Darshan Thoogudeepa: ಬಳ್ಳಾರಿ ಜೈಲಿಗೆ ಬಂದ ದರ್ಶನ್ ತೂಗುದೀಪ್‌ಗೆ ಹೊಸ ಸಮಸ್ಯೆ ಶುರು! ಬಗೆಹರಿಸದಿದ್ದರೆ ಕಷ್ಟ.. ಕಷ್ಟ..
ದರ್ಶನ್ ತೂಗುದೀಪ್ ಹಣೆಬರಹ ಸರಿ ಇಲ್ಲ ಅಂತಾ ಕಾಣುತ್ತದೆ. ಟೈಂ ಖರಾಬ್ ಆಗಿ ಈಗ ಅಭಿಮಾನಿಗಳ ಪಾಲಿನ 'ಡಿ-ಬಾಸ್'ಗೆ ಸಾಲು ಸಾಲು ಸಂಕಷ್ಟ ಎದುರಾಗುತ್ತಿದೆ. ಅದ್ರಲ್ಲೂ ಬೆಂಗಳೂರಿನ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಿಂದ, ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ನಟ ದರ್ಶನ್‌ಗೆ ಹೊಸ ಸಮಸ್ಯೆ ಶುರುವಾಗಿದೆ. ಈ ಸಮಸ್ಯೆಯ ಕಾರಣಕ್ಕೆ ವಿಲವಿಲ ಒದ್ದಾಟ ನಡೆಸಿರುವ ದರ್ಶನ್ ತೂಗುದೀಪ್, ಅದೊಂದು ಸಮಸ್ಯೆ ಸರಿ ಮಾಡಿ ಸಾರ್ ಪ್ಲೀಸ್ ಅಂತಾ ಜೈಲಿನ ಅಧಿಕಾರಿಗಳ ಎದುರು ಪರಿ ಪರಿಯಾಗಿ ಬೇಡಿಕೆ ಇಟ್ಟಿದ್ದಾರಂತೆ!
ಕನ್ನಡ ಸಿನಿಮಾ ರಂಗದಲ್ಲಿ ದರ್ಶನ್ ತೂಗುದೀಪ್, ಒಂದೊಂದು ಸಿನಿಮಾಗೂ 20 ಕೋಟಿ ರೂಪಾಯಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು ಎಂಬ ಮಾತು ಇದೆ. ಆದರೆ ದರ್ಶನ್ ಅಥವಾ ಅವರಿಗೆ ಸಂಬಂಧಪಟ್ಟ ಯಾರೂ ಕೂಡ ಇಷ್ಟು ಕೋಟಿ ಸಂಭಾವನೆ ಪಡೆಯುತ್ತಾರೆ ದರ್ಶನ್ ಎಂಬ ಮಾಹಿತಿ ಅಧಿಕೃತವಾಗಿ ತಿಳಿಸಿಲ್ಲ. ಆದರೂ ದರ್ಶನ್ ತೂಗುದೀಪ್ ಸಿನಿಮಾ ಶೂಟಿಂಗ್ ಮಾಡುವಾಗ ಲಕ್ಷ ಲಕ್ಷ ರೂಪಾಯಿ ಬಾಡಿಗೆ ಇರುವ ಹೋಟೆಲ್ ಕೋಣೆ ಒಳಗಡೆ ಉಳಿದುಕೊಳ್ಳುತ್ತಿದ್ದರು. ಆದರೆ ಈಗ ಸೊಳ್ಳೆ, ನೊಣ, ಟಾಯ್ಲೆಟ್ ವಾಸನೆ ಇರುವ ಬಳ್ಳಾರಿ ಜೈಲಿನ ಕೋಣೆಗಳಲ್ಲಿ ವಾಸ ಮಾಡುವಂತೆ ಆಗಿದೆ. ಹೀಗಿದ್ದಾಗ ನಟ ದರ್ಶನ್ ಅವರಿಗೆ ಭಾರಿ ದೊಡ್ಡ ಸಮಸ್ಯೆ ಒಂದು ಬಳ್ಳಾರಿ ಜೈಲಿನೊಳಗೆ ಶುರುವಾಗಿದೆ!

ಡಿ-ಬಾಸ್ ಎದುರಿಸುವ ಸಮಸ್ಯೆ ಏನು?
ದರ್ಶನ್ ತೂಗುದೀಪ್ ಮೊದಲೇ ಹೇಳಿದಂತೆ ಐಷಾರಾಮಿ, ಕೋಟಿ ಕೋಟಿ ಬೆಲೆಬಾಳುವಂತಹ ಮನೆಗಳಲ್ಲಿ & ಹೋಟೆಲ್ ರೂಂಗಳಲ್ಲಿ ವಾಸ ಮಾಡಿದ್ದರು. ಹೀಗಾಗಿ ಅಲ್ಲಿ ಅವರಿಗೆ ವೆಸ್ಟರ್ನ್ ಅಂದ್ರೆ ಪಾಶ್ಚಿಮಾತ್ಯ ಶೈಲಿಯ ಟಾಯ್ಲೆಟ್ ಇದ್ದವು. ಆದರೆ ಈಗ ನಟ ದರ್ಶನ್ ಅವರಿಗಾಗಿ ಜೈಲಿನ ಕೋಣೆ ಒಳಗೆ ವೆಸ್ಟರ್ನ್ ಅಂದ್ರೆ ಪಾಶ್ಚಿಮಾತ್ಯ ಶೈಲಿಯ ಟಾಯ್ಲೆಟ್ ಕಮೋಡ್‌ಗಳು ಇಲ್ಲ.
ಹೀಗಾಗಿ ಇಂಡಿಯನ್ ಸ್ಟೈಲ್ ಟಾಯ್ಲೆಟ್ ಒಳಗೆ ಕೂರಬೇಕಿದೆ ದರ್ಶನ್. ಇದು ಕನ್ನಡ ಸಿನಿಮಾ ರಂಗದ ಟಾಪ್ ಹೀರೋ ಡಿ-ಬಾಸ್ ಎಂದು ಕರೆಸಿಕೊಳ್ಳುತ್ತಿದ್ದ ದರ್ಶನ್ ಅವರಿಗೆ ಕಂಟಕದ ಸಮಯ ತಂದಿದೆ. ಹೀಗಾಗಿ ಬಳ್ಳಾರಿ ಜೈಲಿನಲ್ಲಿ ಟಾಯ್ಲೆಟ್ ಮಾಡಲು ಆಗದೆ ನಟ ದರ್ಶನ್ ತೀವ್ರ ಪರದಾಡುತ್ತಿದ್ದು, ಅಧಿಕಾರಿಗಳ ಬಳಿ ಏನು ಹೇಳುತ್ತಿದ್ದಾರಂತೆ ಗೊತ್ತಾ?
ಸಾರ್ ಒಂದು ಚೇರ್ ಕೊಡಿ ಪ್ಲೀಸ್!
ಭಾರತದ ಬಹುತೇಕ ಜೈಲುಗಳಲ್ಲಿ ಇರುವುದು ನಮ್ಮ ಭಾರತೀಯ ಶೈಲಿಯ ಟಾಯ್ಲೆಟ್‌ಗಳು. ಹೀಗಾಗಿ ಖೈದಿಗಳು ಇದೇ ಜೈಲು ಕೋಣೆಗಳಲ್ಲಿ, ಇಂಡಿಯನ್ ಸ್ಟೈಲ್ ಟಾಯ್ಲೆಟ್ ಬಳಸಬೇಕಿದೆ. ಆದರೆ ದರ್ಶನ್ ರೀತಿಯ ವಿಐಪಿ ಖೈದಿಗಳಿಗೆ ಇದು ಕಷ್ಟವಾಗುತ್ತಿದ್ದು, ಇದೀಗ ದರ್ಶನ್ ತಮ್ಮ ದಿನ ನಿತ್ಯದ ಕರ್ಮ ಮುಗಿಸಲು ಬಳ್ಳಾರಿ ಜೈಲಿನ ಅಧಿಕಾರಿಗಳ ಬಳಿ ಒಂದೇ ಒಂದು ಚೇರ್ ಬೇಕು ಅಂತಾ ಕೇಳಿ ಕೊಳ್ಳುತ್ತಿದ್ದಾರಂತೆ. ಇದು ಅಭಿಮಾನಿಗಳಿಗೆ ಮತ್ತಷ್ಟು ಬೇಸರ ತರಿಸಿದೆ.












Click it and Unblock the Notifications