Darshan Thoogudeepa: ದರ್ಶನ್ ತೂಗುದೀಪ್ ಸ್ವಲ್ಪ ಹೆಚ್ಚುಕಮ್ಮಿ ಮಾಡಿದ್ರೂ ಮತ್ತೆ ಬಳ್ಳಾರಿ ಜೈಲಿಗೆ...

ಬಳ್ಳಾರಿ ಜೈಲಿನಿಂದ ಡಿ-ಬಾಸ್ ದರ್ಶನ್ ತೂಗುದೀಪ್ ರಿಲೀಸ್ ಆಗಿ ಹೊರಗೆ ಬಂದಿದ್ದರೂ, ಕಂಟಕಗಳು ಮಾತ್ರ ಒಂದೊಂದಾಗಿ ಮತ್ತೆ ಮತ್ತೆ ಬೆನ್ನು ಹತ್ತುತ್ತಿವೆ. ಅದರಲ್ಲೂ ಪೊಲೀಸ್ ಪಡೆ ಇದೀಗ ದರ್ಶನ್ ತೂಗುದೀಪ್ ದಾಖಲಾಗಿರುವ ಬಿಜಿಎಸ್ ಆಸ್ಪತ್ರೆ ಸುತ್ತಮುತ್ತ ಹದ್ದಿನ ಕಣ್ಣಿಟ್ಟಿದೆ. ದರ್ಶನ್ ತೂಗುದೀಪ್ ಅಥವಾ ಜೊತೆಗಾರರು ಸಾಕ್ಷ್ಯ ನಾಶಕ್ಕೆ ಏನಾದರೂ ಪ್ರಯತ್ನ ಮಾಡ್ತಿದ್ದಾರಾ? ಎಂಬ ಬಗ್ಗೆ ಪದೇ, ಪದೇ ಮಾಹಿತಿ ಪಡೆಯುತ್ತಿದ್ದಾರಂತೆ. ಹೀಗಿದ್ದಾಗಲೇ, ದರ್ಶನ್ ತೂಗುದೀಪ್ ಸ್ವಲ್ಪ ಹೆಚ್ಚುಕಮ್ಮಿ ಮಾಡಿದ್ರೂ ಮತ್ತೆ ಬಳ್ಳಾರಿ ಜೈಲಿಗೆ...

ಡಿ-ಬಾಸ್ ದರ್ಶನ್ ಅವರಿಗೆ ಒಂದಾದ ನಂತರ ಒಂದೊಂದು ಸಮಸ್ಯೆಗಳು ಎದುರಾಗುತ್ತಿವೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಒಂದು ಕಡೆ ದೊಡ್ಡ ಆರೋಗ್ಯ ಸಮಸ್ಯೆ ಎದುರಾಗಿ ಪರದಾಡುತ್ತಿದ್ದಾರೆ, ದಿನದಿಂದ ದಿನಕ್ಕೆ ಬೇರೆ ಬೇರೆ ಸಮಸ್ಯೆಗಳು ಕೂಡ ಹೆಚ್ಚಾಗುತ್ತಿದೆ. ಇದೇ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮೇಲೆ ಬೆಂಗಳೂರು ಪೊಲೀಸರು ಹದ್ದಿನ ಕಣ್ಣು ಇಟ್ಟಿದ್ದಾರೆ, ಹಾಗಾದ್ರೆ ಪೊಲೀಸರು ದರ್ಶನ್ ತೂಗುದೀಪ್ & ಅವರ ಜೊತೆಗಾರರನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇರೋದು ಯಾಕೆ? ಚಲನವಲನ ಗಮನಿಸುತ್ತಿರುವುದು ಯಾಕೆ? ದಿಢೀರ್ ಮತ್ತೆ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿಗೆ...? ಮುಂದೆ ಓದಿ.

Darshan Thoogudeepa Is Under Treatment And Still On Observation

ದರ್ಶನ್ ತೂಗುದೀಪ್ ಅವರಿಗೆ ಸಂಕಷ್ಟ?

ಬಳ್ಳಾರಿ ಜೈಲಿಂದ ದರ್ಶನ್ ತೂಗುದೀಪ್ ಅವರನ್ನ ರಿಲೀಸ್ ಮಾಡುವಾಗ ಮಾನ್ಯ ಹೈಕೋರ್ಟ್ ಹಲವು ಷರತ್ತು ವಿಧಿಸಿದೆ. ಅದರಲ್ಲೂ ಪ್ರಮುಖವಾಗಿ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ, ಸಾಕ್ಷಿಗಳಿಗೆ ಯಾವುದೇ ರೀತಿ ಬೆದರಿಕೆ ಹಾಕದಂತೆ ಖಡಕ್ ವಾರ್ನಿಂಗ್ ಕೂಡ ಕೊಡಲಾಗಿದೆ. ಈಗ ಇದೇ ಆದೇಶದ ಹಿನ್ನೆಲೆ ದರ್ಶನ್ ತೂಗುದೀಪ್ ಅವರ ಮೇಲೆ ಪೊಲೀಸ್ ಪಡೆಯಿಂದ ಹದ್ದಿನ ಕಣ್ಣು ಇಡಲಾಗಿದೆ.

ಅಂದಹಾಗೆ ದರ್ಶನ್ ತೂಗುದೀಪ್ ಅವರನ್ನು ಬಳ್ಳಾರಿ ಜೈಲಿನಿಂದ ಆರೋಗ್ಯದ ಸಮಸ್ಯೆಯ ಕಾರಣ ರಿಲೀಸ್ ಮಾಡುವಾಗ, ಮಾನ್ಯ ಹೈಕೋರ್ಟ್ ಹಲವು ಕಠಿಣ ಷರತ್ತುಗಳನ್ನ ವಿಧಿಸಿದೆ. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ರೇಣುಕಾಸ್ವಾಮಿ ಕೊಲೆ ಕೇಸ್ ಸಾಕ್ಷ್ಯಗಳಿಗೆ ಬೆದರಿಕೆಯನ್ನ ಹಾಕಿರುವುದು ಗೊತ್ತಾದರೆ ಜಾಮೀನು ತಾನಾಗಿ ತಾನೇ ರದ್ದಾಗಲಿದೆ ಎಂಬ ಸೂಚನೆಯನ್ನ ಕೂಡ ನೀಡಲಾಗಿದೆ. ಹೀಗಿದ್ದಾಗಲೇ, ಕರ್ನಾಟಕ ಪೊಲೀಸರು ದರ್ಶನ್ ತೂಗುದೀಪ್ ಚಿಕಿತ್ಸೆ ಪಡೆಯುತ್ತಿರುವ ಬಿಜಿಎಸ್ ಆಸ್ಪತ್ರೆ ಸುತ್ತ ಸಿಕ್ಕಾಪಟ್ಟೆ ಕಣ್ಣಿಟ್ಟು ಕೂತಿದ್ದಾರೆ!

ಮಾನ್ಯ ಕೋರ್ಟ್‌ನ ಷರತ್ತು ಮೀರಿದರೆ....

ಸಾಕ್ಷ್ಯ ನಾಶ ಪಡಿಸಲು ಯತ್ನಿಸಬಾರದು & ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಗಲಿ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತೆ ಇಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಾಗಿ, ರೇಣುಕಾಸ್ವಾಮಿ ಕೊಲೆ ಕೇಸ್‌ನ 2ನೇ ಆರೋಪಿ ದರ್ಶನ್ ತೂಗುದೀಪ್ ಅವರು ನೇರವಾಗಿ, ಈ ಕೇಸ್‌ನ ಸಾಕ್ಷಿಗಳ ಸಂಪರ್ಕಕ್ಕೆ ಬರಬಾರದು ಎಂದು ಎಚ್ಚರಿಸಲಾಗಿದೆ.

ಹೀಗಾಗಿಯೇ ಈಗ ಆಸ್ಪತ್ರೆಯಲ್ಲಿ ದರ್ಶನ್ ತೂಗುದೀಪ್ ಅವರ ಭೇಟಿಗೆ ಯಾರೆಲ್ಲ ಬರ್ತಿದ್ದಾರೆ? ಡಿ-ಬಾಸ್ ದರ್ಶನ್ ತೂಗುದೀಪ್ ಯಾರ ಯಾರ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ? ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇನ್ನು ಅಕಸ್ಮಾತ್ ಕೋರ್ಟ್‌ನ ಷರತ್ತು ಮೀರಿದರೆ, ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿ ಜೈಲು ಸೇರುವುದು ಗ್ಯಾರಂಟಿ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+