Pavithra Gowda: ಪವಿತ್ರಾ ಗೌಡ ಹೆಸರನ್ನು ಮೂರು ರೀತಿ ಸೇವ್ ಮಾಡಿದ್ದ ದಾಸ!
ಬೆಂಗಳೂರು ಸೆಪ್ಟೆಂಬರ್ 6: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಹಾಗೂ ಗ್ಯಾಂಗ್ ವಿಚಾರಣೆ ಅಂತಿಮಗೊಂಡಿದ್ದು ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಚಾರ್ಜ್‌ಶೀಟ್‌ನಲ್ಲಿ ಸಾಕಷ್ಟು ಸಾಕಷ್ಟು ಸಾಕ್ಷಿಗಳು ದರ್ಶನ್ ವಿರುದ್ಧ ಲಭ್ಯವಾಗಿದ್ದು ದಾಸನಿಗೆ ಕಾನೂನು ಕುಣಿಕೆ ಮತ್ತಷ್ಟು ಬಿಗಿಯಾಗಲಿದೆ. ಈ ನಡುವೆ ದರ್ಶನ್ ತನ್ನ ಮೊಬೈಲ್ ಫೋನ್‌ನಲ್ಲಿ ಪವಿತ್ರಾ ಗೌಡ ಅವರ ನಂಬರ್ ಅನ್ನು ಮೂರು ಹೆಸರಿನಿಂದ ಸೇವ್ ಮಾಡಿಕೊಂಡಿರುವುದು ಗೊತ್ತಾಗಿದೆ.
ಹೌದು... ಪವಿತ್ರಾ ಗೌಡ ಹಾಗೂ ದರ್ಶನ್ ಲಿವ್ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎನ್ನಲಾಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಪವಿತ್ರಾ ಗೌಡ ಅವರ ಫೋನ್‌ನಲ್ಲಿ ದರ್ಶನ್ ಅವರೊಂದಿಗೆ ಆತ್ಮೀಯವಾಗಿರುವ ಫೋಟೋಗಳು ಪೊಲೀಸರಿಗೆ ಲಭ್ಯವಾಗಿದೆ. ದರ್ಶನ್ ಫೋನ್‌ನಲ್ಲಿ ಪವಿತ್ರಾ ಗೌಡ ಅವರ ನಂಬರ್ ಅನ್ನು ಸೇವ್ ಮಾಡಿದ್ದರು ಆದರೆ ಪೊಲೀಸ್ ವಿಚಾರಣೆಯಲ್ಲಿ ಅನುಮಾನ ಬಾರದಿರಲು ಆಕೆಯ ನಂಬರ್ ಅನ್ನು ಡಿಲೀಟ್ ಮಾಡಿದ್ದರು ಎನ್ನಲಾಗುತ್ತಿದೆ.

ಆದರೆ ವಿಚಾರಣೆಗಾಗಿ ಪೊಲೀಸರು ದರ್ಶನ್ ಫೋನ್ ಅನ್ನು ರಿಟ್ರೀವ್ ಮಾಡಿದಾಗ ಕೆಲವೊಂದಿಷ್ಟು ಸಾಕ್ಷಿಗಳು ಲಭ್ಯವಾಗಿದೆ. ದರ್ಶನ್ ನಂಬರ್ ರಿಟ್ರೀವ್ ಮಾಡಿದಾಗ ಪವಿತ್ರಾ ಗೌಡ ಅವರ ಹೆಸರನ್ನು 'ಪವಿ, ಪವಿ 1, ಪವಿತ್ರಾ ಗೌಡ' ಎಂದು ದರ್ಶನ್ ಸೇವ್ ಮಾಡಿದ್ದರು ಎಂದು ಚಾರ್ಜ್ ಸೀಟ್‌ನಲ್ಲಿ ತಿಳಿಸಲಾಗಿದೆ.
ದಾಸನೊಂದಿಗೆ ಪವಿತ್ರಾ ಗೌಡ ಸ್ನೇಹ ಸಂಬಂಧ ಹೊಂದಿರಲಿಲ್ಲ. ಬದಲಿಗೆ ಅವರಿಬ್ಬರ ನಡುವೆ ಪ್ರೇಮ ಸಂಬಂಧ ಇರುವುದಕ್ಕೆ ಕೆಲ ಫೋಟೋಗಳು ಸಾಕ್ಷಿಯಾಗಿವೆ. ಹೀಗಾಗಿ ದರ್ಶನ್ ರೇಣುಕಾಸ್ವಾಮಿ ಕೊಲೆ ಮಾಡಲು ಮುಂದಾಗಿದ್ದು ಎಂದು ಸಾಕ್ಷಿಗಳು ಹೇಳುತ್ತವೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡಲು ಪವಿತ್ರಾ ಗೌಡ ಪ್ರಚೋದನೆ ನೀಡಿದ್ದಾರೆ ಎನ್ನುವ ಸತ್ಯ ಕೂಡ ಬಯಲಾಗಿದೆ.
ಏನ್ ಸ್ಟಾರ್‌ಗಿರಿ ಇದ್ರೇನಂತೆ ಈಗ ನೋಡು ಹೇಗಾಗಿದೆ.. ದರ್ಶನ್ ಬೇಸರದ ಮಾತು...
ಈ ನಡುವೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿ ಇರುವ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಭೇಟಿ ಮಾಡಿದ್ದಾರೆ. ಜೊತೆಗೆ ದರ್ಶನ್ ಸಹೋದರ ದಿನಕರ್ ಭೇಟಿ ವೇಳೆ ದರ್ಶನ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಸಹೋದರ ಭೇಟಿ ವೇಳೆ ದರ್ಶನ್ ಯಾವ ಸ್ಟಾರ್‌ಗಿರಿ ಇದ್ದರೇನು ಪ್ರಯೋಜನ. ಈಗೇನು ಆಯ್ತು ನೋಡು ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಆಗ ಪತ್ನಿ ವಿಜಯಲಕ್ಷ್ಮಿ ಬೇಲ್ ಸಿಗುತ್ತೆ ಬಿಡಿ ಎಂದು ಧೈರ್ಯ ತುಂಬೋ ಕೆಲಸ ಮಾಡಿದ್ದಾರೆ.

ಚಾರ್ಜ್‌ಶೀಟ್ ಸಲ್ಲಿಕೆ ಆಗಿದೆ ಎಂದು ಗೊತ್ತಾಗುತ್ತಿದ್ದಂತೆ ದರ್ಶನ್ ಪಶ್ಚಾತ್ತಾಪ ಪಟ್ಟಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ತಮ್ಮ ಪತ್ನಿ ಹಾಗೂ ಸಹೋದರನ ಮುಂದೆ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಏನೋ ಮಾಡ್ಲಿಕ್ ಹೋಗಿ ಇನ್ನೇನೋ ಆಗೋಯ್ತು. ಇಷ್ಟರಮಟ್ಟಿಗೆ ಗಂಭೀರ ಆಗುತ್ತದೆ ಅಂತ ನಾನು ಅಂದುಕೊಂಡಿರಲಿಲ್ಲ. ಏನ್ ಸ್ಟಾರ್‌ಗಿರಿ ಇದ್ದರೆ ಏನು ಬಂತು. ಕತ್ತಲ ಕೋಣೆಯಲ್ಲಿ ಕೊಳೆಯುವಂತಾಗಿದೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ ದರ್ಶನ್.
ಹೌದು... ದರ್ಶನ್ ಐಶಾರಾಮಿ ಜೈಲುವಾಸದ ಪೋಟೋ ವೈರಲ್ ಆಗುತ್ತಿದ್ದಂತೆ, ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಬಳ್ಳಾರಿ ಜೈಲಿನಲ್ಲಿ ದರ್ಶನ್ ನರಕ ಯಾತನೆ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ತನ್ನ ಗ್ಯಾಂಗ್‌ನೊಂದಿಗೆ ಹಾಯಾಗಿ ಎಣ್ಣೆ ಧಮ್ಮು ಹೊಡುಕೊಂಡು ಇದ್ದ ದರ್ಶನ್‌ಗೆ ಬಳ್ಳಾರಿ ಜೈಲು ನರಕವಾಗಿ ಹೋಗಿದೆ.
ಅಲ್ಲದೆ ಚಾರ್ಜ್‌ಶೀಟ್ ಸಲ್ಲಿಕೆಯಾಗಿದ್ದು ದರ್ಶನ್ ಮುಂದಿನ ಭವಿಷ್ಯ ನಿರ್ಧಾರವಾಗುವ ಸಮಯ ಇನ್ನೇನು ದೂರವಿಲ್ಲ. ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ನ್ಯಾಯಾಲಯ ದರ್ಶನ್‌ಗೆ ಶಿಕ್ಷೆ ನೀಡುತ್ತಾ ಅಥವಾ ಜಾಮೀನು ಮಂಜೂರು ಮಾಡುತ್ತಾ ಎಂದು ಕಾದು ನೋಡಬೇಕಿದೆ.












Click it and Unblock the Notifications