Darshan Thoogudeepa: ಬೇಡ ಬೇಡ ನಂಗೆ ಟಿವಿ ಬೇಡ.. ಮೊದಲು ಆಫ್ ಮಾಡಿ ಎಂದ ದರ್ಶನ್!

ಬೇಡ ಬೇಡ ನಂಗೆ ಟಿವಿ ಬೇಡ.. ಮೊದಲು ಆಫ್ ಮಾಡಿ ಇದನ್ನ ಅಂತ ದರ್ಶನ್ ಮತ್ತೆ ಜೈಲಿನಲ್ಲಿ ಖ್ಯಾತೆ ತೆಗೆದಿದ್ದಾರೆ. ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಸುಮ್ಮನಿರಲು ಸಾಧ್ಯವಾಗುತ್ತಿಲ್ಲ ಅಂತ ಕಾಣಿಸುತ್ತಿದೆ. ಇಷ್ಟು ದಿನ ಟಿವಿ ಬೇಕು. ನನಗೆ ಟಿವಿ ಕೊಡಿ ಅಂತ ಬೇಡಿಕೆ ಇಟ್ಟಿದ್ದ ದರ್ಶನ್ ಸದ್ಯ ಟಿವಿ ಬೇಡ ಅಂತಿದ್ದಾರೆ. ಅಷ್ಟಕ್ಕೂ ದರ್ಶನ್ ಟಿವಿ ಬೇಡ ಎನ್ನಲು ಕಾರಣ ಏನು ಗೊತ್ತಾ? ಅದನ್ನು ಹೇಳ್ತೀವಿ ಮುಂದೆ ಓದಿ...

ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್ ದಿನಕ್ಕೊಂದು ಬೇಡಿಕೆ ಇಡುತ್ತಾ ಸಿಬ್ಬಂದಿಗಳಿಗೆ ಬೇಸರವಾಗಿ ಹೋಗಿದ್ದಾರೆ. ತಲೆ ದಿಂಬು ಬೇಕು, ಸರ್ಜಿಕಲ್ ಚೇರ್ ಬೇಕು ಅಂತ ದಿನಕೊಂದು ಬೇಡಿಕೆ ಇಡುತ್ತಿದ್ದ ದಾಸ ಟಿವಿ ಕೂಡ ಬೇಕು ಎಂದಿದ್ದರು. ದರ್ಶನ್ ಬೇಡಿಕೆಯನ್ನು ಜೈಲಾಧಿಕಾರಿಗಳು ಪರಿಗಣಿಸಿ ಟಿವಿಯನ್ನು ನೀಡಿದ್ದರು.

Darshan thoogudeepa says i don t want tv turn it off first

ಆದರೆ ಆ ಟಿವಿ ಹಾಳಾಗಿದೆ ಎಂದು ರಿಪೇರಿ ಮಾಡಿಸಿ ಬಳಿಕ ಮತ್ತೆ ನೀಡಲಾಗಿತ್ತು. ಆದರೀಗ ಆ ಟಿವಿಯಲ್ಲಿ ಚಂದನ ವಾಹಿನಿ ಬಿಟ್ಟರೆ ಯಾವ ಚಾನಲ್ ಕೂಡ ಬರುತ್ತಿಲ್ಲ. ಇದರಲ್ಲಿ ಬೇರೆ ಚಾನಲ್ ಬರುವಂತೆ ಮಾಡಿ. ಇಲ್ಲವಾದರೆ ಈ ಟಿವಿನೇ ನನಗೆ ಬೇಡ ಎಂದು ದರ್ಶನ್ ಮತ್ತೆ ಅಹಂಕಾರದ ಮಾತುಗಳನ್ನಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಳ್ಳಾರಿ ಜೈಲಿನಲ್ಲಿ ದರ್ಶನ್

ದರ್ಶನ್ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ದಿನಕ್ಕೊಂದು ಖ್ಯಾತೆ ತೆಗೆಯುತ್ತಿರುವ ದಾಸ ತಮ್ಮ ಜೈಲುವಾಸವನ್ನು ತಾವೇ ತಮ್ಮ ಕೈಯಾರೆ ಮುಂದೂಡುತ್ತಿದ್ದಾರೆ. ಹೌದು... ಪರಪ್ಪನ ಜೈಲಿನಲ್ಲಿ ರೌಡಿ ಶೀಟರ್‌ನೊಂದಿಗೆ ಚಾಹಾ ಹಾಗೂ ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆದ ಬಳಿಕ ದಾಸನ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗತೊಡಗಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಧ್ಯ ನೀಡಿದವರು ಯಾರು? ದರ್ಶನ್ ಸೆಲ್‌ನ ಮೇಲ್ವಿಚಾರಕರು ಯಾರಾಗಿದ್ದರು? ಅಂದು ಇದ್ದ ಜೈಲು ಸಿಬ್ಬಂದಿ ಯಾರು? ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ಅವರ ವಿಚಾರಣೆ ಕೂಡ ನಡೆಯಲಿದೆ. ಹೀಗಾಗಿ ದರ್ಶನ್ ವಿಚಾರಣೆ ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕವೂ ನಡೆಯುತ್ತಲೇ ಇದೆ. ಮಾತ್ರವಲ್ಲದೆ ಕ್ಯಾಮರಾಕ್ಕೆ ಮಿಡಲ್ ಫಿಂಗರ್ ತೋರಿಸಿದ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

Darshan thoogudeepa says i don t want tv turn it off first

ಇದೆಲ್ಲದರಿಂದ ದರ್ಶನ್‌ ಜಾಮೀನು ಸಿಗುವುದು ಅಷ್ಟು ಸುಲಭವಿಲ್ಲ. ಅದಾಗ್ಯೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ವಕೀಲರು ಜಾಮೀನು ಅರ್ಜಿ ಸಲ್ಲಿಸಲು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಸದ್ಯದ್ರಲ್ಲೇ ದರ್ಶನ್ ಜಾಮೀನು ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ಮಾನವ ಹಕ್ಕುಗಳ ಆಯೋಗದ ಮೊರೆ ಹೋಗಲು ದರ್ಶನ್ ಕುಟುಂಬ ನಿರ್ಧಾರ

ನಟ ದರ್ಶನ್ ತೂಗುದೀಪ ಅವರಿಗೆ ಸೌಲಭ್ಯ ನಿರಾಕರಿಸಿದ ಆರೋಪದ ಮೇಲೆ ಬಳ್ಳಾರಿ ಜೈಲು ಅಧಿಕಾರಿಗಳ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ಅವರ ಕುಟುಂಬಸ್ಥರು ಮುಂದಾಗಿದ್ದಾರೆ. ದರ್ಶನ್‌ ಅವರು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಮದಿಸಿದಂತೆ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.

ಆದರೆ ಜೈಲಿನ ಹಿರಿಯ ಅಧಿಕಾರಿಗಳು ಆರೋಪವನ್ನು ನಿಕಾರಿಸಿದ್ದಾರೆ. ಜೈಲು ನಿಯಮಗಳ ಪ್ರಕಾರ ನಟನನ್ನು ನಡೆಸಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. ಜೈಲಿನ ನಿಯಮದ ಪ್ರಕಾರ ದರ್ಶನ್‌ಗೆ ಟಿವಿ, ಸರ್ಜಿಕಲ್ ಚೇರ್ ನೀಡಲಾಗಿದೆ. ಆದರೆ ಅವರು ದಿಂಬು, ಬೆಡ್‌ಶೀಟ್ ಮತ್ತಿತರ ಬೇಡಿಕೆ ಇಡುತ್ತಿದ್ದಾರೆ. ಇದು ಜೈಲು ನಿಯಮಗಳಿಗೆ ವಿರುದ್ಧವಾಗಿದೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+