Darshan Thoogudeepa: ದರ್ಶನ್ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಧ್ರುವ ಸರ್ಜಾ ಅಭಿಮಾನಿಗಳು!
ದರ್ಶನ್ ತೂಗುದೀಪ್ ಅಭಿಮಾನಿಗಳು & ಧ್ರುವ ಸರ್ಜಾ ಅಭಿಮಾನಿಗಳ ನಡುವೆ ದೊಡ್ಡದಾಗಿ ಗಲಾಟೆ ಶುರುವಾಗಿದೆ. ದರ್ಶನ್ ತೂಗುದೀಪ್ ಬಗ್ಗೆ ನಟ ಧ್ರುವ ಸರ್ಜಾ ಅವರು ಮಾತನಾಡಿದ್ರು ಅನ್ನೋ ಕಾರಣಕ್ಕೆ, ದರ್ಶನ್ ತೂಗುದೀಪ್ ಅಭಿಮಾನಿಗಳು ಆಕ್ರೋಶ ಹೊರ ಹಾಕುತ್ತಿದ್ದಾರೆ. ಅಲ್ಲದೆ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ, ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ಈಗ ರೊಚ್ಚಿಗೆದ್ದಿರುವ ಧ್ರುವ ಸರ್ಜಾ ಫ್ಯಾನ್ಸ್ ಯಾವ ರೇಂಜ್‌ಗೆ ವಾರ್ನಿಂಗ್ ಕೊಡುತ್ತಿದ್ದಾರೆ ಗೊತ್ತಾ?
ದರ್ಶನ್ ತೂಗುದೀಪ್ ಹಾಗೂ ಧ್ರುವ ಸರ್ಜಾ ಅವರ ನಡುವೆ ಉತ್ತಮ ಸ್ನೇಹ ಇತ್ತು. ಆದರೆ ಚಿರಂಜೀವಿ ಸರ್ಜಾ ಮೃತಪಟ್ಟ ನಂತರ ಇಬ್ಬರ ನಡುವೆ ಘೋರ ಯುದ್ಧವೇ ಆರಂಭ ಆಗಿದೆ. ಅದ್ರಲ್ಲೂ ಚಿರಂಜೀವಿ ಸರ್ಜಾ ಅವರ ಕೆಲ ಸಿನಿಮಾಗಳಿಗೆ ಖುದ್ದು ನಟ ದರ್ಶನ್ ತೂಗುದೀಪ್ ಅವರೇ ಅತಿಥಿ ಪಾತ್ರದಲ್ಲಿ ಬಂದು ನಟಿಸಿದ್ದರು. ಧ್ರುವ ಸರ್ಜಾ ಕೂಡ ಇದೇ ರೀತಿ ನಟ ದರ್ಶನ್ ತೂಗುದೀಪ್ ಜೊತೆಗೆ ಅಭಿನಯಿಸಿ ಗಮನ ಸೆಳೆದಿದ್ದರು. ಇಬ್ಬರ ಮಧ್ಯೆ ಆತ್ಮೀಯ ಸಂಬಂಧ ಕೂಡ ಇತ್ತು. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಮತ್ತು ಧ್ರುವ ಸರ್ಜಾ ನಡುವೆ ದೊಡ್ಡ ಗಲಾಟೆ ಶುರುವಾಗಿದ್ದು, ಅಭಿಮಾನಿಗಳು ಕೂಡ ಬಡಿದಾಡುವ ಹಂತಕ್ಕೆ ಬಂದು ನಿಂತಿದ್ದಾರೆ.

ಕೆಟ್ಟ ಕೆಟ್ಟ ಕಮೆಂಟ್ ಹಾಕೋದು ಯಾರು?
ದರ್ಶನ್ ತೂಗುದೀಪ್ ಅವರು ಜೈಲಿಂದ ರಿಲೀಸ್ ಆಗಿ ಹೊರಗೆ ಬರುವವರೆಗೂ, ಕನ್ನಡದ ಬೇರೆ ಯಾವುದೇ ಹೀರೋಗಳ ಸಿನಿಮಾ ನೋಡಬಾರದು ಎಂದು ಆಗ್ರಹಿಸುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಹೀಗಿದ್ದಾಗಲೆ ಧ್ರುವ ಸರ್ಜಾ ಅವರ 'ಮಾರ್ಟಿನ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಅದ್ರಲ್ಲೂ 'ಮಾರ್ಟಿನ್' ಟ್ರೇಲರ್ ರಿಲೀಸ್ ಆಗಿದ್ದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟ ಕೆಟ್ಟ ಕಮೆಂಟ್ ಹಾಕುತ್ತಿದ್ದಾರೆ ಎಂಬುದು ಧ್ರುವ ಸರ್ಜಾ ಅಭಿಮಾನಿಗಳ ಆರೋಪ.
ಇದೇ ಕಾರಣಕ್ಕೆ ಇದೀಗ ರೊಚ್ಚಿಗೆದ್ದಿರುವ ಧ್ರುವ ಸರ್ಜಾ ಫ್ಯಾನ್ಸ್ ವಾರ್ನಿಂಗ್ ಕೊಡುತ್ತಿದ್ದಾರೆ, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಈ ವಿಚಾರಕ್ಕೆ, ಎಚ್ಚರಿಕೆ ಸಂದೇಶ ರವಾನೆ ಮಾಡುತ್ತಿದ್ದಾರೆ. ಥಿಯೇಟರ್ ಎದುರಲ್ಲಿ ಕೂಡ ಈ ವಿಚಾರವಾಗಿ ಕಿರಿಕ್ ಆಗಿದ್ದು, ಹಾಗೇ ಮಾಧ್ಯಮಗಳ ಎದುರಲ್ಲಿ ಕೂಡ ಧ್ರುವ ಸರ್ಜಾ ಅವರ ಅಭಿಮಾನಿಗಳು ಚಾಲೆಂಜ್ ಹಾಕಿದ್ದಾರೆ. ಅಲ್ಲದೆ ಮಾರ್ಟೀನ್ ಸಿನಿಮಾ ರಿಲೀಸ್ ಆಗುವ ದಿನ ಬನ್ನಿ ಅಂತಾ ದರ್ಶನ್ ಅಭಿಮಾನಿಗಳಿಗೆ ಆಹ್ವಾನ ಕೂಡ ನೀಡಿದ್ದಾರೆ ಧ್ರುವ ಸರ್ಜಾ ಫ್ಯಾನ್ಸ್. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗ್ತಿದೆ ಈ ಬಗ್ಗೆ ಪೊಲೀಸರು ಗಮನ ಹರಿಸಬೇಕು ಎಂಬ ಆಗ್ರಹವು ಕೂಡ ಕೇಳಿಬಂದಿದೆ.
ದರ್ಶನ್ ರಿಲೀಸ್ ಆಗುವುದು ಯಾವಾಗ?
ದರ್ಶನ್ ತೂಗುದೀಪ್ ಅವರು ಇನ್ನೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರದಾಡುತ್ತಿದ್ದಾರೆ. ಯಾಕಂದ್ರೆ ದರ್ಶನ್ ಅವರಿಗೆ ಜಾಮೀನು ನೀಡಲು ಇನ್ನೂ ಪೊಲೀಸರು ಚಾರ್ಜ್ ಶೀಟ್‌ನ ಸಲ್ಲಿಕೆ ಮಾಡಿಲ್ಲ. ತನಿಖೆ ನಡೆಸುತ್ತಿರುವ ಪೊಲೀಸರು ಚಾರ್ಜ್ ಶೀಟ್‌ನ ಹಾಕುವ ತನಕವೂ ಬೇಲ್ ಪಡೆಯಲು ಆಗಲ್ಲ. ದರ್ಶನ್ ಅವರ ಪರ ವಕೀಲರು ಜಾಮೀನು ಪಡೆಯೋದಕ್ಕಾಗಿ ಅರ್ಜಿ ಸಲ್ಲಿಸಲು ಆಗಲ್ಲ. ಹೀಗಾಗಿ ದರ್ಶನ್ ಅವರು ಜೈಲಿನಿಂದ ಹೊರಗೆ ಬರುವುದು ಭಾರಿ ತಡವಾಗುತ್ತಿದೆ. ಆದರೆ ಶೀಘ್ರದಲ್ಲೇ ಅವರು ಹೊರಗೆ ಬರ್ತಾರೆ ಅನ್ನೋದು ಅಭಿಮಾನಿಗಳ ನಂಬಿಕೆ ಆಗಿದೆ. ಹೀಗಾಗಿ ದರ್ಶನ್ ತೂಗುದೀಪ್ ಅಭಿಮಾನಿಗಳು ಕಾಯುತ್ತಿದ್ದಾರೆ.












Click it and Unblock the Notifications