Darshan Thoogudeepa: ದರ್ಶನ್ ತೂಗುದೀಪ್ ಬೂಟಿಗೆ ರೇಣುಕಾಸ್ವಾಮಿ ರಕ್ತ ಮೆತ್ತಿಕೊಂಡಿದ್ದು ಹೀಗೆ!
ದರ್ಶನ್ ತೂಗುದೀಪ್ ಜೈಲು ಸೇರಿ ನರಳುತ್ತಿರುವ ಸಮಯದಲ್ಲೇ ಸ್ಫೋಟಕ ಆರೋಪ ಕೂಡ ಕೇಳಿಬಂದಿದೆ. ದರ್ಶನ್ ತೂಗುದೀಪ್ ಮೃತ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡುತ್ತಿದ್ದಾಗ ಹೇಗೆಲ್ಲಾ ವಿಕೃತವಾಗಿ ವರ್ತಿಸಿದ್ದರು ಎಂಬ ಆರೋಪಕ್ಕೆ ಒಂದೊಂದೇ ಸಾಕ್ಷಿಗಳು ಸಿಗುತ್ತಿವೆ. ಈ ನಡುವೆ ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದಾಗ ಹಾಕಿದ ಹತ್ತಾರು ಸಾವಿರ ರೂಪಾಯಿ ಬೆಲೆ ಬಾಳುವ ಐಷಾರಾಮಿ ಶೂ ಮೇಲೆ ಮೆತ್ತಿದ್ದ ರಕ್ತ ಯಾರದ್ದು ಗೊತ್ತಾ? ರಕ್ತ ಮೆತ್ತಿದ್ದ ಶೂ ತೊಳೆದು ಒಣಗಿಸಿದ್ದರಾ ಡಿ-ಬಾಸ್ ಎಂಬ ಬಿರುದು ಪಡೆದಿದ್ದ ದರ್ಶನ್ ತೂಗುದೀಪ್?
ಅಂದಹಾಗೆ ದರ್ಶನ್ ತೂಗುದೀಪ್ ವಿಚಾರದಲ್ಲಿ ಹಲವು ರೀತಿ ಆರೋಪ ಕೇಳಿ ಬಂದಿದ್ದು, ಇದೀಗ ಆರೋಪ ಪಟ್ಟಿ ಕೂಡ ಸಲ್ಲಿಕೆ ಮಾಡಿದ್ದಾರೆ ಪೊಲೀಸರು. ಹೀಗಿದ್ದಾಗ ನಟ ದರ್ಶನ್ ತೂಗುದೀಪ್ ಬೂಟಿನ ಮೇಲೆ ರಕ್ತದ ಕಲೆಗಳು ಸಿಕ್ಕ ಹಿನ್ನೆಲೆ ಪೊಲೀಸರು ಪರಿಶೀಲನೆ ನಡೆಸಿ ಇಲ್ಲಿಯೂ ಸಾಕ್ಷ್ಯ ಕಲೆ ಹಾಕಿದ್ದಾರೆ, ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ದರ್ಶನ್ ತೂಗುದೀಪ್ ಅವರು ಹತ್ತಾರು ಸಾವಿರ ರೂಪಾಯಿ ಬೆಲೆ ಬಾಳುವ ಶೂಗಳನ್ನೇ ಬಳಸುತ್ತಿದ್ದರು ಎಂಬ ಮಾಹಿತಿ ಇದೆ. ಜೀನ್ಸ್ ಪ್ಯಾಂಟ್ & ಟೀ ಶರ್ಟ್‌ಗೆ ಕೂಡ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡುತ್ತಿದ್ದ ನಟ ದರ್ಶನ್ ತೂಗುದೀಪ್ ಇದೀಗ ಇದೇ ಶೂ & ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್‌ನಿಂದ ಲಾಕ್ ಆಗಿದ್ದಾರೆ!

ದರ್ಶನ್‌ಗೆ ರಕ್ತದ ಕಲೆಗಳ ಕಂಟಕ?
ದರ್ಶನ್ ತೂಗುದೀಪ್ & ಗ್ಯಾಂಗ್, ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನು ಪಟ್ಟಣಗೆರೆ ಶೆಡ್‌ಗೆ ಎಳೆದು ತಂದ ನಂತರ, ತೀವ್ರವಾಗಿ ಹಲ್ಲೆ ನಡೆಸಿತ್ತು ಎಂಬ ಆರೋಪ ಕೇಳಿಬಂದಿದೆ. ಹೀಗೆ ದಾಳಿ ಮಾಡುತ್ತಿದ್ದ ಸಮಯದಲ್ಲಿ ರೇಣುಕಾಸ್ವಾಮಿ ಮೈ & ಕೈ ಸೇರಿದಂತೆ ಕಣ್ಣು & ತಲೆಗೆ ಕಬ್ಬಿಣ ಸೇರಿ ಮಾರಕ ಅಸ್ತ್ರಗಳಿಂದ ಹಲ್ಲೆ ಮಾಡಿಸಿದ್ದಾರೆ ಎಂಬ ಆರೋಪ ಮಾಡಲಾಗಿದೆ.
ಇದು ಮಾತ್ರವಲ್ಲ ರೇಣುಕಾಸ್ವಾಮಿ ಮರ್ಮಾಂಗ & ಕೈ, ಕಾಲುಗಳ ಮೇಲೆ ಕೂಡ ಸಿಗರೇಟ್ ಮೂಲಕ ಬರೆ ಹಾಕಿರುವ ಆರೋಪ ಇದೆ. ಹೀಗಿದ್ದಾಗ ಸಸ್ಯಾಹಾರಿ ಆಗಿದ್ದ ರೇಣುಕಾ ಸ್ವಾಮಿ ಬಾಯಿಗೆ ಚಿಕನ್ ಬಿರಿಯಾನಿ ತುರುಕಿದ್ದ ನಟ ದರ್ಶನ್ ತೂಗುದೀಪ್, ರೇಣುಕಾಸ್ವಾಮಿ ಆ ಚಿಕನ್ ತಿನ್ನದೇ ಇರುವಾಗ ತನ್ನ ಶೂಗಳಲ್ಲಿ ಒದ್ದು ರಕ್ತ ಬರಿಸಿದ್ದ ಎಂಬ ಆರೋಪ ಇದೆ. ಹೀಗಾಗಿಯೇ ದರ್ಶನ್ ತೂಗುದೀಪ ಶೂ ಮೇಲೆ ಕೂಡ ರಕ್ತದ ಗುರುತು ಪತ್ತೆಯಾಗಿವೆ ಎಂದು ಆರೋಪ ಮಾಡಲಾಗಿದೆ.
ಕೊಲೆ ಕೇಸ್‌ನಲ್ಲಿ ಲಾಕ್?
ಒಟ್ನಲ್ಲಿ ದರ್ಶನ್ ತೂಗುದೀಪ್ & ಗ್ಯಾಂಗ್ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಸರಿಯಾಗೇ ಲಾಕ್ ಆಗಿದ್ದು, ಜಾಮೀನು ಪಡೆದು ಹೊರಗೆ ಬರುವುದು ಡೌಟ್ ಎಂಬ ಮಾತುಗಳು ಈಗ ಕಾನೂನು ತಜ್ಞರಿಂದ ಕೇಳಿ ಬರುತ್ತಿವೆ. ಅದರಲ್ಲೂ ದರ್ಶನ್ ತೂಗುದೀಪ್ ಇದೀಗ ಬಳ್ಳಾರಿ ಜೈಲಿನಲ್ಲಿ ವಿಲವಿಲ ಒದ್ದಾಡುವ ಸ್ಥಿತಿ ಇದ್ದು, ಇದೆಲ್ಲಾ ಮುಂದೆ ಎಲ್ಲಿಗೆ ಬಂದು ನಿಲ್ಲುತ್ತೋ ಎಂಬ ಮಾತು & ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.












Click it and Unblock the Notifications