Darshan Thoogudeepa: ದರ್ಶನ್ ಅಭಿಮಾನಿಗಳಿಂದಲೇ ‘ಡಿ-ಬಾಸ್’ಗೆ ಹೊಸ ಸಂಕಷ್ಟ?

ಕನ್ನಡ ಸಿನಿಮಾ ಇಂಡಸ್ಟ್ರಿಯ ಪಾಲಿನ 'ಡಿ-ಬಾಸ್' ದರ್ಶನ್ ತೂಗುದೀಪ್ ಈಗ ಕೊಲೆಯ ಕೇಸ್‌ನಲ್ಲಿ ಆರೋಪಿ. ಹೀಗಾಗಿಯೇ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ನಟ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿ ರೊಟ್ಟಿ ಮುರಿಯುತ್ತಾ, ಸೊಳ್ಳೆಗಳ ಸೆಲ್ ಒಳಗೆ ಪರದಾಡುತ್ತಿದ್ದಾರೆ. ಈ ಸಮಯದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ 'ಡಿ-ಬಾಸ್' ಬಗ್ಗೆ ಸಾಲು ಸಾಲು ಪೋಸ್ಟ್ ಹಾಕುತ್ತಿದ್ದಾರೆ. ಇದರ ಜೊತೆಯಲ್ಲಿ ರೇಣುಕಾ ಸ್ವಾಮಿ ಕೊಲೆ ಕೇಸ್ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಕೆಲವು ಅಭಿಮಾನಿಗಳಿಂದ ಆಗುತ್ತಿರುವ ಈ ಅಂಧ ಅಭಿಮಾನದ ತಪ್ಪು 'ಡಿ-ಬಾಸ್'ಗೆ ಕಂಟಕ ತಂದಿದೆ!

ದರ್ಶನ್ ತೂಗುದೀಪ್ ಹೊರಗೆ ಇದ್ದಾಗ ಹೀರೋ ಆಗಿದ್ದರು, ಆದರೆ ಯಾವಾಗ ಕೊಲೆಯ ಕೇಸ್ ಅವರ ವಿರುದ್ಧ ಕೇಳಿಬಂದು ಪರಪ್ಪನ ಅಗ್ರಹಾರ ಸೇರಿದರೂ ಸಂಕಷ್ಟ ಶುರುವಾಗಿತ್ತು. ಪರಪ್ಪನ ಅಗ್ರಹಾರ ಜೈಲಿನ ಒಳಗೆ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆ ಕೂತು ಸಿಗರೇಟ್ ಸೇದುತ್ತಾ, ಟೀ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿದ್ದೇ ತಡ ನಟ ದರ್ಶನ್ ಅವರು ಪರದಾಡಿದ್ದರು. ಯಾಕಂದ್ರೆ ದರ್ಶನ್ ತೂಗುದೀಪ್ ವಿರುದ್ಧ ಹಲವು ಗಂಭೀರವಾದ ಆರೋಪ ಕೇಳಿಬಂದಿತ್ತು. ಇದೇ ಸಮಯದಲ್ಲಿ ಬಳ್ಳಾರಿ ಜೈಲಿಗೆ ನಟ ದರ್ಶನ್ ತೂಗುದೀಪ್ ಶಿಫ್ಟ್ ಆಗಿದ್ದರೂ ಕಾಂಟ್ರವರ್ಸಿ ಕಡಿಮೆ ಆಗುತ್ತಿಲ್ಲ. ಯಾಕಂದ್ರೆ ದರ್ಶನ್ ಅವರ ಅಭಿಮಾನಿ ಬಳಗದಿಂದಲೇ ಇದೀಗ ದೊಡ್ಡ ಸಮಸ್ಯೆ ಎದುರಾಗಿದೆ ಎಂಬ ಆರೋಪ ಕೇಳಿಬಂದಿದೆ.

Darshan Thoogudeepa Fans Are Doing This On Social Media

ದರ್ಶನ್ ಕೊಲೆ ಕೇಸ್ ಸಮರ್ಥನೆ!

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಇನ್ನೂ ಆರೋಪಿ ಆಗಿದ್ದಾರೆ ಅಷ್ಟೇ, ಆದರೆ ದರ್ಶನ್ ತೂಗುದೀಪ್ ವಿರುದ್ಧದ ಕೊಲೆ ಪ್ರಕರಣ ಇನ್ನೂ ಸಾಬೀತು ಆಗಿಲ್ಲ ಮತ್ತು ದರ್ಶನ್ ಅವರು ಅಪರಾಧಿ ಎಂಬುದು ಸಾಬೀತು ಆಗಿಲ್ಲ. ಹೀಗಿದ್ದರೂ ನಟ ಮತ್ತು ಕೊಲೆ ಆರೋಪಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈ ಬಗ್ಗೆ ಸಮರ್ಥನೆ ಕೂಡ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಹೀರೋ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾ ಸ್ವಾಮಿ ಕೊಲೆ ಮಾಡಿದ್ದು ಸರಿ ಅಂತಿದ್ದಾರೆ. ಆದರೆ ದರ್ಶನ್ ಅವರ ಅಭಿಮಾನಿಗಳ ಇದೇ ಮಾತುಗಳು ದರ್ಶನ್ ಜೈಲಿನ ಒಳಗೆ ಪರದಾಡುವಂತೆ ಮಾಡುತ್ತಿದೆ!

ಹೌದು, ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ ಅಭಿಮಾನಿಗಳು ಹಾಕ್ತಿರುವ ಪೋಸ್ಟ್‌ಗಳು ಇದೀಗ ಲಕ್ಷ ಲಕ್ಷ ಲೈಕ್ಸ್ & ಕೋಟಿ ಕೋಟಿ ವೀವ್ಸ್ ಪಡೆಯುತ್ತಿವೆ. ಹೀಗಿದ್ದಾಗ ಕೋರ್ಟ್ ಒಳಗೆ ದರ್ಶನ್ ತೂಗುದೀಪ್ ವಿರುದ್ಧ ಈ ಸಾಕ್ಷಿಗಳನ್ನ ಕೂಡ ಸಲ್ಲಿಸುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಹೊಸ ಕಾನೂನುಗಳ ಪ್ರಕಾರ ವಿಡಿಯೋ & ಫೋಟೋ ಸಾಕ್ಷ್ಯಕ್ಕೆ ಕೂಡ ಶಕ್ತಿ ಇದೆ.

ನಾಗನ ಜೊತೆ ದರ್ಶನ್ ಫೋಟೋ!

ಅದ್ರಲ್ಲೂ ನಟ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೂತು, ನಟೋರಿಯಸ್ ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಸಿಗರೇಟು ಸೇದಿ ಟೀ ಕುಡಿದ ಫೋಟೋ ವೈರಲ್ ಮಾಡ್ತಿದ್ದಾರೆ ದರ್ಶನ್ ಅಭಿಮಾನಿಗಳು. ದರ್ಶನ್ ತೂಗುದೀಪ್ ಅಭಿಮಾನಿಗಳ ಈ ವರ್ತನೆ ಇದೀಗ ತಮ್ಮ ನೆಚ್ಚಿನ ಹೀರೋಗೆ ದೊಡ್ಡ ಕಂಟಕ ತಂದಿದೆ ಎಂಬ ಭಾರಿ ಗಂಭೀರ ಆರೋಪ ಕೂಡ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+