Darshan Thoogudeepa: ಬಳ್ಳಾರಿ ಜೈಲಿಗೆ ದರ್ಶನ್ ತೂಗುದೀಪ್ ಶಿಫ್ಟ್ ಮಾಡಲು ಮತ್ತೊಮ್ಮೆ ಪೊಲೀಸರ ಸಿದ್ಧತೆ?
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ಹೊರಗೆ ಬಂದಿದ್ದು, ಇದೀಗ ನಿಲ್ಲುವುದಕ್ಕೂ ಆಗದೆ & ನಡೆಯುವುದಕ್ಕೂ ಆಗದೆ ಒದ್ದಾಡುತ್ತಿದ್ದಾರೆ ಎಂಬ ಮಾಹಿತಿ ಹೊರಗೆ ಓಡಾಡುತ್ತಿದೆ. ಇಂತಹ ಸಮಯದಲ್ಲೇ ಹೊರಗಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು, ದರ್ಶನ್ ತೂಗುದೀಪ್ ಅವರ ಪರಿಸ್ಥಿತಿ ನೋಡಿ ನರಳುತ್ತಿದ್ದಾರೆ ಇದೇ ವೇಳೆ, ಮತ್ತೊಂದು ಸ್ಫೋಟಕ & ಸಂಚಲನ ಸೃಷ್ಟಿಸುವ ಸುದ್ದಿ ಹಬ್ಬುತ್ತಿದೆ. ಬಳ್ಳಾರಿ ಜೈಲಿಗೆ ದರ್ಶನ್ ತೂಗುದೀಪ್ ಶಿಫ್ಟ್ ಮಾಡಲು ಮತ್ತೊಮ್ಮೆ ಪೊಲೀಸರ ಸಿದ್ಧತೆ?
ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದಿದ್ದಾರೆ, ಇನ್ಮುಂದೆ ಡಿ-ಬಾಸ್ ದರ್ಶನ್ ತೂಗುದೀಪ್ ಜೈಲಿಗೆ ಹೋಗಲ್ಲ. ಹೊರಗೆ ಹಾಯಾಗಿ ಇರುತ್ತಾರೆ, ಈಗ ಬೆನ್ನು ನೋವಿಗೆ ಚಿಕಿತ್ಸೆ ಪಡೆದು ಹೊರ ಬಂದು ಮತ್ತೆ ಸಿನಿಮಾ ಮಾಡ್ತಾರೆ ಅನ್ನೋ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅಭಿಮಾನಿಗಳು. ಇಂತಹ ಸಮಯದಲ್ಲೇ ಕರ್ನಾಟಕ ಪೊಲೀಸರು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಬಳ್ಳಾರಿ ಜೈಲಿಗೆ ದರ್ಶನ್ ತೂಗುದೀಪ್ ಶಿಫ್ಟ್ ಮಾಡಲು ಮತ್ತೊಮ್ಮೆ ಪೊಲೀಸರ ಸಿದ್ಧತೆ?

ಜೈಲಿಗೆ ಮತ್ತೆ ಡಿ-ಬಾಸ್ ದರ್ಶನ್ ಶಿಫ್ಟ್?
ದರ್ಶನ್ ತೂಗುದೀಪ್ ಅವರ ಆರೋಗ್ಯ ಕೈಕೊಟ್ಟ ಹಿನ್ನೆಲೆ ಮಾನ್ಯ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಈ ಜಾಮೀನು ಅವಕಾಶದಿಂದ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಿದ್ಧತೆ ನಡೆಸುತ್ತಿದ್ದಾರೆ. ಹೀಗಿದ್ದಾಗಲೇ ಪೊಲೀಸರು ದಿಢೀರ್ ದರ್ಶನ್ ತೂಗುದೀಪ್ ಅವರಿಗೆ ಮತ್ತೊಮ್ಮೆ ಆಘಾತ ನೀಡಲು ಸಜ್ಜಾಗಿದ್ದಾರೆ. ಹೀಗೆ ಪೊಲೀಸರು ನೀಡುವ ಆಘಾತಕ್ಕೆ ದರ್ಶನ್ ತೂಗುದೀಪ್ ಅವ್ರು ಮತ್ತೆ ಬಳ್ಳಾರಿ ಜೈಲಿಗೆ ಹೋಗುವ ಸಾಧ್ಯತೆ ದಟ್ಟವಾಗಿದೆ.
ಭಯ & ಆತಂಕ ಹೆಚ್ಚಾಗಿದೆ!
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ಪರಿಸ್ಥಿತಿ ಹಿನ್ನೆಲೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ನಿರ್ಧಾರ ಪ್ರಶ್ನೆ ಮಾಡಿ, ಬೆಂಗಳೂರಿನ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲು ಏರಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಆಘಾತ ನೀಡಿದೆ.
ಯಾಕಂದ್ರೆ ಅಕಸ್ಮಾತ್ ಸುಪ್ರೀಂ ಕೋರ್ಟ್ ಮುಂದೆ ದರ್ಶನ್ ತೂಗುದೀಪ್ ಅವರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕಾರ ಮಾಡಿದ್ರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೊಮ್ಮೆ ಬಳ್ಳಾರಿ ಜೈಲಿಗೆ ಹೊಗುವುದು ಗ್ಯಾರಂಟಿ. ಹೀಗಾಗಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಭಯ & ಆತಂಕ ಇದೀಗ ಹೆಚ್ಚಾಗಿದೆ.
ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿಗೆ?
ಬೆಂಗಳೂರು ಪೊಲೀಸರು ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ಪ್ರಶ್ನೆ ಮಾಡುತ್ತ ಸುಪ್ರೀಂಕೋರ್ಟ್ ಮೆಟ್ಟಿಲು ಏರಲು ನಿರ್ಧರಿಸಿದ್ದು, ಇದಕ್ಕೆ ಒಂದಷ್ಟು ಸಮಯ ಹಿಡಿಯುತ್ತೆ ಎನ್ನಲಾಗಿದೆ. ಹೀಗಾಗಿ ಅಷ್ಟರಲ್ಲಿ ದರ್ಶನ್ ತೂಗುದೀಪ್ ಚೇತರಿಕೆ ಕಾಣುವ ನಿರೀಕ್ಷೆ ಇದೀಗ ಮೂಡಿದೆ. ಮತ್ತೊಂದು ಕಡೆ, ದರ್ಶನ್ ತೂಗುದೀಪ್ ಅವರ ಪರವಾಗಿ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಕೂಡ ಕಾನೂನು ಹೋರಾಟ ನಡೆಸಲು ಸಿದ್ಧತೆ ಸಾಗಿದೆ.












Click it and Unblock the Notifications