Darshan -Dhanveer : ಧನ್ವೀರ್ ಮದುವೆ ಬಗ್ಗೆ ನಟ ದರ್ಶನ್ ಮಾತುಕತೆ: ಯಾವ ಬಟ್ಟೆ ಹಾಕಿಕೊಳ್ಳಬೇಕು ಎಂಬ ಪ್ಲ್ಯಾನ್ ರಿವೀಲ್
ಬೆಂಗಳೂರು, ಜುಲೈ 25: ನಟ ದರ್ಶನ್ ತೂಗುದೀಪ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಸಮಯದಲ್ಲಿ ದರ್ಶನ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರೆಲ್ಲಾ ದರ್ಶನ್ ಅವರನ್ನು ಭೇಟಿ ಮಾಡುವ ಅಥವಾ ಅವರ ಬಗ್ಗೆ ಮಾತನಾಡುವ ಪ್ರಯತ್ನ ಕೂಡ ಮಾಡಿರಲಿಲ್ಲ. ಆದರೆ ದರ್ಶನ್‌ಗಾಗಿ ಅವರ ಪತ್ನಿ ವಿಜಯಲಕ್ಷ್ಮೀ ಸಾಕಷ್ಟು ಓಡಾಡಿದ್ದಾರೆ. ಈ ವೇಳೆ ಅವರ ಜೊತೆಯಾಗಿದ್ದು ನಟ ಧನ್ವೀರ್ ಮಾತ್ರ. ದರ್ಶನ್ ಕಷ್ಟ-ಸುಖದಲ್ಲಿ ಜೊತೆಯಾಗಿ ನಿಂದ ಧನ್ವೀರ್ ಬಗ್ಗೆ ದರ್ಶನ್ ಅವರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನ ಇದೆ.
ಸದ್ಯ ಧನ್ವೀರ್ ಮದುವೆ ವಿಚಾರವಾಗಿ ನಟ ದರ್ಶನ್ ಅವರು ಧನ್ವೀರ್ ಅವರ ಅಪ್ಪ ಅಮ್ಮ ಜೊತೆಯಲ್ಲಿ ನಡೆದ ಮಾತುಕತೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಧನ್ವೀರ್ ಅವರ 'ವಾಮನ' ಚಿತ್ರದ 25 ದಿನಗಳ ವಿಜಯೋತ್ಸವ ಸಂದರ್ಭದಲ್ಲಿ ನಡೆದಿರುವುದು ಎಂದು ತಿಳಿದು ಬಂದಿದೆ. ದರ್ಶನ್ ಅವರು ಧನ್ವೀರ್ ಅವರ ಮದುವೆ ಬಗ್ಗೆ 'ವಾಮನ' ಚಿತ್ರ ಕಾರ್ಯಕ್ರಮದ ಸಂದರ್ಭದಲ್ಲಿ ಬಹಿರಂಗವಾಗಿ ಮಾತನಾಡಿದ್ದಾರೆ.

ಧನ್ವೀರ್ ಅವರ ಅಪ್ಪ-ಅಮ್ಮನ ಮುಂದೆ, ಮಗನನ್ನು ಬೇಗ ಮದುವೆ ಮಾಡಿ ಎಂದು ಮನವಿ ಮಾಡಿದ್ದಾರೆ. ಇದೇ ಸಂದರ್ಭ, ಮದುವೆ ದಿನ ಧನ್ವೀರ್ ಯಾವ ಬಟ್ಟೆ ಹಾಕಿಕೊಳ್ಳಬೇಕು, ರಿಸೆಪ್ಷನ್‌ನಲ್ಲಿ ಹೇಗೆ ಸಜ್ಜಾಗಬೇಕು ಎಂಬ ಬಗ್ಗೆ ಹಾಸ್ಯಾತ್ಮಕವಾಗಿ ಚರ್ಚೆ ಮಾಡಿ, ತಮ್ಮ ಸ್ನೇಹಿತನ ಮದುವೆ ಬಗ್ಗೆ ದರ್ಶನ್ ಆಸಕ್ತಿಯಿಂದ ಮಾತನಾಡಿದ್ದಾರೆ. . ಅಲ್ಲದೆ, ಮದುವೆ ದಿನ ಯಾವ ಬಟ್ಟೆ, ರಿಸೆಪ್ಷನ್ಗೆ ಯಾವ ಬಟ್ಟೆ ಧರಿಸಬೇಕು ಎಂಬುದನ್ನು ದರ್ಶನ್ ಪ್ಲ್ಯಾನ್ ಮಾಡಿಟ್ಟಾಗಿದೆ.
ಈ ಮಾತುಕತೆ ಸಂದರ್ಭ ಧನ್ವೀರ್ ಮುಜುಗುರಾಗಿ ನಾಚಿದ್ದಾರೆ, ಅವರ ಪೋಷಕರು ಸಹ 28 ವರ್ಷ ಆಯ್ತು ಮದುವೆ ಮಾಡಬೇಕು ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರ್‌ಲ್ ಆಗಿದೆ. ದರ್ಶನ್ ಅವರು ಆಪ್ತ ಗೆಳೆಯ ಧನ್ವೀರ್ ಅವರ 'ವಾಮನ' ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಈ ಚಿತ್ರವನ್ನು ನೊಡುವಾಗ ಅವರು ಧನ್ವೀರ್ ವಿವಾಹ ವಿಚಾರ ಮಾತನಾಡಿದ್ದಾರೆ. ಧನ್ವೀರ್ ತಂದೆ-ತಾಯಿ ಬಳಿ ಬೇಗ ಮಗನ ಮದುವೆ ಮಾಡುವಂತೆ ಕೋರಿದ್ದಾರೆ
ಧನ್ವೀರ್‌ಗೆ ಸ್ನೇಹಿತರು ಹಾಗು ಕುಟುಂಬದವರು ಮದುವೆಯಲ್ಲಿ ಆಸಕ್ತರಾಗಿದ್ದಾರೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಈ ವಿಡಿಯೋಗಳನ್ನು ಕಾರ್ಯಕ್ರಮಕ್ಕೆ ಹಾಜರಾದವರು ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹಾಗೂ ಸಂಭ್ರಮಕ್ಕೆ ಕಾರಣವಾಗಿದೆ. ಧನ್ವೀರ್ ಮದುವೆ ಬಗ್ಗೆ ಧನ್ವೀರ್ ಅವರ ತಂದೆ ತಾಯಿ ಮುಂದೆ ಸದ್ಯ ನಟ ದರ್ಶನ್ ಅವರು ಮಾತನಾಡಿದ್ದಾರೆ. ಆದರೆ, ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ.












Click it and Unblock the Notifications