43 ಜನ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳನ್ನು ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ... Darshan Thoogudeepa

ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಒಬ್ಬರೇ ಯಜಮಾನರು, ಡಿ-ಬಾಸ್ ದರ್ಶನ್ ತೂಗುದೀಪ್ ಕನ್ನಡ ಸಿನಿಮಾ ರಂಗ ಬಿಟ್ಟರೆ ಇಂಡಸ್ಟ್ರಿಗೆ ಅಪಾಯ ಗ್ಯಾರಂಟಿ ಅಂತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು. ಬಾಸ್ ನಾವು ನಿಮಗಾಗಿ ಜೀವ ಕೊಡಲು ಸಿದ್ಧ & ಜೈಲಿಗೆ ಬೇಕಾದರೂ ಹೋಗಲು ಸಿದ್ಧ ಅಂತಾ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಎದೆ ತಟ್ಟಿಕೊಂಡು ಹೇಳ್ತಾರೆ. ಹೀಗಿದ್ದಾಗಲೇ, 43 ಜನ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳನ್ನು ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ...

ಯೆಸ್, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ನಟಿ ರಮ್ಯಾ ವಿಚಾರದಲ್ಲಿ ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಟ್ಟು 43 ಜನರ ವಿರುದ್ಧ ಇದೀಗ ನಟಿ ರಮ್ಯಾ ಅವರು ಪೊಲೀಸರಿಗೆ ದೂರು ನೀಡಿರುವ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಒಬ್ಬೊಬ್ಬರಾಗಿ ಈ ಸಮಯದಲ್ಲಿ ಅರೆಸ್ಟ್ ಆಗಿ ಜೈಲು ಸೇರುತ್ತಿದ್ದಾರೆ. ಆದರೆ ಇದೇ ವಿಚಾರದ ಬಗ್ಗೆ ಇದೀಗ ದೊಡ್ಡ ಚರ್ಚೆ ನಡೆಯುತ್ತಿದ್ದು, ಮತ್ತೊಂದು ವಿಚಾರ ಕೂಡ ಇದೀಗ ಬೆಂಕಿಯ ಕಿಡಿಯನ್ನೇ ಹೊತ್ತಿಸಿದೆ. ಈ ಮೂಲಕ, ಮತ್ತೆ ನಟಿ ರಮ್ಯಾ ಅವರು ಹಾಗೂ ಡಿ-ಬಾಸ್ ಫ್ಯಾನ್ಸ್ ನಡುವೆ ವಾರ್ ಶುರುವಾಗಿದೆ...

Darshan Thoogudeepa Fans Are Facing This Situation After Ramya Statement

43 ಜನ ಡಿ-ಬಾಸ್ ದರ್ಶನ್ ತೂಗುದೀಪ್...

ಅಂದಹಾಗೆ ಪವಿತ್ರಾ ಗೌಡಗೆ ಅಶ್ಲೀಲ & ಕೆಟ್ಟ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ, ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಕಿಡ್ನಾಪ್ ಮಾಡಿ ಬೆಂಗಳೂರಿಗೆ ಕರೆತಂದು ಭೀಕರ ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಕೊನೆಗೆ ರೇಣುಕಾಸ್ವಾಮಿ ಬಾಡಿ ಬೆಂಗಳೂರಿನ ಬೀದಿಯಲ್ಲಿ ಸಿಕ್ಕಿದ್ದು, ಬೀದಿಯ ನಾಯಿಗಳು ಎಳೆದಾಡುವ ವೇಳೆ ಪೊಲೀಸರಿಗೆ ಕೇಸ್ ಗೊತ್ತಾಗಿತ್ತು. ಈ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸೇರಿ ಪವಿತ್ರಾ ಗೌಡ ಹಾಗೂ ಹಲವು ಆರೋಪಿಗಳು ಅರೆಸ್ಟ್ ಆಗಿ, ಸೆಂಟ್ರಲ್ ಜೈಲಿಗೂ ಹೋಗಿದ್ದರು. ಇದೀಗ ಜಾಮೀನು ಪಡೆದು ಅವರೆಲ್ಲಾ ರಿಲೀಸ್ ಆಗಿರುವಾಗಲೇ ಮತ್ತೊಂದು ಸ್ಫೋಟಕ ಸಂಗತಿ ಸಂಚಲನ ಸೃಷ್ಟಿ ಮಾಡಿದೆ!

43 ಜನ ಡಿ-ಬಾಸ್ ಅಭಿಮಾನಿಗಳು...

ಅಂದಹಾಗೆ ಕನ್ನಡ ಸಿನಿಮಾ ರಂಗದ ಡಿಂಪಲ್ ಕ್ವೀನ್ ಅಂತಾನೇ ಬಿರುದು ಪಡೆದಿರುವ ನಟಿ ರಮ್ಯಾ ಹಾಗೂ ಕೋಟಿ, ಕೋಟಿ ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ನಡುವೆ ದೊಡ್ಡ ಯುದ್ಧ ಶುರು ಆಗಿದೆ. ಈ ತಿಕ್ಕಾಟದಲ್ಲಿ ನಟಿ ರಮ್ಯಾ ಅವರಿಗೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದಾರೆ ಅನ್ನೋ ಕಾರಣಕ್ಕೆ ಇದೀಗ ಕಂಪ್ಲೆಂಟ್ ಕೊಟ್ಟು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲು ಆಗಿದೆ. ಹೀಗಾಗಿ ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಾಲು ಸಾಲು ಅಭಿಮಾನಿಗಳು ಅರೆಸ್ಟ್ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ದೂರು ನೀಡಿರುವ ಒಟ್ಟು 43 ಜನರನ್ನ ಕೂಡ ಅರೆಸ್ಟ್ ಮಾಡಿ ಜೈಲಿಗೆ ಹಾಕುವ ಸಾಧ್ಯತೆಯು ಕೂಡ ದಟ್ಟವಾಗಿದೆ.

ಇದೇ ವಿಚಾರವಾಗಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯು ಶುರುವಾಗಿದ್ದು, 43 ಜನ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳನ್ನು ಬಂಧಿಸಿ, ಪರಪ್ಪನ ಅಗ್ರಹಾರಕ್ಕೆ ಕಳಿಸುವ ಕುತಂತ್ರ ಇದಾಗಿದೆ ಅಂತಾ ಡಿ-ಬಾಸ್ ಫ್ಯಾನ್ಸ್ ಇದೀಗ ಆರೋಪ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿರುವ ದರ್ಶನ್ ತೂಗುದೀಪ್ ಅಭಿಮಾನಿಗಳು, ನಟಿ ರಮ್ಯಾ ವಿರುದ್ಧ ಕೂಡ ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಸಂಚಲನ ಸೃಷ್ಟಿ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿಚಾರವು ಎಲ್ಲಿಗೆ ಬಂದು ನಿಲ್ಲಲಿದೆ? ಅಂತಾ ಕಾದು ನೋಡಬೇಕಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+