Darshan Thoogudeepa: ದರ್ಶನ್ ತೂಗುದೀಪ್ ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ ಮುಂದೆ ದರ್ಶನ್ ಅವರ ಮನೆಗೆ ಸೆಕ್ಯೂರಿಟಿ?

ದರ್ಶನ್ ತೂಗುದೀಪ್, ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿಗೆ ಹೋದ ನಂತರ ಅಲ್ಲೋಲ ಕಲ್ಲೋಲ ಏರ್ಪಟ್ಟಿದೆ. ದರ್ಶನ್ ತೂಗುದೀಪ್ ಅವರ ಅಭಿಮಾನಿ ಬಳಗ ಈಗ ರೊಚ್ಚಿಗೆದ್ದು ಆಕ್ರೋಶ ಹೊರ ಹಾಕುತ್ತಿದೆ. ಅದ್ರಲ್ಲೂ ನಟ ದರ್ಶನ್ ತೂಗುದೀಪ್ ಅವರನ್ನ ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ ವಿರುದ್ಧ, ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಕ್ಯಾಂಪೇನ್ ಮಾಡುತ್ತಿದ್ದಾರೆ ದರ್ಶನ್ ಅವರ ಫ್ಯಾನ್ಸ್. ಹೀಗಿದ್ದಾಗಲೇ, ದರ್ಶನ್ ತೂಗುದೀಪ್ ರಿಲೀಸ್ ಆದ ನಂತರ, ಎಸಿಪಿ ಚಂದನ್ ದರ್ಶನ್ ಮನೆಗೆ ಸೆಕ್ಯೂರಿಟಿ ಆಗ್ತಾರಂತೆ!

ದರ್ಶನ್ ತೂಗುದೀಪ್ ಅವರ ಕೇಸ್ ಭಾರತದ ಮೂಲೆ ಮೂಲೆಯಲ್ಲೂ ಸಂಚಲನ ಸೃಷ್ಟಿಸಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ಆಗಿದ್ದ ದರ್ಶನ್ ತೂಗೂದೀಪ್ ಅವರನ್ನು ಅರೆಸ್ಟ್ ಮಾಡಲು ಹೋಗಿದ್ದೇ ಎಸಿಪಿ ಚಂದನ್ ಅವರು. ಮೈಸೂರಿಗೆ ಹೋಗಿ ನೇರವಾಗಿ ನಟ ದರ್ಶನ್ ತೂಗೂದೀಪ್ ಅವರನ್ನ ಅರೆಸ್ಟ್ ಮಾಡ್ಕೊಂಡು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದರು ACP ಚಂದನ್. ಹೀಗಿದ್ದಾಗ, ಬೇಕು ಅಂತ ಎಸಿಪಿ ಚಂದನ್ ಅವರನ್ನ ಟಾರ್ಗೆಟ್ ಮಾಡ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಶುರುವಾದ ವೇಳೆ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಂತಾ ಹೇಳಿಕೊಳ್ಳುವ ಕೆಲವು ಸೋಷಿಯಲ್ ಮೀಡಿಯಾ ಪೇಜ್‌ಗಳ ಅಡ್ಮಿನ್ಸ್ ಏನ್ ಮಾಡ್ತಿದ್ದಾರೆ ಗೊತ್ತಾ?

Darshan Thoogudeepa Fans Are Saying This About ACP Chandan

ದರ್ಶನ್ ಮನೆಗೆ ಚಂದನ್ ಸೆಕ್ಯೂರಿಟಿ?

ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ACP ಚಂದನ್ ಅವರ ವಿರುದ್ಧ ಕೆಲವರು ಇದೀಗ ವಿಡಿಯೋ ಮಾಡಿ ಅಪ್ಲೋಡ್ ಮಾಡುತ್ತಿದ್ದಾರೆ. ಈ ಹಿಂದೆ ACP ಚಂದನ್ ಅವರು ದರ್ಶನ್ ಅವರ ಬರ್ತ್ ಡೇ ಸಮಯದಲ್ಲಿ ಸೆಕ್ಯೂರಿಟಿ ನೀಡುವ ಸಲುವಾಗಿ ಅವರ ಮನೆಯ ಮುಂದೆ ನಿಂತಿರುವ ವಿಡಿಯೋ ಬಳಸುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ತೆಗೆದಿರುವ ವಿಡಿಯೋ ಇದು ಎನ್ನಲಾಗುತ್ತಿದೆ, ಅದೇ ಹಳೆಯ ವಿಡಿಯೋ ಬಳಸಿ ಈಗ ಪೊಲೀಸರ ಬಗ್ಗೆ ಏನ್ ಹೇಳ್ತಿದ್ದಾರೆ ಗೊತ್ತಾ ದರ್ಶನ್ ಅವರ ಅಭಿಮಾನಿಗಳು?

ACP ಚಂದನ್ ಅವರು ಹಳೇ ವಿಡಿಯೋದಲ್ಲಿ ದರ್ಶನ್ ಅವರ ಜೊತೆ ಮಾತನಾಡ್ತ ನಿಂತಿದ್ದಾರೆ. ಅದೇ ಹಳೇ ವಿಡಿಯೋ ಬಳಸಿ 'ಎಸಿಪಿ ಚಂದನ್ ಮತ್ತೊಮ್ಮೆ ನಮ್ಮ ಬಾಸ್ ಮನೆಗೆ ಸೆಕ್ಯೂರಿಟಿ ಕೊಡ್ತಾರೆ. ಮುಂದೆ ಎಸಿಪಿ ಚಂದನ್ ಖುದ್ದು ನಮ್ಮ ಡಿ-ಬಾಸ್ ಮನೆಗೆ ಸೆಕ್ಯೂರಿಟಿ ಆಗ್ತಾರೆ' ಅಂತಾ ಹೇಳುತ್ತಿದ್ದಾರೆ, ದರ್ಶನ್ ತೂಗುದೀಪ್ ಅಭಿಮಾನಿಗಳು ಅಂತಾ ಕರೆಸಿಕೊಂಡವರು. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪೊಲೀಸರು VS ದರ್ಶನ್ ಅವರ ಅಭಿಮಾನಿಗಳು ಎಂಬ ರೀತಿ ಜಗಳ ಶುರುವಾಗಿದೆ.

ದರ್ಶನ್ ರಿಲೀಸ್ ಆಗುವುದು ಯಾವಾಗ?

ದರ್ಶನ್ ತೂಗುದೀಪ್ ಅವರು ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಯಾಕಂದ್ರೆ ದರ್ಶನ್ ಅವರಿಗೆ ಜಾಮೀನು ನೀಡಲು ಇನ್ನೂ ಪೊಲೀಸರು ಚಾರ್ಜ್ ಶೀಟ್‌ನ ಸಲ್ಲಿಕೆ ಮಾಡಿಲ್ಲ. ತನಿಖೆ ನಡೆಸುತ್ತಿರುವ ಪೊಲೀಸರು ಚಾರ್ಜ್ ಶೀಟ್‌ನ ಹಾಕುವ ತನಕವೂ ಬೇಲ್ ಪಡೆಯಲು ಆಗಲ್ಲ. ದರ್ಶನ್ ಅವರ ಪರ ವಕೀಲರು ಜಾಮೀನು ಪಡೆಯೋದಕ್ಕಾಗಿ ಅರ್ಜಿ ಸಲ್ಲಿಸಲು ಆಗಲ್ಲ. ಹೀಗಾಗಿ ದರ್ಶನ್ ಅವರು ಜೈಲಿನಿಂದ ಹೊರಗೆ ಬರುವುದು ಭಾರಿ ತಡವಾಗುತ್ತಿದೆ. ಆದರೆ ಶೀಘ್ರದಲ್ಲೇ ಅವರು ಹೊರಗೆ ಬರ್ತಾರೆ ಅನ್ನೋದು ಅಭಿಮಾನಿಗಳ ನಂಬಿಕೆ ಆಗಿದೆ.

ಉಮಾಪತಿ ಗೌಡ ವಿರುದ್ಧವೂ ಫ್ಯಾನ್ಸ್ ಆಕ್ರೋಶ

3 ವರ್ಷದ ಹಿಂದೆ ಅಂದ್ರೆ 2021 ರಲ್ಲಿ ನಿರ್ಮಾಪಕ ಉಮಾಪತಿ & ನಟ ದರ್ಶನ್ ನಡುವೆ ದೊಡ್ಡ ಕಿರಿಕ್ ಆಗಿತ್ತು. ದೇಶಾದ್ಯಂತ ಈ ಸುದ್ದಿ ದೊಡ್ಡ ಸದ್ದು ಕೂಡ ಮಾಡಿತ್ತು. ಉಮಾಪತಿ ಗೌಡ & ದರ್ಶನ್ ತೂಗುದೀಪ್ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಸಿನಿಮಾ ಮ್ಯಾಟರ್‌ಗೆ ಶುರುವಾಗಿದ್ದ ಗಲಾಟೆ ಕೊನೆಗೆ ಬಂದು ನಿಂತಿದ್ದು ಮಾತ್ರ ಹೊಡಿ & ಬಡಿ ಎನ್ನುವ ಹಂತಕ್ಕೆ. ಹೀಗೆ ಒಬ್ಬರಿಗೆ ಮತ್ತೊಬ್ಬರು ಅಣ್ಣ & ತಮ್ಮ ರೀತಿ ಇದ್ದ ಉಮಾಪತಿ ಶ್ರೀನಿವಾಸ್ ಗೌಡ & ದರ್ಶನ್ ತೂಗುದೀಪ್ ಹೊಡೆದಾಡಿಕೊಂಡಿದ್ದು ಉಂಟು ಎಂಬ ಆರೋಪವೂ ಇದೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್‌ರ ಫ್ಯಾನ್ಸ್ ಉಮಾಪತಿ ವಿರುದ್ಧ ರೊಚ್ಚಿಗೆದ್ದು, ಈ ಹಿಂದೆ ಉಮಾಪತಿ ಅವರು ನೀಡಿರುವ ಹೇಳಿಕೆಗಳನ್ನ ಟ್ರೋಲ್ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+