Darshan Thoogudeepa: ‘ತಲೆ ಹಿಡಿಬೇಡಿ & ತಲೆ ಹೊಡಿಬೇಡಿ... ಆದ್ರೆ ಮರ್ಮಾಂಗಕ್ಕೆ ಒದ್ದು ಬಳ್ಳಾರಿ...’
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಏನೇ ಮಾತನಾಡಿದರೂ ಅದು ಟ್ರೆಂಡ್ ಆಗುತ್ತೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಏನೇ ಮಾತನಾಡಿದರೂ ಅಲ್ಲಿ ಒಂದು ಹೊಸ ಇತಿಹಾಸವೇ ಸೃಷ್ಟಿ ಆಗುತ್ತೆ... ಇರಿ... ಇರಿ... ರೊಚ್ಚಿಗೇಳಬೇಡಿ, ಅಂದಹಾಗೆ ಈ ರೀತಿ ಡೈಲಾಗ್ ಹೇಳುವುದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಸ್ಥಿತಿ ಹೀಗಿದ್ದಾಗಲೇ, 'ತಲೆ ಹಿ*ಬೇಡಿ & ತಲೆ ಹೊ*ಬೇಡಿ... ಆದ್ರೆ ಮರ್ಮಾಂಗಕ್ಕೆ ಒದ್ದು ಬಳ್ಳಾರಿ...'
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮೈಕ್ ಹಿಡಿದು ಮಾತನಾಡುವ ವೇಳೆ ಹಲವು ಡೈಲಾಗ್ ಹೇಳಿದ್ದಾರೆ. ಆ ಡೈಲಾಗ್‌ಗಳು ಈಗಲೂ ವೈರಲ್ ಆಗುತ್ತಲೇ ಇರುತ್ತವೆ. ಆದರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಾವೇ ಹೊಡೆದ ಡೈಲಾಗ್ ಮೂಲಕವೇ ಇದೀಗ ವಿರೋಧಿಗಳಿಂದ ಟ್ರೋಲ್‌ಗೆ ಗುರಿಯಾಗುವ ಪರಿಸ್ಥಿತಿ ಬಂದಿದೆ! ಅರೆರೆ ಯಾರಪ್ಪಾ ಅದು ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನೇ ಟ್ರೋಲ್ ಮಾಡೋದು ಅಂದ್ರಾ? ಈ ನಿಮ್ಮ ಪ್ರಶ್ನೆಗೆ ಉತ್ತರ ಹುಡುಕೋಣ ಬನ್ನಿ!

'ತಲೆ ಹಿ*ಬೇಡಿ & ತಲೆ ಹೊ*ಬೇಡಿ...'
ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆ ಸುಳಿಗೆ ಸಿಲುಕಿ ನರಳುತ್ತಿದ್ದು, ಬೆನ್ನು ನೋವಿನ ಪರಿಣಾಮ, ಡಿ-ಬಾಸ್ ದರ್ಶನ್ ತೂಗುದೀಪ್‌ರಿಗೆ ನಾನಾ ರೀತಿ ಸಮಸ್ಯೆ ಎದುರಾಗಿವೆ. ಅದರಲ್ಲೂ, ಆರೋಗ್ಯ ಸಮಸ್ಯೆ ಜೊತೆಗೆ ಮತ್ತೊಮ್ಮೆ ಡಿ-ಬಾಸ್ ದರ್ಶನ್ ತೂಗುದೀಪರಿಗೆ ಬಳ್ಳಾರಿ ಜೈಲಿಗೆ ಹೋಗುವ ಅನಿವಾರ್ಯತೆಯೂ ಈಗ ನಿರ್ಮಾಣ ಆಗಿ ಆತಂಕ ಕಾಡುತ್ತಿದೆ. ಇಂತಹ ಸಮಯದಲ್ಲೇ, 'ತಲೆ ಹಿ*ಬೇಡಿ & ತಲೆ ಹೊ*ಬೇಡಿ... ಆದ್ರೆ ಮರ್ಮಾಂಗಕ್ಕೆ ಒದ್ದು ಬಳ್ಳಾರಿ...'
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಾಳಲ್ಲಿ ಜೂನ್ ತಿಂಗಳ ನಂತರ ಏನೇನೋ ನಡೆದು ಹೋಯಿತು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಪೊಲೀಸರಿಂದ ಅರೆಸ್ಟ್ ಆಗುವ ಕೆಲವು ತಿಂಗಳ ಹಿಂದೆ ಮಂಡ್ಯದಲ್ಲಿ ದೊಡ್ಡ ಕಾರ್ಯಕ್ರಮ ನಡೆದಿತ್ತು. ಇದೇ ಕಾರ್ಯಕ್ರಮದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಸೆಲೆಬ್ರಿಟೀಸ್ ಅಂದ್ರೆ ಕೋಟಿ ಕೋಟಿ ಅಭಿಮಾನಿಗಳಿಗೆ ಒಂದು ಮೆಸೇಜ್ ಕೊಟ್ಟಿದ್ದರು.
'ತಲೆ ಹಿಡಿಬೇಡಿ ಆದ್ರೆ ಮರ್ಮಾಂಗ...'
'ತಲೆ ಹಿಡಿಬೇಡಿ & ತಲೆ ಹೊಡಿಬೇಡಿ... ಆದ್ರೆ ನ್ಯಾಯವಾಗಿ ಬದುಕಿ...' ಅನ್ನೋ ಒಂದು ಬಹುದೊಡ್ಡ ಸಂದೇಶವನ್ನ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಕೋಟಿ, ಕೋಟಿ ಅಭಿಮಾನಿಗಳಿಗೆ ಕೊಟ್ಟಿದ್ದರು. ಆದರೆ ರೇಣುಕಾಸ್ವಾಮಿ ಮರ್ಮಾಂಗಕ್ಕೆ ಒದ್ದು, ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಆರೋಪ ಡಿ-ಬಾಸ್ ದರ್ಶನ್ & ಗ್ಯಾಂಗ್ ವಿರುದ್ಧ ಕೇಳಿ ಬಂದಿದೆ.
ಹೀಗೆ ಆರೋಪ ಬಂದ ನಂತರ ಇದೀಗ, ಡಿ-ಬಾಸ್ ದರ್ಶನ್ ಅವರ ಡೈಲಾಗ್‌ನ ಟ್ರೋಲ್ ಮಾಡಲಾಗುತ್ತಿದೆ. 'ತಲೆ ಹಿಡಿಬೇಡಿ & ತಲೆ ಹೊಡಿಬೇಡಿ... ಆದ್ರೆ ಮರ್ಮಾಂಗಕ್ಕೆ ಒದ್ದು ಬಳ್ಳಾರಿ ಜೈಲಿಗೆ ಹೋಗಿ...' ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್‌ರ ವಿರೋಧಿಗಳು ಈ ಸಂದರ್ಭದಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಡಿ-ಬಾಸ್ ಅಭಿಮಾನಿಗಳು ಇದೀಗ ಡಿ-ಬಾಸ್ ದರ್ಶನ್ ಅವರ ವಿರೋಧಿಗಳಿಗೆ, ಖಡಕ್ ಆಗಿ ತಕ್ಕ ಉತ್ತರವನ್ನು ನೀಡುತ್ತಿದ್ದಾರೆ.
ಪವಿತ್ರಾ ಗೌಡ ವಿರುದ್ಧ ಕೋಟಿ.. ಕೋಟಿ..
ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ತಾನು ಬಚಾವ್ ಆಗಲು ಪವಿತ್ರಾ ಗೌಡ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ ಎನ್ನುವ ಭಾರಿ ಗಂಭೀರ ಆರೋಪ ಕೇಳಿ ಬಂದಿದೆ. ಈ ಮೂಲಕ ಪವಿತ್ರಾ ಗೌಡ ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ಗಂಭೀರ ಆರೋಪ ಹೊರಿಸಲು ಸಜ್ಜಾಗಿದ್ದಾರೆ ಎಂಬ ಸ್ಫೋಟಕ ಆರೋಪ ಕೂಡ ಕೇಳಿ ಬಂದಿದ್ದು, ಪವಿತ್ರಾ ಗೌಡ ವಿರುದ್ಧ ಕೋಟಿ ಕೋಟಿ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ರೊಚ್ಚಿಗೆದ್ದು ತಿರುಗಿ ಬಿದ್ದಿದ್ದಾರೆ.












Click it and Unblock the Notifications