Darshan Thoogudeepa: ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಲಿವರ್ ಸಮಸ್ಯೆ...
ಬಳ್ಳಾರಿ ಜೈಲಿನಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿ ಹೊರ ಬಂದರೂ ಕೂಡ ಭಯ & ಆತಂಕ ಕಡಿಮೆ ಆಗುತ್ತಿಲ್ಲ. ಕೋಟಿ ಕೋಟಿ ಅಭಿಮಾನಿಗಳ ಪ್ರೀತಿಯ ದಾಸ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ವಿಪರೀತ ಬೆನ್ನು ನೋವಿನಿಂದ ಒದ್ದಾಡುತ್ತಿರುವ ಕಾರಣಕ್ಕೆ ಜೈಲಿನಿಂದ 45 ದಿನಗಳ ಕಾಲ ರಿಲೀಸ್ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ನೀಡಿ, ಬಳ್ಳಾರಿ ಜೈಲಿನಿಂದ 45 ದಿನಗಳ ರಿಲೀಫ್ ನೀಡಲಾಗಿದೆ. ಇಂತಹ ಸಮಯದಲ್ಲೇ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಲಿವರ್ ಸಮಸ್ಯೆ...
ಡಿ-ಬಾಸ್ ದರ್ಶನ್ ತೂಗುದೀಪ್ ಅಂದ್ರೆ ಮಂಡ್ಯ ಟು ಇಂಡಿಯಾ ಫುಲ್ ಹವಾ ಸೃಷ್ಟಿ ಆಗುತ್ತೆ. ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿ 100ಕ್ಕೂ ಹೆಚ್ಚು ದಿನ ಕಳೆದ ನಂತರ, ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದಾರೆ. ಇದು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಗೆ ತುಂಬ ನೋವು ಕೂಡ ನೀಡಿದೆ. ನಮ್ಮ ಡಿ-ಬಾಸ್ ಆರೋಗ್ಯ ಹೇಗಿದೆ? ಯಾವಾಗ ಅವರು ಮತ್ತೆ ಮೊದಲಿನಂತೆ ಸಿನಿಮಾ ಮಾಡುವುದು? ಎಂಬ ಚರ್ಚೆಗಳು ಇದೀಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ. ಇಂತಹ ಸಮಯದಲ್ಲೇ, ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಲಿವರ್ ಸಮಸ್ಯೆ...

ದರ್ಶನ್ ತೂಗುದೀಪ್ ಅವರಿಗೆ ಆಪರೇಷನ್...
ಹೌದು, ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿರುವ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಗೆ ತುಂಬಾ ಟೆನ್ಷನ್ ಆಗುತ್ತಿದೆ. ಯಾಕಂದ್ರೆ ದರ್ಶನ್ ತೂಗುದೀಪ್ ಅವರ ಆರೋಗ್ಯ ಕೈಮೀರಿದ್ದು, ಬಿಜಿಎಸ್ ಆಸ್ಪತ್ರೆಯ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಹಾಗೇ, ದರ್ಶನ್ ತೂಗುದೀಪ್ ಅವರಿಗೆ ಆಪರೇಷನ್ ಮಾಡಿ, ಬೆನ್ನಿಗೆ ಸರ್ಜರಿ ಮಾಡಲಾಗುತ್ತೆ ಎಂಬ ಮಾಹಿತಿ ಸಿಗುತ್ತಿದೆ. ಆದರೆ ಇದೇ ಸಮಯದಲ್ಲಿ ದರ್ಶನ್ ತೂಗುದೀಪ್ ಅವರಿಗೆ ಲಿವರ್ ಸಮಸ್ಯೆ ಇದೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ!
ಅಂದಹಾಗೆ ದರ್ಶನ್ ತೂಗುದೀಪ್ ಅವರಿಗೆ ಯಾವುದೇ ಲಿವರ್ ಸಮಸ್ಯೆ ಇಲ್ಲ, ಆದರೆ ಕೆಲವು ಕಿಡಿಗೇಡಿಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯಾಗಿ ದರ್ಶನ್ ತೂಗುದೀಪ್ ಅವರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಆರೋಪ ಕೇಳಿ ಬಂದಿದೆ. ಯಾಕೆ & ಏನು? ಎಂಬ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ದರ್ಶನ್ ತೂಗುದೀಪ್ ಅವರ ಬಗ್ಗೆ ಈ ರೀತಿ ಸುಳ್ಳು ಮಾಹಿತಿ ನೀಡುತ್ತಿರುವವರ ಬಗ್ಗೆ ಇದೀಗ ಆಕ್ರೋಶ ಹೆಚ್ಚಾಗಿದೆ.
ಡಿ-ಬಾಸ್ ದರ್ಶನ್ ಅವರಿಗೆ ಬೆನ್ನು...
ದರ್ಶನ್ ತೂಗುದೀಪ್ ಅವರಿಗೆ ಬೆನ್ನು ಚಿಕಿತ್ಸೆ ನೀಡ್ತಿರುವ ಹಿನ್ನೆಲೆಯಲ್ಲಿ ಲಿವರ್ ಫಂಕ್ಷನ್ ಟೆಸ್ಟ್ ನಡೆಯುತ್ತಿದೆ. ಆದರೆ, ದರ್ಶನ್ ತೂಗುದೀಪ್ ಅವರಿಗೆ ಲಿವರ್ ಸಮಸ್ಯೆ ಇದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ, ಕೆಲವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಸೋಷಿಯಲ್ ಮೀಡಿಯಾದಲ್ಲಿ ಎಂಬ ಆರೋಪ ಈಗ ಕೇಳಿ ಬರುತ್ತಿದೆ. ಈ ಬಗ್ಗೆ ಡಿ-ಬಾಸ್ ಅಭಿಮಾನಿಗಳು ಈಗ ತಕ್ಕ ಉತ್ತರ ನೀಡ್ತಿದ್ದಾರೆ.
ಡಿ-ಬಾಸ್ ಬೇಗ ಗುಣಮುಖರಾಗಲಿ...
ಒಟ್ನಲ್ಲಿ ನಟ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಆಶಯ. ಜೀವನದಲ್ಲಿ ಸಾಕಷ್ಟು ಕಷ್ಟ & ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ನಟನ ಈಗಿನ ಪರಿಸ್ಥಿತಿ ನೋಡಲು ಅಭಿಮಾನಿಗಳಿಗೂ ಸಾಕಷ್ಟು ನೋವು ನೀಡುತ್ತಿದೆ. ಇದೀಗ ವೈದ್ಯರು ಕೂಡ ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.












Click it and Unblock the Notifications