ದರ್ಶನ್ ಬಂಧನ ಖಂಡಿಸಿ, ದರ್ಶನ್ ಅಭಿಮಾನಿಗಳಿಂದ ಉಗ್ರ ಪ್ರತಿಭಟನೆ ಆರಂಭ: ಬೆಂಗಳೂರು & ಕರ್ನಾಟಕದಲ್ಲಿ ಭಾರಿ ಕಟ್ಟೆಚ್ಚರ!

ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ ಖಂಡಿಸಿ ದರ್ಶನ್ ಅವರ ಅಭಿಮಾನಿಗಳು ಈಗ ರೊಚ್ಚಿಗೆದ್ದು ಹೋರಾಟ ಆರಂಭಿಸಿದ್ದಾರೆ. ಹೀಗಿದ್ದಾಗ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಕಡೆ ಭಾರಿ ಸಂಖ್ಯೆಯಲ್ಲಿ ಇದೀಗ ದರ್ಶನ್ ಅಭಿಮಾನಿಗಳು ಗುಂಪು ಸೇರುತ್ತಿದ್ದು, ಭಾರಿ ದೊಡ್ಡ ಪ್ರತಿಭಟನೆಗೆ ಸಜ್ಜಾಗುತ್ತಿದ್ದಾರೆ. ಹಾಗಾದ್ರೆ ದರ್ಶನ್ ಅಭಿಮಾನಿಗಳು ಸೇರುತ್ತಿರುವುದು ಎಲ್ಲಿ? ವಿಡಿಯೋ ನೋಡಲು ಮುಂದೆ ಓದಿ.

ದರ್ಶನ್ ಅಭಿಮಾನಿಗಳು ಉಗ್ರ ಹೋರಾಟಕ್ಕೆ ಸಜ್ಜಾಗಿದ್ದಾರೆ, ಹೀಗಾಗಿ ಪೊಲೀಸರು ಕೂಡ ಪರಿಸ್ಥಿತಿ ನಿಭಾಸಲು ಸಜ್ಜಾಗಿದ್ದಾರೆ. ಅದರಲ್ಲೂ ದರ್ಶನ್‌ರ ಮನೆ ಇರುವ ರಾಜರಾಜೇಶ್ವರಿ ನಗರದಲ್ಲಿ ಪರಿಸ್ಥಿತಿಯು ಕೈಮೀರುತ್ತಿದೆ. ಆರ್‌ಆರ್ ನಗರದಲ್ಲಿ ದರ್ಶನ್ ಅವರ ಫೋಟೋ ಇರುವ ಬಾವುಟ ಹಿಡಿದು ದರ್ಶನ್ ಅವರ ಅಭಿಮಾನಿಗಳು ಜಮಾಯಿಸುತ್ತಿದ್ದಾರೆ. ಈಗಾಗಲೇ ಸಾವಿರಾರು ಅಭಿಮಾನಿಗಳು ರಾಜರಾಜೇಶ್ವರಿ ನಗರದಲ್ಲಿ ಒಂದೇ ಕಡೆ ಸೇರಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ತಿಳಿಯಲು & ದರ್ಶನ್ ಅಭಿಮಾನಿಗಳ ವಿಡಿಯೋ ನೋಡಲು ಮುಂದೆ ಓದಿ.

Darshan Thoogudeepa Fans Are Started Protest After Darshan Got Arrested

ದರ್ಶನ್ ಫ್ಯಾನ್ಸ್ ಹೋರಾಟ ಆರಂಭ

ಅಂದಹಾಗೆ ಈ ಹಿಂದೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ದರ್ಶನ್ & ಪವಿತ್ರ ಗೌಡ ಜಗಳ ದೊಡ್ಡ ಕಂಟಕ ತಂದಿತ್ತು. ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಆತ್ಮೀಯತೆ ಇದ್ದ ಕಾರಣ ಈ ರೀತಿ ಜಗಳ ಆಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಜಗಳ ಶುರುವಾದಾಗ ಈಗ ಕೊಲೆ ಆಗಿರುವ ರೇಣುಕಾಸ್ವಾಮಿ, ಪವಿತ್ರ ಗೌಡ ಅವರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿ ಪೋಸ್ಟ್ ಮಾಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈಗ ಅದೇ ರೇಣುಕಾಸ್ವಾಮಿ ಕೊಲೆ ಆಗಿದೆ.

ಈ ವಿಚಾರದಲ್ಲಿ ನಟ ದರ್ಶನ್ ಅವರ ವಿರುದ್ಧವೇ ಕೊಲೆ ಆರೋಪ ಕೇಳಿಬಂದಿದೆ. ಹೀಗೆ ಈ ಬಗ್ಗೆ ದರ್ಶನ್ ಅವ್ರನ್ನ ಬಂಧಿಸಿರುವುದು ಖಂಡಿಸಿ ದರ್ಶನ್ ಅವರ ಫ್ಯಾನ್ಸ್ ಉಗ್ರ ಹೋರಾಟ ಆರಂಭಿಸಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿದೆ, ಪ್ರತಿಭಟನೆಗೆ ಬ್ರೇಕ್ ಹಾಕಲು ಪೊಲೀಸರು ಸಜ್ಜಾಗಿದ್ದಾರೆ. ಹಾಗೇ ದರ್ಶನ್ ಅವರ ಅಭಿಮಾನಿಗಳು ಕೂಡ ಬೇರೆ ಬೇರೆ ರೀತಿಯಲ್ಲಿ ಹೋರಾಟ ಮಾಡಲು ಸಜ್ಜಾಗುತ್ತಿದ್ದಾರೆ.

ಸಾಲು ಸಾಲು ವಿವಾದಗಳು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿವಾದ ಎರಡೂ ಒಟ್ಟೊಟ್ಟಿಗೆ ಹುಟ್ಟಿವೆ ಅಂತಾನೇ ಕಾಣಿಸುತ್ತದೆ. ಯಾಕಂದ್ರೆ ನಟ ದರ್ಶನ್ ಮಾಡಿಕೊಳ್ಳುತ್ತಿರುವ ಕಿರಿಕ್ ಒಂದಲ್ಲ, ಎರಡಲ್ಲ. ಈ ನಟ ದರ್ಶನ್ ತನ್ನ ವೈವಾಹಿಕ ಜೀವನದಿಂದ ಹಿಡಿದು, ಹೊರಗಡೆ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವ ತನಕ ಹಲವು ಆರೋಪ ಎದುರಿಸಿದ್ರು. ಈಗ ನೋಡಿದರೆ ನೇರವಾಗಿ ಕೊಲೆ ಮಾಡಿಸುವ ಹಂತಕ್ಕೆ ಬಂದಿದ್ದಾರೆ ಎಂಬ ಆರೋಪ ಕನ್ನಡ ನಾಡಿನಲ್ಲಿ ಸಂಚಲನ ಸೃಷ್ಟಿಸಿ ರೊಚ್ಚಿಗೆಬ್ಬಿಸಿದೆ. ಹಾಗೇ ದರ್ಶನ್ ಅಭಿಮಾನಿಗಳು ಕೂಡ ಕೌಂಟರ್ ಅಟ್ಯಾಕ್ ಮಾಡ್ತಿದ್ದಾರೆ, ಹೋರಾಟ ಶುರು ಮಾಡಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.

ಮರ್ಮಾಂಗಕ್ಕೆ ಒದ್ದು, ಸುಟ್ಟು ಕೊಲೆ?

ದರ್ಶನ್ ಅವರು ಈ ಕೊಲೆ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಎನ್ನುವ ಗಂಭೀರ ಆರೋಪಗಳ ನಡುವೆ, ಇದೇ ಕಾರಣಕ್ಕೆ ದಿಢೀರ್ ದರ್ಶನ್ ಅವರನ್ನ ಇಂದು ಬೆಳಗ್ಗೆಯೇ ಅರೆಸ್ಟ್ ಮಾಡಿ ಮೈಸೂರಿನಿಂದ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ವಿಚಾರಣೆ ನಡೆಯುತ್ತಿರುವಾಗ ಆರೋಪಿಗಳಿಂದ ಪೊಲೀಸರು ಸತ್ಯ ಕಕ್ಕಿಸುತ್ತಿದ್ದಾರೆ.

ಈ ವೇಳೆ ಕೆಲವು ಆರೋಪಿಗಳು ಈ ಕೊಲೆಯನ್ನ ಹೇಗೆ ಮಾಡಿದ್ದು? ಎಂಬುದನ್ನ ವಿವರಿಸಿದ್ದಾರೆ ಅದರಲ್ಲೂ ರೇಣುಕಾಸ್ವಾಮಿ ಅವರ ಮರ್ಮಾಂಗಕ್ಕೆ ಒದ್ದು, ಸಲಾಕೆಯಿಂದ ಸುಟ್ಟು ಹಲ್ಲೆ ಮಾಡಿ ವಿಕೃತವಾಗಿ ಕೊಲೆ ಮಾಡಿರುವುದು ಬಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಶವ ಪರೀಕ್ಷೆಯ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ.

'ದರ್ಶನ್‌ಗೆ ಸಾವಿನ ಶಿಕ್ಷೆ ಕೊಡಿ'

ದರ್ಶನ್ & ಪವಿತ್ರ ಗೌಡ ಅವರಿಂದಲೇ ನನ್ನ ಮಗನ ಸಾವು ಆಗಿದೆ, ಹೀಗಾಗಿ ನನ್ನ ಮಗನಂತೆ ದರ್ಶನ್ & ಪವಿತ್ರ ಗೌಡ ಕೂಡ ಸಾಯಬೇಕು ಎಂದಿದ್ದಾರೆ ಮೃತ ರೇಣುಕಾಸ್ವಾಮಿ ಪೋಷಕರು. ನಿನ್ನೆ ಪೂರ್ತಿ ಬಿಕ್ಕಿ, ಬಿಕ್ಕಿ ಅತ್ತಿರುವ ರೇಣುಕಾಸ್ವಾಮಿ ಅವರ ಪೋಷಕರು & ಪತ್ನಿ, ದರ್ಶನ್‌ನ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕುತ್ತಿದ್ದು. ಅದ್ರಲ್ಲೂ ಯಾವ ರೀತಿ ನನ್ನ ಮಗ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿದೆಯೋ, ಅದೇ ರೀತಿ ದರ್ಶನ್‌ಗೆ ಕೂಡ ಶಿಕ್ಷೆ ಕೊಡಿ. ಹಾಗೇ ಪವಿತ್ರಾ ಗೌಡಗೆ ಕೂಡ ಇದೇ ರೀತಿ ಕಠಿಣ ಶಿಕ್ಷೆ ನೀಡಬೇಕು ಅಂತಿದ್ದಾರೆ ರೇಣುಕಾಸ್ವಾಮಿ ಅವರ ಅಪ್ಪ & ಅಮ್ಮ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+