Darshan Thoogudeepa: ದರ್ಶನ್‌ಗೆ ಅನಾರೋಗ್ಯ: ಇದೇ ಕಾರಣಕ್ಕೆ ಸಿಗುತ್ತೆ ಜಾಮೀನು?
ಬೆಂಗಳೂರು ಅಕ್ಟೋಬರ್ 5: ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಾಯಾಗಿದ್ದರು. ಆದರೆ ಬಳ್ಳಾರಿ ಜೈಲಿಗೆ ಶಿಫ್ಟ ಆದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ದರ್ಶನ್ ಪ್ರಸ್ತುತ ಬೆನ್ನು ನೋವಿನಿಂದ ಬಳಲುತ್ತಿದ್ದಾರೆ. ಆದಷ್ಟು ಬೇಗ ದರ್ಶನ್‌ಗೆ ಸರ್ಜರಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದೇ ಕಾರಣಕ್ಕೆ ದರ್ಶನ್‌ಗೆ ಜಾಮೀನು ಸಿಗಬಹುದು ಎನ್ನಲಾಗುತ್ತಿದೆ.
ಹೌದು... ದರ್ಶನ್ ಆರೋಗ್ಯ ಸಮಸ್ಯೆಯನ್ನೇ ಮುಂದಿಟ್ಟುಕೊಂಡು ಅವರ ಪರ ವಕೀಲರು ಜಾಮೀನಿಗಾಗಿ ಕೋರ್ಟ್ ಮುಂದೆ ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾರೆ. ದರ್ಶನ್ ಬಳ್ಳಾರಿ ಜೈಲಿನಲ್ಲಿ ಅಂದುಕೊಂಡಂತೆ ಇರಲು ಆಗದೆ ಸಾಕಷ್ಟು ಸಮಸ್ಯೆಯನ್ನು ಎದರಿಸುತ್ತಿದ್ದಾರೆ. ಅವರಿಗೆ ಸರಿಯಾದ ಊಟ ಹಾಗೂ ಬೇಕಾದ ವ್ಯವಸ್ಥೆಗಳು ಸಿಗದೆ ಒದ್ದಾಡುತ್ತಿದ್ದಾರೆ. ಇತ್ತ ಅಂದುಕೊಂಡಂತೆ ಜಾಮೀನು ಕೂಡ ಸಿಗುತ್ತಿಲ್ಲ. ದರ್ಶನ್ ಪರ ವಕೀಲರು ಹಾಗೂ ಪತ್ನಿ ವಿಜಯಲಕ್ಷ್ಮಿ ಅದೆಷ್ಟೇ ಕಷ್ಟಪಟ್ಟರೂ ಕೂಡ ಜಾಮೀನು ಸಿಗುವುದು ಸುಲಭವಾಗುತ್ತಿಲ್ಲ.

ಹೀಗಾಗಿ ದರ್ಶನ್‌ಗೆ ಜಾಮೀನು ಸಿಗದೇ ಇರುವುದು ಒಂದು ಚಿಂತೆಯಾದರೆ ಮತ್ತೊಂದು ಬೆನ್ನುನೋವಿನ ಚಿಂತೆ ಕಾಡತೊಡಗಿದೆ. ದರ್ಶನ್‌ಗೆ ಹೆಚ್ಚು ಹೊತ್ತು ಕುಳಿತುಕೊಳ್ಳಲು ಆಗುತ್ತಿಲ್ಲ. ಹೆಚ್ಚು ಹೊತ್ತು ನಿಂತುಕೊಳ್ಳಲು ಆಗುತ್ತಿಲ್ಲ. ಹೀಗಾಗಿ ದರ್ಶನ್ ಬೆನ್ನುನೋವಿಗೆ ಸೊರಗಿ ಹೋಗಿದ್ದಾರೆ. ಹೀಗಾಗಿ ವೈದ್ಯರು ಅವರಿಗೆ ಸರ್ಜರಿ ಅಗತ್ಯವಿದೆ ಎಂದಿದ್ದಾರೆ. ಇದೇ ಕಾರಣದಿಂದಾಗಿ ದರ್ಶನ್‌ಗೆ ಜಾಮೀನು ಸಿಗುವ ಲಕ್ಷಣ ಇದೆ.
ದರ್ಶನ್ ಅವರ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಸರ್ಜರಿ ಮಾಡಿಸದೇ ಹೋದಲ್ಲಿ ಅದು ದೊಡ್ಡ ಸಮಸ್ಯೆಯಾಗಬಹುದು ಎಂದು ಸಲಹೆ ನೀಡಿದ್ದಾರೆ. ಆದರೆ ದರ್ಶನ್ ಬಳ್ಳಾರಿಯಲ್ಲಿ ಸರ್ಜರಿ ಮಾಡಿಸಿಕೊಳ್ಳಲು ತಯಾರಿಲ್ಲ. ಅವರು ಬೆಂಗಳೂರಿನಲ್ಲೇ ಸರ್ಜರಿ ಮಾಡಿಸಿಕೊಳ್ಳಲು ಬಯಸುತ್ತಿದ್ದಾರೆ. ಇದು ಬಳ್ಳಾರಿ ಜೈಲಾಧಿಕಾರಿಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಏನಾದರೂ ಹೆಚ್ಚು ಕಡಿಮೆ ಆದರೆ ತಾವು ಸೇಫ್ ಆಗಲು ದರ್ಶನ್ ಹೇಳಿಕೆಯನ್ನು ಜೈಲಾಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ. ಮುಂದೆ ಇದು ಯಾವ ಹಂತಕ್ಕೆ ಹೋಗುತ್ತೋ ಗೊತ್ತಿಲ್ಲ. ದರ್ಶನ್ ಒಂದೆಡೆ ಜಾಮೀನು ಪಡೆಯಲು ಒದ್ದಾಟ ನಡೆಸಿದರೆ ಮತ್ತೊಂದು ಕಡೆ ಬೆನ್ನುನೋವಿಗೆ ಸೊರಗಿ ಹೋಗಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ಬೇಕಾದ ವ್ಯವಸ್ಥೆ ಸಿಗದೇ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಬಳ್ಳಾರಿ ಜೈಲಿನಲ್ಲಿ ಒಂದೊಂದು ದಿನವೂ ದರ್ಶನ್‌ಗೆ ತಿಂಗಳಾದಂತಹ ಅನುಭವ ನೀಡುತ್ತಿದೆ. ಹೀಗಾಗಿ ದರ್ಶನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಕ್ಕ ವ್ಯವಸ್ಥೆಗಳು ಬಳ್ಳಾರಿ ಜೈಲಿನಲ್ಲಿ ಸಿಗದೆ ಸಾಕಷ್ಟ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡ ತೊಡಗಿವೆ.
ಜೈಲಾಧಿಕಾರಿಗಳಿಗೆ ದರ್ಶನ್ ನಿರ್ಧಾರಗಳು ದೊಡ್ಡ ತಲೆ ನೋವಾಗಿದೆ. ಬಳ್ಳಾರಿಯಲ್ಲಿ ದರ್ಶನ್ ಸರ್ಜರಿ ಮಾಡಿಸಿಕೊಳ್ಳಲು ಒಪ್ಪಿದರೆ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಲು ಜೈಲಾಧಿಕಾರಿಗಳು ಸಿದ್ಧರಿದ್ದಾರೆ. ಆದರೆ ದರ್ಶನ್ ಮಾತ್ರ ಇದಕ್ಕೆ ಒಪ್ಪುತ್ತಲೇ ಇಲ್ಲ. ತಾವು ಬೆಂಗಳೂರಿನಲ್ಲೇ ಸರ್ಜರಿ ಮಾಡಿಸಿಕೊಳ್ಳಬೇಕು ಅಂತ ಹಠ ಹಿಡಿದಿದ್ದಾರೆ.
ನಿತ್ಯ ನೋವು ಕೂಡ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಯಾವುದು ಮಾಡಬೇಕು ಯಾವುದು ಬಿಡಬೇಕು ಅನ್ನೋದೇ ಜೈಲಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಶುಕ್ರವಾರ ನಡೆದ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ಮುಂದೂಡಲಾಗಿದ್ದು, ಇಂದು ಕೋರ್ಟ್ ಯಾವ ಆದೇಶ ಹೊರಡಿಸಲಿದೆ ಎಂದು ಕಾದು ನೋಡಬೇಕಿದೆ. ಒಂದು ವೇಳೆ ದರ್ಶನ್‌ಗೆ ಸರ್ಜರಿ ಕಾರಣ ಇಟ್ಟುಕೊಂಡು ಜಾಮೀನು ನೀಡಿದರೂ ಆಚ್ಚರಿ ಪಡಬೇಕಿಲ್ಲ.












Click it and Unblock the Notifications