Darshan Thoogudeepa: ಮರಣ ದಂಡನೆ ಶಿಕ್ಷೆ ಸುಳಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್....

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಈಗ ದೊಡ್ಡ ಗಂಡಾಂತರ ಎದುರಾಗಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರ್ಮಾಂಗ ತುಳಿದು, ಎದೆಗೆ ಎಗರಿಸಿ ಎಗರಿಸಿ ಒದ್ದು, ಟ್ರಕ್ & ಬಸ್‌ಗಳ ಮೇಲೆ ಎತ್ತಿ ಎತ್ತಿ ಬಿಸಾಡಿ ಹಲ್ಲೆ ಮಾಡಿ ರೇಣುಕಾ ಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿರುವ ಆರೋಪ ಡಿ-ಬಾಸ್ ದರ್ಶನ್ & ಗ್ಯಾಂಗ್ ವಿರುದ್ಧ ಕೇಳಿ ಬಂತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಶವದ ಎದುರಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ನಿಂತಿರುವ ಫೋಟೋ ದಿಢೀರ್ ಪೊಲೀಸರಿಗೆ ಸಿಕ್ಕಿ ಬಿದ್ದಿದೆ ಎಂದು....

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಯಾವುದೇ ರೀತಿ ತಪ್ಪು ಮಾಡಿಲ್ಲ, ರೇಣುಕಾಸ್ವಾಮಿ ಕೊಲೆ ನಡೆಯುವಾಗ ಡಿ-ಬಾಸ್ ದರ್ಶನ್ ಅವರು ಅಲ್ಲಿ ಇರಲೇ ಇಲ್ಲ ಅನ್ನೋದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ವಾದವೇ ಆಗಿತ್ತು.

Darshan Thoogudeepa May Be Face Big Task After This Photo Getting Viral

ಆದರೆ ಇದೀಗ ಪೊಲೀಸರಿಗೆ ಮಹತ್ವದ ಸಾಕ್ಷ್ಯ ಸಿಕ್ಕಿದ್ದು, ರೇಣುಕಾಸ್ವಾಮಿ ಹೆಣದ ಮುಂದೆ ಡಿ-ಬಾಸ್ ದರ್ಶನ್ ತೂಗುದೀಪ್ & ಗ್ಯಾಂಗ್ ನಿಂತಿರುವ ಫೋಟೋ ಇದೀಗ ಸಿಕ್ಕಿದೆ ಎಂದು ಆರೋಪ ಮಾಡಲಾಗಿದೆ. ಈ ಮೂಲಕ, ಮರಣ ದಂಡನೆಯ ಶಿಕ್ಷೆ ಸುಳಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್....

ರೇಣುಕಾಸ್ವಾಮಿ ಶವದ ಜೊತೆಗೆ ಡಿ-ಬಾಸ್ ದರ್ಶನ್?

ಹೌದು, ರೇಣುಕಾಸ್ವಾಮಿ ಒಬ್ಬ ಕಾಮುಕ ಇದೇ ಕಾರಣಕ್ಕೆ ನಮ್ಮ ಬಾಸ್ ಸರಿಯಾಗಿ ಮಾಡಿ ಒಂದು ಹೆಣ್ಣಿನ ಮರ್ಯಾದಿ ಕಾಪಾಡಿದ್ದಾರೆ ಅನ್ನೋದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಮಾತು. ಅದರಲ್ಲೂ ರೇಣುಕಸ್ವಾಮಿ ಬರ್ಬರ ಕೊಲೆ ಕೇಸ್ ಬಗ್ಗೆಯೇ ದೊಡ್ಡ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಪೊಲೀಸರಿಗೆ ದೊಡ್ಡ ಸಾಕ್ಷ್ಯ ಸಿಕ್ಕಿದೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ.

ಭೀಕರವಾಗಿ ಕೊಲೆ ಆಗಿರುವ ರೇಣುಕಸ್ವಾಮಿಯ ಹೆಣದ ಮುಂದೆಯೇ ಡಿ-ಬಾಸ್ ದರ್ಶನ್ ತೂಗುದೀಪ್ & ಗ್ಯಾಂಗ್ ನಿಂತಿರುವ ಫೋಟೋ, ಪೊಲೀಸರು ಸಂಗ್ರಹ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇದೀಗ ಸಂಚಲನ ಸೃಷ್ಟಿ ಮಾಡುವ ಫೋಟೋ ಪೊಲೀಸರಿಗೆ ಸಿಕ್ಕು, ಡಿ-ಬಾಸ್ ದರ್ಶನ್ ಅವರಿಗೆ ದೊಡ್ಡ ಗಂಡಾಂತರ ಎದುರಾಗುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ.

ರೇಣುಕಾಸ್ವಾಮಿ ಹೆಣದ ಫೋಟೋ ತೆಗೆದಿದ್ದು ಯಾರು?

ಹೀಗೆ ರೇಣುಕಾಸ್ವಾಮಿ ಶವದ ಎದುರು ಎದುರು ದರ್ಶನ್ ತೂಗುದೀಪ್ ಅವರು ಸೇರಿದಂತೆ, ಇತರ ಆರೋಪಿಗಳು ನಿಂತುಕೊಂಡ ಫೋಟೋ ಸಿಕ್ಕಿದೆ ಎಂದು ಆರೋಪಿಸಲಾಗಿದೆ. ಇದೇ ಫೋಟೋ ಪ್ರಮುಖ ಆರೋಪಿ ಪವನ್ ಮೊಬೈಲ್‌ನಿಂದ ತೆಗೆಯಲಾಗಿದೆ ಎನ್ನಲಾಗಿದ್ದು, ಈ ಫೋಟೋ ಆರೋಪಿ ಪವನ್ ಮೊಬೈಲ್‌ನಿಂದ ಈಗ ರಿಟ್ರೀವ್ ಅಂದ್ರೆ ಮರು ಸಂಗ್ರಹವಾಗಿದೆ. ಇಂತಹ ಸಮಯದಲ್ಲೇ, ಮರಣ ದಂಡನೆ ಶಿಕ್ಷೆ ಸುಳಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸಿಲುಕಿದ್ದಾರಾ? ಎಂಬ ಪ್ರಶ್ನೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿದೆ.

ಒಟ್ನಲ್ಲಿ ಹೇಳುವುದಾದರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಭಾರಿ ದೊಡ್ಡ ಸಮಸ್ಯೆ & ಗಂಡಾಂತರ ಈಗ ಎದುರಾದಂತೆ ಕಾಣುತ್ತಿದೆ. ಯಾಕಂದ್ರೆ ರೇಣುಕಾಸ್ವಾಮಿ ಹೆಣದ ಬಳಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನಿಂತಿರುವ ಫೋಟೋ ಪೊಲೀಸರ ಕೈಗೆ ಸಿಕ್ಕಿದ್ದೇ ನಿಜವಾದರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕಠಿಣ ಶಿಕ್ಷೆ ಆಗುವುದು ಗ್ಯಾರಂಟಿ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ, ಕಾನೂನು ತಜ್ಞರು ಕೂಡ ತಮ್ಮ ಅಭಿಪ್ರಾಯ ಹೊರ ಹಾಕುತ್ತಿದ್ದಾರೆ.

ಡಿ-ಬಾಸ್‌ಗೆ ಆಘಾತ ನೀಡುತ್ತಾರಾ ಪೊಲೀಸರು?

ದಾಸ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸಾಲು ಸಾಲು ಕಂಟಕಗಳು ಇದೀಗ ಎದುರಾಗುತ್ತಿದ್ದು, ನೆಮ್ಮದಿಯಾಗಿ ಇರಲು ಆಗುತ್ತಿಲ್ಲ. ಅದ್ರಲ್ಲೂ ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ಪಡೆಯುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಪೊಲೀಸರು ಮತ್ತೆ ಆಘಾತ ನೀಡಲು ಸಜ್ಜಾಗಿದ್ದಾರೆ ಅಂತಾ ಅಭಿಮಾನಿಗಳಿಗೆ ಅನ್ನಿಸುತ್ತಿದೆ. ಅದರಲ್ಲೂ ತನಿಖೆಯ ಆಳ & ಅಗಲ ಸೂಕ್ತವಾಗಿ ಅರಿತಿರುವ ಪೊಲೀಸ್ ಅಧಿಕಾರಿಗಳನ್ನೇ ತನಿಖೆಗೆ ನೇಮಕ ಮಾಡಲಾಗಿದ್ದು, ಮತ್ತಷ್ಟು ಕಠಿಣ ತನಿಖೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ತಿರುವುಗಳನ್ನು ನೀಡುವ ಸಾಧ್ಯತೆ ದಟ್ಟವಾಗಿದೆ. ಅದರಲ್ಲೂ ದರ್ಶನ್ ತೂಗುದೀಪ್ ಅವರ ವಿರುದ್ಧ ಈವರೆಗೂ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ ಎಂಬ ಮಾತು ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+