Darshan Thoogudeepa: ಪವಿತ್ರಾ ಗೌಡ ಮನೆಯಲ್ಲಿ ದರ್ಶನ್ ತೂಗುದೀಪ್ ಒಳ ಉಡುಪು, ಹಾಸಿಗೆ ಮೇಲೆ ದರ್ಶನ್ ತೂಗುದೀಪ್ ಕೂದಲು ಪತ್ತೆ?
ದರ್ಶನ್ ತೂಗುದೀಪ್ & ಪವಿತ್ರಾ ಗೌಡ ನಡುವೆ ಎಂತಹ ಸಂಬಂಧ ಇತ್ತು? ಭೀಕರ ಕೊಲೆ ಆರೋಪಿ ದರ್ಶನ್ ತೂಗುದೀಪ್‌ಗೆ ಇದೇ ಪವಿತ್ರಾ ಗೌಡ ಏನು ಆಗಬೇಕು? ಪವಿತ್ರಾ ಗೌಡಳ ಮೊದಲ ಗಂಡ ಏನು ಮಾಡುತ್ತಿದ್ದ? ಹೀಗೆ ಜನರು ಗೂಗಲ್ ಮೂಲಕ ಹಲವು ಪ್ರಶ್ನೆಗಳನ್ನ ಹುಡುಕುತ್ತಿದ್ದರು. ಇದೀಗ ಕನ್ನಡಿಗರ ಪ್ರಶ್ನೆಗಳಿಗೆ ಒಂದೊಂದಾಗಿ ಉತ್ತರ ಸಿಗುತ್ತಿದ್ದು, ಇದೀಗ ದರ್ಶನ್ ತೂಗುದೀಪ್‌ಗೆ ಸಂಬಂಧಿಸಿದ ಒಳ ಉಡುಪು ಅಂದ್ರೆ ಅಂಡರ್‌ವೇರ್ & ಬನಿಯನ್ ಸೇರಿದಂತೆ ಪವಿತ್ರಾ ಗೌಡಳ ಮನೆ ಹಾಸಿಗೆ ಮೇಲೆ ದರ್ಶನ್ ತೂಗುದೀಪನ ಕೂದಲು ಕೂಡ ಪತ್ತೆಯಾಗಿವೆ ಎಂಬ ಆರೋಪ ಕೇಳಿಬಂದಿದೆ!
ಪವಿತ್ರಾ ಗೌಡ ಮನೆಗೆ ಬೀಗ ಹಾಕಿ, ಪರಿಶೀಲನೆ ನಡೆಸುತ್ತಿರುವ ಪೊಲೀಸರಿಗೆ ನಟ ದರ್ಶನ್ ತೂಗುದೀಪ್‌ಗೆ ಸಂಬಂಧಪಟ್ಟ ವಸ್ತುಗಳು ಪವಿತ್ರಾ ಗೌಡಳ ಬಂಗಲೆಯಲ್ಲಿ ಇದೀಗ ಸಿಗುತ್ತಿವೆ. ರೇಣುಕಾಸ್ವಾಮಿ ಕೊಲೆಯ ಕೇಸ್ ಬಗ್ಗೆ ತನಿಖೆ ನಡೆಸುವ ಸಮಯದಲ್ಲಿ ಪೊಲೀಸರಿಗೆ ಆಘಾತ ನೀಡುವ ಮಾಹಿತಿಗಳು ಸಿಗುತ್ತಿವೆ. ಅದರಲ್ಲೂ ದರ್ಶನ್ ತೂಗುದೀಪ್ & ಪವಿತ್ರಾ ಗೌಡಳಿಗೆ ಏನು ಸಂಬಂಧ ಇತ್ತು? ಎಂಬ ಬಗ್ಗೆ ಕೂಡ ಸ್ಪಷ್ಟನೆ ಸಿಗುತ್ತಿದೆ. ಈಗ ಕೂಡ ಅಷ್ಟೇ ಕೊಲೆ ಆರೋಪಿ & ಕನ್ನಡ ಸಿನಿಮಾ ರಂಗದ ನಟನಾಗಿದ್ದ ದರ್ಶನ್ ತೂಗುದೀಪ್‌ಗೆ ಸಂಬಂಧಿಸಿದ್ದ ಬಹುಮುಖ್ಯ ಸಾಕ್ಷ್ಯಗಳು ಅಂದ್ರೆ ವಸ್ತುಗಳು ಪವಿತ್ರಾ ಮನೆಯಲ್ಲಿ ಸಿಕ್ಕಿವೆ. ಪವಿತ್ರಾ ಗೌಡಳ ಮನೆಯಲ್ಲಿ ದರ್ಶನ್ ತೂಗುದೀಪ್ ಒಳ ಉಡುಪು ಹಾಗೂ ಹಾಸಿಗೆ ಮೇಲೆ...

ದರ್ಶನ್ ತೂಗುದೀಪ್ & ಪವಿತ್ರಾ ಗೌಡ...
ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡ & ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಆಕ್ರೋಶ ಹೆಚ್ಚಾಗುತ್ತಿದೆ. ಯಾಕಂದ್ರೆ ಕೊಲೆ ಮಾಡಿ ಕೂಡ, ಜೈಲಿನಲ್ಲಿ ಪ್ರಜಾಪ್ರಭುತ್ವ ವಿರೋಧಿ ರೀತಿ ದರ್ಶನ್ ತೂಗುದೀಪ ವರ್ತನೆ ಮಾಡುತ್ತಿದ್ದಾನೆ. ಇದು ಮುಂದಿನ ದಿನಗಳಲ್ಲಿ ದರ್ಶನ್ ಹೊರಗೆ ಬಾರದಂತೆ ತಡೆಯುತ್ತದೆ ಎಂಬ ಆರೋಪ ಕೇಳಿಬರುತ್ತಿರುವ ನಡುವೆ, ಪವಿತ್ರಾ ಗೌಡ ಮನೆಯಲ್ಲಿ ದರ್ಶನ್ ತೂಗುದೀಪ್ ಒಳ ಉಡುಪು, ಹಾಸಿಗೆ ಮೇಲೆ ದರ್ಶನ್ ತೂಗುದೀಪ್ ಕೂದಲು ಪತ್ತೆ? ಆಗಿವೆ ಎಂಬ ಆರೋಪ ಕೇಳಿ ಬಂದಿದೆ.
ಬಳ್ಳಾರಿ ಜೈಲಿನಲ್ಲಿ ಡಿ-ಬಾಸ್ ಪರಿಸ್ಥಿತಿ...
ಮನುಷ್ಯ ಮತ್ತೊಬ್ಬ ಮನುಷ್ಯನ ವಿಕೃತವಾಗಿ ಮರ್ಮಾಂಗದ ಸಿಪ್ಪೆ ಸುಲಿದು, ಕೊಲೆ ಮಾಡಿದ ಆರೋಪ ಕೇಳಿಬಂದ ನಂತರ ಪೊಲೀಸರು ದರ್ಶನ್ ತೂಗುದೀಪ್ & ಗ್ಯಾಂಗ್‌ನ ಬಂಧಿಸಿದ್ದಾರೆ. ಮೊದಲಿಗೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಎಣ್ಣೆ & ಸಿಗರೇಟ್ ಅಂತಾ ಮಜಾ ಮಾಡುತ್ತಿದ್ದ ಅಭಿಮಾನಿಗಳ ಡಿ-ಬಾಸ್ ಈಗ ಬಳ್ಳಾರಿ ಜೈಲು ಸೇರಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ಬಳ್ಳಾರಿ ಜೈಲಿನಲ್ಲಿ ಊಟ ಸೇರದೆ, ವಾತಾವರಣ ಹಿಡಿಸದೆ ದರ್ಶನ್ ತೂಗುದೀಪ್ ಒದ್ದಾಡುತ್ತಿದ್ದಾನೆ. ಹೀಗಿದ್ದರೂ ಮಾಧ್ಯಮಗಳಿಗೆ ಕೆಟ್ಟದಾಗಿ ಬೆರಳು ತೋರಿಸಿದ ನಟ ದರ್ಶನ್ ಬೆರಳು ಸ್ಟಾರ್ ಆಗಿದ್ದಾರೆ. ಇದರ ಜೊತೆಗೆ ಪವಿತ್ರಾ ಗೌಡ ಮನೆಯಲ್ಲಿ ದರ್ಶನ್ ಒಳ ಉಡುಪು ಪತ್ತೆ ಆಗಿರುವುದು ಸಂಚಲನ ಸೃಷ್ಟಿ ಮಾಡಿದೆ.
'ಡಿ-ಬಾಸ್' ಅಲ್ಲ 'ಬೆರಳು' ಬಾಸ್ ಅಂತೆ!
ಯಾವಾಗ ದರ್ಶನ್ ತೂಗುದೀಪ್ ತಮ್ಮ ಮಧ್ಯದ ಬೆರಳನ್ನ ಮಾಧ್ಯಮಗಳ ಕ್ಯಾಮೆರಾ ಎದುರು ತೋರಿಸಿದರೋ, ಅದೇ ಕ್ಷಣದಿಂದ ದರ್ಶನ್ ತೂಗುದೀಪ್‌ಗೆ ಹೊಸ ಬಿರುದು ನೀಡಲಾಗಿದೆ. ಇಷ್ಟು ದಿನಗಳ ಕಾಲ ದರ್ಶನ್ ತೂಗುದೀಪ್‌ಗೆ 'ಡಿ-ಬಾಸ್' ಅಂತಾ ಅಭಿಮಾನಿಗಳು ಬಿರುದು ನೀಡಿದ್ದರು. ಆದರೆ ಇದೀಗ ಮೀಡಿಯಾಗಳಿಗೆ ಕೆಟ್ಟ ಕೆಟ್ಟದಾಗಿ ಬೆರಳು ತೋರಿಸಿರುವ ಇದೇ ನಟನಿಗೆ 'ಡಿ-ಬಾಸ್' ಅಲ್ಲ 'ಬೆರಳು' ಬಾಸ್ ಅಂತಾ ಕರೆಯುತ್ತಿದ್ದಾರೆ ಕನ್ನಡಿಗರು.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications