Darshan Thoogudeepa: ಬಳ್ಳಾರಿ ಜೈಲಿಂದ ರಿಲೀಸ್ ಆಗಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕಾಲಿನಲ್ಲಿ...
ಡಿ-ಬಾಸ್... ಡಿ-ಬಾಸ್... ಡಿ-ಬಾಸ್... ಹೀಗೆ ಎಲ್ಲೆಲ್ಲೂ ಡಿ-ಬಾಸ್... ಎಂಬ ಹೆಸರು ಕರ್ನಾಟಕದ ಮೂಲೆ ಮೂಲೆಯಲ್ಲೂ ಕೇಳಿ ಬರುತ್ತಿದೆ. ಯಾಕೆ ಅಂದ್ರೆ ಡಿ-ಬಾಸ್ ಎನ್ನುವ ಬಿರುದು ಪಡೆದಿರುವ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿದ್ದು ಹೊರಗೆ ಬಂದಿದ್ದಾರೆ. ಆದರೆ ದರ್ಶನ್ ತೂಗುದೀಪ್ ಅವರಿಗೆ ಆರೋಗ್ಯದ ಸಮಸ್ಯೆ ಇದೀಗ ದೊಡ್ಡದಾಗಿ ಕಾಡುತ್ತಿದ್ದು, ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಇಂತಹ ಸಮಯದಲ್ಲೇ ಬಿಜಿಎಸ್ ಆಸ್ಪತ್ರೆ ವೈದ್ಯರು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕಾಲಿನಲ್ಲಿ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನು ನೋವು ಮತ್ತಷ್ಟು ಹೆಚ್ಚಾಗಿದ್ದು, ಅವರಿಗೆ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. ದರ್ಶನ್ ತೂಗುದೀಪ್ ಅವರ ಪರಿಸ್ಥಿತಿ ನೋಡಿ ಒಂದ್ಕಡೆ ಅಭಿಮಾನಿಗಳು ನರಳುತ್ತಿದ್ದರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕುಟುಂಬ ಸದಸ್ಯರು ಕೂಡ ಪರದಾಡುತ್ತಿದ್ದಾರೆ. ಹೀಗಿದ್ದಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆರೋಗ್ಯ ಸಮಸ್ಯೆ ಬಗ್ಗೆ ಬಿಜಿಎಸ್ ಆಸ್ಪತ್ರೆಯ ವೈದ್ಯರು ಸ್ಫೋಟಕ....

ಡಿ-ಬಾಸ್ ದರ್ಶನ್ ಅವರಿಗೆ ಏನಾಗಿದೆ?
2013ರ ಸಮಯದಲ್ಲಿ ಸಿನಿಮಾ ಶೂಟಿಂಗ್ ಒಂದು ನಡೆಯುವ ಸಮಯದಲ್ಲಿ ನಟ ದರ್ಶನ್ ತೂಗುದೀಪ್ ಅವರು ಕುದುರೆ ಮೇಲಿಂದ ಜಾರಿ ಬಿದ್ದಿದ್ದರು. ಬೃಂದಾವನ ಸಿನಿಮಾ ಶೂಟಿಂಗ್ ಸಮಯದಲ್ಲಿ ಈ ಘಟನೆ ನಡೆದಿತ್ತು ಎನ್ನಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಓಡಾಡ್ತಿದೆ.
ಬೆನ್ನು ನೋವು ಶುರುವಾಗಿದ್ದು ಹೇಗೆ?
ಡಿ-ಬಾಸ್ ದರ್ಶನ್ ಅವರು ಯಾವುದೇ ಸಿನಿಮಾ ಇದ್ದರೂ ಆಕ್ಷನ್ ಮಾಡುವಲ್ಲಿ ಫೇಮಸ್. ಆದರೆ ಇದೇ ರೀತಿ ಅದ್ಭುತ ಸೀನ್‌ನಲ್ಲಿ ನಟನೆ ಮಾಡುವಾಗಲೇ ಡಿ-ಬಾಸ್‌ಗೆ ಪೆಟ್ಟು ಆಗಿತ್ತು. ಹೀಗೆ 11 ವರ್ಷದ ಹಿಂದೆ ಬಿದ್ದು ನೋವು ಮಾಡಿಕೊಂಡಿದ್ದರಂತೆ ದರ್ಶನ್ ತೂಗುದೀಪ್ ಅವರು ಹೀಗಾಗಿ ಅವರಿಗೆ ಇದೀಗ ಬೆನ್ನು ನೋವು ಜೋರಾಗಿದೆ. ಈ ನಡುವೆ ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ ತೂಗುದೀಪ್ ಅವರಿಗೆ ಬೆನ್ನಿನಲ್ಲಿ ವಿಪರೀತ ನೋವು ಕಾಣಿಸಿಕೊಂಡು ನರಳುತ್ತಿದ್ದಾರೆ.
ಮತ್ತೊಂದು ಕಡೆ ಬೆನ್ನು ನೋವಿನ ಪರಿಣಾಮ ನರದಲ್ಲಿ ಸಮಸ್ಯೆ ಕಾಣಿಸಿಕೊಂಡ ಆರೋಪ ಕೂಡ ಕೇಳಿ ಬಂದಿದ್ದು, ಕಾಲು ಕೂಡ ಊತ ಬಂದಿದೆ ಎನ್ನಲಾಗಿದೆ. ವೈದ್ಯರು ಕೂಡ ಈ ಬಗ್ಗೆ ಮಾತನಾಡುತ್ತಾ ದರ್ಶನ್ ತೂಗುದೀಪ್ ಅವರ ಒಂದು ಕಾಲಿನಲ್ಲಿ ಸ್ಪರ್ಶ ಜ್ಞಾನ ಕಡಿಮೆ ಆಗಿರುವ ಸ್ಫೋಟಕ ಮಾಹಿತಿ ನೀಡಿದ್ದಾರೆ. ಈ ಸುದ್ದಿ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಬೆಚ್ಚಿ ಬೀಳುವಂತೆ ಮಾಡಿದೆ.
ಡಿ-ಬಾಸ್ ಬೇಗ ಗುಣಮುಖರಾಗಲಿ...
ಒಟ್ನಲ್ಲಿ ನಟ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿ ನರಳುವ ವಾತಾವರಣ ನಿರ್ಮಾಣ ಆಗಿದೆ. ಹೀಗಾಗಿ ಆದಷ್ಟು ಬೇಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಬರಲಿ ಎಂಬುದೇ ಎಲ್ಲರ ಆಶಯ. ಜೀವನದಲ್ಲಿ ಸಾಕಷ್ಟು ಕಷ್ಟ & ಸಮಸ್ಯೆ ಎದುರಿಸಿ ಗೆದ್ದು ಬೀಗಿರುವ ನಟನ ಈಗಿನ ಪರಿಸ್ಥಿತಿ ನೋಡಲು ಅಭಿಮಾನಿಗಳಿಗೂ ಸಾಕಷ್ಟು ನೋವು ನೀಡುತ್ತಿದೆ. ಇದೀಗ ವೈದ್ಯರು ಕೂಡ ವಿಶೇಷ ಚಿಕಿತ್ಸೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.












Click it and Unblock the Notifications