Darshan Thoogudeepa: 'ದರ್ಶನ್‌ಗೆ ಕಾಮನ್‌ ಸೆನ್ಸ್ ಇಲ್ಲ' - ಮುಖ್ಯಮಂತ್ರಿ ಚಂದ್ರು ಶಾಕಿಂಗ್ ಹೇಳಿಕೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರು ಜೈಲು ಸೇರಿದ್ದಾರೆ. ಇದೇ ಸಮಯದಲ್ಲಿ ದರ್ಶನ್ ಬಗ್ಗೆ ಅನೇಕರು ಹಲವಾರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ದರ್ಶನ್ ಪರ ಮಾತನಾಡಿದರೆ ಇನ್ನೂ ಕೆಲವರು ಅವರ ವಿರೋಧವಾಗಿ ಮಾತನಾಡಿದ್ದಾರೆ. ಜೊತೆಗೆ ಕನ್ನಡದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಕೂಡ ದರ್ಶನ್ ಬಗ್ಗೆ ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ದರ್ಶನ್ ಅವರಿಗೆ ಹಣ ಇದೆ. ಆದರೆ ವಿವೇಚನೆ ಇಲ್ಲ ಎಂದು ನೇರವಾಗಿ ಮುಖ್ಯಮಂತ್ರಿ ಚಂದ್ರು ಬೈದಿದ್ದಾರೆ. 'ಕಲಾ ಮಾದ್ಯಮ' ಯೂಟ್ಯೂಬ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಚಂದ್ರು, 'ದರ್ಶನ್‌ಗೆ ದುಡ್ಡಿನ ಅಹಂಕಾರ, ದಿಮಾಕು, ಬೌದ್ಧಿಕ ಪ್ರಜ್ಞೆ ಇಲ್ಲ, ದರ್ಶನ್‌ಗೆ ಬೌದ್ಧಿಕ ಪ್ರಜ್ಞೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ' ಎಂದಿದ್ದಾರೆ.

Darshan Thoogudeepa Darshan has no common sense - Mukhyamantri Chandru s shocking statement

ದರ್ಶನ್‌ನಿಂದ ಇಂಡಸ್ಟ್ರಿಗೆ ಕೆಟ್ಟ ಹೆಸರು..

ಮಾತ್ರವಲ್ಲದೆ ದರ್ಶನ್ ಅವರಿಂದಾಗಿ ಇಂಡಸ್ಟ್ರಿಗೆ ಕೆಟ್ಟ ಹೆಸರು ಬಂದಿದೆ ಎಂದು ನಟಿ ಸುಕೃತಾ ವಾಗ್ಲೆ ಹೇಳಿದ್ದಾರೆ. ಹೌದು... ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ವಿರುದ್ಧ ಸಾಕ್ಷಿಗಳು ಹುಡುಕಿದಷ್ಟು ಸಿಗುತ್ತಲೇ ಇವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಹೊತ್ತು ಕಂಬಿ ಎಣಿಸುತ್ತಿರುವ ದರ್ಶನ್ ಬಗ್ಗೆ ಇಂಡಸ್ಟ್ರಿಯಲ್ಲಿ ಪರ ವಿರೋಧದ ಚರ್ಚೆಗಳು ಆಗುತ್ತಲೇ ಇವೆ. ದರ್ಶನ್ ಅವರ ಬಗ್ಗೆ ನಟಿ ಸುಕೃತಾ ವಾಗ್ಲೆ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

''ಅವ್ರು ಮಾಡಿದ್ದು ತಪ್ಪು. ದರ್ಶನ್ ಈ ನಿರ್ಧಾರ ತಗೊಬಾರ್ದಿತ್ತು. ಪ್ರಕರಣ ಇಂಡಸ್ಟ್ರಿಗೆ ಕೆಟ್ಟ ಹೆಸರು. ಅವರು ಹಾಗೆಲ್ಲಾ ಮಾಡಬಾರದಿತ್ತು'' ಎಂದು ಸುಕೃತಾ ವಾಗ್ಲೆ ಹೇಳಿಕೊಂಡಿದ್ದಾರೆ. ಸಿಂಪಲ್ ಆಗಿರುವ ಸಮಸ್ಯೆಯನ್ನು ದೊಡ್ಡದಾಗಿ ಮಾಡಿಕೊಂಡು ಈ ಸ್ಟಾರ್ ನಟ ಜೈಲು ಸೇರಬೇಕಿತ್ತಾ? ಅಂತಿದ್ದಾರೆ ಹಲವರು. ಸಿನಿಮಾ ರಂಗ ಈಗಾಗಲೇ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಜೊತೆಗೆ ದರ್ಶನ್ ಪ್ರಕರಣ ಕೂಡ ಸೇರಿಕೊಂಡಿದೆ ಅಂತ ನಟಿ ಸುಕೃತಾ ವಾಗ್ಲೆ ಹೇಳಿದ್ದಾರೆ.

Darshan Thoogudeepa Darshan has no common sense - Mukhyamantri Chandru s shocking statement

ಕನ್ನಡ ಚಿತ್ರರಂಗ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ತಲೆ ಎತ್ತಿ ನಿಂತಿದೆ. ಪರಭಾಷಾ ಚಿತ್ರಗಳಿಗೆ ಠಕ್ಕರ್ ಕೊಡುವಷ್ಟು ಬೆಳೆದು ಪ್ಯಾನ್ ವರ್ಲ್ಡ್ ಹಂತಕ್ಕೆ ಕನ್ನಡ ಸಿನಿಮಾಗಳು ತಲುಪಿವೆ. ಸಿನಿಮಾಗಳ ಮೂಲಕ ಕನ್ನಡ ತಾರೆಯರು ಭಾರತೀಯ ಚಿತ್ರರಂಗದಲ್ಲಿ ಅದೆಷ್ಟು ಹೆಸರು ಮಾಡಿದ್ದಾರೋ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಕನ್ನಡ ಚಿತ್ರ ರಂಗ ಅಷ್ಟೇ ತಲೆ ತಗ್ಗಿಸುವಂತೆ ಆಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ದರ್ಶನ್ ಹೊರಬರುವವರೆಗೂ ಕನ್ನಡ ಸಿನಿಮಾ ನೋಡದಿರಲು ಫ್ಯಾನ್ಸ್ ನಿರ್ಧಾರ

ಸದ್ಯ ನಟ ದರ್ಶನ್ ಜೈಲಿನಲ್ಲಿ ಇರುವುದರಿಂದ ಅವರ ಎಲ್ಲಾ ಸಿನಿಮಾಗಳು ತೆರೆ ಕಾಣುವುಡು ತಡವಾಗಲಿದೆ. ಇದೇ ವೇಳೆ ದರ್ಶನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಜೈಲಿನಿಂದ ಹೊರಬರುವವರೆಗೂ ಕನ್ನಡದ ಯಾವುದೇ ಸಿನಿಮಾ ನೋಡದೇ ಇರಲು ನಿರ್ಧರಿಸಿದ್ದಾರೆ. ಕನ್ನಡದ ಯಾವುದೇ ಸಿನಿಮಾ ತೆರೆ ಕಾಣಲಿ ಅದನ್ನು ನೋಡದೇ ಇರಲು ದರ್ಶನ್ ಫ್ಯಾನ್ಸ್ ಕರೆ ಕೊಟ್ಟಿದ್ದಾರೆ.

ಇತ್ತ ಪೊಲೀಸರು ಕೋರ್ಟ್ಗೆ ಚಾರ್ಜ್‌ ಶೀಟ್ ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದಾರೆ. ಒಂದು ವೇಳೆ ದರ್ಶನ್ ವಿರುದ್ಧದ ಸಾಕ್ಷಿಗಳು ಸಾಬೀತಾದರೆ ದರ್ಶನ್ ಜೈಲು ವಾಸ ಮುಂದುವರೆಯುವ ಲಕ್ಷಣಗಳು ಇವೆ. ಹೀಗಾಗಿ ದರ್ಶನ್ ಜೈಲಿನಿಂದ ಬಹುಬೇಗ ಹೊರಬರುತ್ತಾರಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+