Darshan Thoogudeepa: ತಲೆ ಹಿಡಿಬೇಡಿ, ತಲೆ ಹೊಡಿಬೇಡಿ ಎಂದಿದ್ದ ದರ್ಶನ್ ತೂಗುದೀಪ್ ಅವರು ರೌಡಿಶೀಟರ್ ಜೊತೆ ಮಾಡಿದ್ದು ಏನು?

ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದರೂ, ಒಂದು ಚೂರು ಕೂಡ ಬೇಸರ ಇಲ್ಲದೆ ರೌಡಿಶೀಟರ್ ನಾಗನ ಜೊತೆಗೆ ಮಸ್ತಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಅದರಲ್ಲೂ ಜೈಲಿನ ಒಳಗೆ ರೌಡಿಶೀಟರ್ ನಾಗ ಜೊತೆಗೆ ಕೂತಿರುವ ದರ್ಶನ್ ತೂಗುದೀಪ್ ಒಂದು ಕೈಯಲ್ಲಿ ಟೀ ಕಪ್ & ಮತ್ತೊಂದು ಕೈಯಲ್ಲಿ ಸಿಗರೇಟ್ ಕೂಡ ಹಿಡಿದು ಕೂತಿರುವ ಫೋಟೋ ವೈರಲ್ ಆಗುತ್ತಿದೆ. ಹಾಗಾದ್ರೆ ರೌಡಿಶೀಟರ್ ಜೊತೆಗೆ ಕನ್ನಡದ ನಟನಿಗೆ ಏನು ಕೆಲಸ? ಬನ್ನಿ ತಿಳಿಯೋಣ.

ದರ್ಶನ್ ತೂಗುದೀಪ್ & ರೌಡಿ ಶೀಟರ್ ನಾಗ ಅಲಿಯಾಸ್ ನಾಗರಾಜ್ ನಡುವೆ ಮೊದಲಿನಿಂದ ಕೂಡ ಆತ್ಮೀಯತೆ ಇದ್ದು, ಹಲವು ವ್ಯವಹಾರ ನಡೆದಿದ್ದವು ಎಂಬ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಮಾಡಲಾಗಿತ್ತು. ಈ ನಡುವೆಯೇ, ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ತೂಗುದೀಪ್ ಮತ್ತೊಮ್ಮೆ ರೌಡಿ ಶೀಟರ್ ನಾಗ ಜೊತೆಗೆ ಓಡಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಇದೀಗ ಈ ಆರೋಪ ಸಾಬೀತು ಮಾಡುವಂತೆ ರೌಡಿ ಶೀಟರ್ ನಾಗ ಜೊತೆಗೆ ಕೂತು ದರ್ಶನ್ ತೂಗುದೀಪ್ ಸಿಗರೇಟ್ ಸೇದುತ್ತಾ ಟೀ ಕುಡಿಯುತ್ತಿರುವ ಫೋಟೋ ವೈರಲ್ ಆಗಿದೆ! ಹಾಗಾದರೆ ಇಬ್ಬರ ನಡುವೆ ಏನು ಸಂಬಂಧ?

Darshan Thoogudeepa Is Doing This In Parappana Agrahara

ದರ್ಶನ್ ತೂಗುದೀಪ್‌ಗೆ ರೌಡಿಗಳ ಸಂಪರ್ಕ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ ನಂತರ ದರ್ಶನ್ ತೂಗುದೀಪ್‌ಗೆ ಒಂದಾದ ನಂತರ ಒಂದು ಸಂಕಷ್ಟ ಎದುರಾಗುತ್ತಿದೆ. ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಅವರಿಗೆ ರೌಡಿಗಳ ಸಂಪರ್ಕವಿದೆ ಎಂದು ಆರೋಪಿಸಲಾಗಿತ್ತು. ಈ ಮಧ್ಯೆ ಕರ್ನಾಟಕದ ಮೂಲೆ ಮೂಲೆಯಲ್ಲೂ ದರ್ಶನ್ ತೂಗುದೀಪ್ & ರೌಡಿಗಳ ಮಧ್ಯೆ ಹಲವು ರೀತಿ ವ್ಯವಹಾರ ಇದೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಈ ಆರೋಪಗಳಿಗೆ ಇದೀಗ ಬಲವಾದ ಸಾಕ್ಷಿ ಸಿಕ್ಕಿದ್ದು, ನಟ ದರ್ಶನ್ ತೂಗುದೀಪ್ ಬೆಂಗಳೂರಿನ ಟಾಪ್ ರೌಡಿಗಳ ಪೈಕಿ ಮುಂಚೂಣಿಯಲ್ಲಿ ಇರುವ ರೌಡಿ ಶೀಟರ್ ನಾಗ ಜೊತೆಗೆ ಕಾಣಿಸಿಕೊಂಡಿದ್ದಾರೆ.

ಜೈಲಿನಲ್ಲಿ ಹೆಂಡ & ಸಿಗರೇಟ್ ಸಪ್ಲೈ?

ಒಟ್ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿಗಳಿಗೂ ರಾಜ ಮರ್ಯಾದಿ ಸಿಗುತ್ತಿದೆಯಾ? ದುಡ್ಡು ಇದ್ದರೆ ಕೊಲೆ ಆರೋಪಿಗು ಜೈಲು ಸ್ವರ್ಗ ಆಗುತ್ತಾ? ಅಂತಾ ಜನರು ರೊಚ್ಚಿಗೆದ್ದಿದ್ದು ಈ ಘಟನೆ ಬಗ್ಗೆ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅವರ ಈ ಫೋಟೋ ಬಿರುಗಾಳಿ ಎಬ್ಬಿಸಿದ್ದು. ಅಲ್ಲದೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.

ಆದರೆ ದರ್ಶನ್ ತೂಗುದೀಪ್ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂಡ ಸಿಗರೇಟ್ ಸಿಕ್ಕಿದ್ದು ಹೇಗೆ? ಎಂಬ ಪ್ರಶ್ನೆ ಇಡೀ ಕರ್ನಾಟಕದ ಜನರನ್ನು ಕಾಡುತ್ತಿದೆ. ಹೀಗಾಗಿ, ಮುಂದೆ ಯಾವ ಕ್ರಮ ಕೈಗೊಳ್ಳಲಾಗುತ್ತೆ? ಅನ್ನೋದನ್ನ ಕಾದು ನೋಡಬೇಕಿದೆ. ಇದರ ಜೊತೆಗೆ ಈ ಫೋಟೋ ಲೀಕ್ ಆದ ನಂತರ ಮತ್ತೊಮ್ಮೆ ಈಗ ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆದರೂ ನಡೆಯಬಹುದು ಎಂಬ ಆರೋಪ ಕೇಳಿಬರುತ್ತಿದೆ. ಹೀಗೆ, ಕರ್ನಾಟಕದ ಹಿರಿಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+