದ ಸಿನಿಮಾ 'ಕಾಟೇರ' ಮಿನಿ ಪರದೆಯಲ್ಲಿ ತಮ್ಮ ಸಿನಿ ರಸಿಕರ ಕೈಗಳಲ್ಲಿ ದರ್ಶನ ನೀಡುತ್ತಿದೆ. ಹೌದು.... ಅಪ್ಪಟ ಕನ್ನಡದ ಸಿನಿಮಾ ಕೋಟಿ ಕೋಟಿ ಬಾಚಿಕೊಂಡ ಕಾಟೇರ ಒಟಿಟಿಗೆ ಬಂದಿದ್ದು, ದರ್ಶನ್ ತೂಗುದೀಪ್ ಅವರ ಅಬ್ಬರವನ್ನು ಕಣ್ತುಂಬಿಕೊಳ್ಳಬಹುದು.
ಅಭಿಮಾನಿಗಳಿಂದ 'ಡಿ ಬಾಸ್' ಎಂದು ಕರೆಸಿಕೊಳ್ಳುವ ನಟ ದರ್ಶನದ ಅವರ ಫ್ಯಾನ್ ಫಾಲೋವಿಂಗ್‌ಗೆ ಸಾಟಿ ಯಾರು ಇಲ್ಲ. ಕಳೆದ ವರ್ಷದ ಅಂತ್ಯದಲ್ಲಿ ತೆರೆಕಂಡು ಥಿಯೇಟರ್‌ಗಳಲ್ಲಿ ವಿರಾಜಮಾನನಾಗಿ ಅಬ್ಬರಿಸಿದ ಕಾಟೇರ. ಪ್ರಮುಖವಾಗಿ ಚಿತ್ರಮಂದಿರಗಳಿಂದ ದುರವಾಗಿದ್ದ ಫ್ಯಾಮಿಲಿ ಆಡಿಯನ್ಸ್ ಅನ್ನು ಮತ್ತೆ ಥಿಯೇಟರ್‌ಗಳತ್ತ ಎಳೆದು ತಂದಿದೆ. ಈಗ ಈ ಸಿನಿಮಾ ಜೀ5 (Zee5) ಒಟಿಟಿಯಲ್ಲಿ ತೆರೆ ಕಂಡಿದೆ.

Zee5 ಒಟಿಟಿಯಲ್ಲಿ 'ಕಾಟೇರ'ನ ದರ್ಶನ
ಎರಡು ದಶಕಗಳಿಗಿಂತಲೂ ಹೆಚ್ಚು ಕಾಲದಿಂದ ಕನ್ನಡ ಸಿನಿಮಾರಂಗದಲ್ಲಿ ತಮ್ಮದೆ ಛಾಪು ಮೂಡಿಸಿರುವ ನಟ ದರ್ಶನ್ ವಿಭಿನ್ನ ಕಾನ್ಸೆಪ್ಟ್‌ಗಳ ಮೂಲಕ ಜನರ ಮುಂದೆ ಬಂದಿದ್ದಾರೆ. ಈ ಕಾಟೇರ ಸಿನಿಮಾ ಕೂಡ ಅಂತಹದ್ದೆ ಒಂದು ಅದ್ಭುತ ಚಿತ್ರ. ಕಾಟೇರ ಆಕ್ಷನ್, ಸೆಂಟಿಮೆಂಟ್, ಸಂದೇಶ, ರೋಮ್ಯಾನ್ಸ್, ಹೋರಾಟ ಎಲ್ಲದರ ಮಿಶ್ರಣ. ಡಿಸೆಂಬರ್ 29, 2023 ರಂದು ಬಿಡುಗಡೆಯಾದ ಈ ಚಲನಚಿತ್ರವು ಭಾರಿ ಯಶಸ್ಸನ್ನು ಕಂಡಿದೆ. ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರಗಳಲ್ಲಿ ಒಂದಾಗಿ ದಾಖಲೆ ಬರೆದಿದೆ.
ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡಿದ್ದ ಕಾಟೇರ ಪ್ರಸ್ತುತ OTTಯಲ್ಲಿ ಬಿಡುಗಡೆಯಾಗಿದೆ. ಇತ್ತೀಚಿನ ಅಪ್‌ಡೇಟ್‌ನಲ್ಲಿ, ಫೆಬ್ರವರಿ 9, 2024 ರಿಂದ Zee5 ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಪ್ರೀಮಿಯರ್ ಆಗುತ್ತಿದೆ. ಈ ಬಗ್ಗೆ ಜೀ5 ಅಧೀಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಇದರ ಪ್ರಚಾರ ಕೂಡ ಮಾಡುತ್ತಿದೆ.
"ಒಂದು ಬಂದೂಕಲ್ಲ ನೂರು ಪಿರಂಗಿನೇ ಬಂದ್ರು ಇವ್ನ ಓಟ ತಡೆಯೋಕ್ಕಾಗಲ್ಲ. ಕಾಟೇರ ಬರ್ತಿದ್ದಾನೆ ಇದೇ ಫೆಬ್ರವರಿ 9 ರಿಂದ ನಿಮ್ಮ ZEE5 ನಲ್ಲಿ" ಎಂದು ಸಿನಿಮಾ ಒಟಿಟಿಗೆ ಬರುವುದನ್ನು ಘೋಷಿಸಿದೆ. ಸಿನಿಮಾ ಇನ್ನೂ ಥಿಯೇಟರ್‌ಗಳಲ್ಲಿ ಓಡುತ್ತಿರುವಾಗಲೇ ಕಾಟೇರ ಮಿನಿ ಪರದೆಗೆ ಕಾಲಿಟ್ಟಿದ್ದಾನೆ.

ಕಾಟೇರ ಸಿನಿಮಾ ಬಗ್ಗೆ ಇನ್ನಷ್ಟು ಮಾಹಿತಿ
ಕಾಟೇರಾ 1970ರ ದಶಕದಲ್ಲಿ ನಡೆಯುವ ಕಮ್ಮಾರ ಕಾಟೇರನ ಜೀವನ ಸುತ್ತ ನಡೆಯುವ ಕಥೆ. ಜಾತಿ ಕಾರಣದಿಮದ ಅವಮಾನಕ್ಕೆ ಒಳಗಾಗುವ ಕಾಟೇರ ಭೂಸುಧಾರಣಾ ಕಾಯಿದೆಯ ಅನುಷ್ಠಾನದೊಂದಿಗೆ ತನ್ನ ಹಳ್ಳಿಯ ರೈತರಿಗೆ ಸಹಾಯ ಮಾಡಲು ಪಡುವ ಕಷ್ಟವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಹಳ್ಳಿಗಾಗಿ ತನ್ನ ಜೀವನವನ್ನೇ ಮುಡಿಪಿಟ್ಟ ಒಬ್ಬ ವ್ಯಕ್ತಿಯ ಕಥೆಯನ್ನು ಟಚ್ಚುಕಟ್ಟಾಗಿ ಜನರ ಮುಂದಿಡಲಾಗಿದೆ.
ಕಾಟೇರ ಚಿತ್ರದ ಪಾತ್ರವರ್ಗ
ಕಾಟೇರ ಸಿನಿಮಾ ನಟ ದರ್ಶನ್ ತೂಗುದೀಪ ಮತ್ತು ನಿರ್ದೇಶಕ ತರುಣ್ ಸುಧೀರ್ ಅವರ ಮೂರನೇ ಕಾಂಬಿನೇಷನ್. 2021 ರಲ್ಲಿ ಬಂದ ರಾಬರ್ಟ್ ಸಿನಿಮಾ ಬಳಿಕ ಮತ್ತೆ ಇಬ್ಬರು ಕೈ ಜೋಡಿಸಿದ್ದರು. ಕಾಟೇರ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಕನಸಿನ ನಟಿ ಮಾಲಾಶ್ರೀ ಅವರ ಮಗಳು ಆರಾಧನಾ ರಾಮ್ ಪಾದಾರ್ಪಣೆ ಮಾಡಿದ್ದಾರೆ. ಚಿತ್ರದಲ್ಲಿ ನಟಿ ಶೃತಿ, ಪದ್ಮಾವಸಂತಿ, ಜಗಪತಿ ಬಾಬು, ಕುಮಾರ್ ಗೋವಿಂದ್, ವಿನೋದ್ ಕುಮಾರ್ ಆಳ್ವಾ ಸೇರಿ ಅನೇಕರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಅವರು ತಮ್ಮ ನಿರ್ಮಾಣದ ಬ್ಯಾನರ್ ರಾಕ್‌ಲೈನ್ ಎಂಟರ್‌ಟೈನ್‌ಮೆಂಟ್‌ನಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ.












Click it and Unblock the Notifications