Darshan Thoogudeepa: ರೇಣುಕಾಸ್ವಾಮಿ ತಾಯಿ ಕಣ್ಣೀರು ಹಾಕಿ ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಶಾಪ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸರಿಯಾಗಿ ಒಂದು ವರ್ಷದ ಹಿಂದೆ ದೊಡ್ಡ ಗೆಲುವಿನ ಅಲೆಯಲ್ಲಿ ಇದ್ದರು. ಕಾಟೇರ ಸಿನಿಮಾ 2024ರ ಹೊಸ ವರ್ಷಕ್ಕೆ ಮೊದಲು ರಿಲೀಸ್ ಆಗಿ, ಕನ್ನಡ ಬಾಕ್ಸ್ ಆಫಿಸ್ ಅಖಾಡದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿತ್ತು. ಇದೇ ವೇಳೆ ಡೆವಿಲ್ ಸಿನಿಮಾ ಘೋಷಣೆ ಮಾಡಿ ಅಭಿಮಾನಿಗಳಿಗೆ ಡಬಲ್ ಸಂಭ್ರಮ ನೀಡಿದ್ದರು ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಹೀಗಿದ್ದಾಗಲೇ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ ಸಂಚಲನ ಸೃಷ್ಟಿ ಮಾಡಿತ್ತು.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿ ಬಳ್ಳಾರಿ ಜೈಲಿನಲ್ಲಿ ಪರದಾಡಿದ್ದರು ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈ ರೀತಿ ಪರದಾಡಿದ್ದು ಅಭಿಮಾನಿಗಳಿಗೆ ದೊಡ್ಡ ಚಿಂತೆ ತರಿಸಿತ್ತು. ಅದು ಇನ್ನೇನು ಮರೆತು ಹೋಗಬೇಕು ಎನ್ನುವಷ್ಟರಲ್ಲಿ ಮತ್ತೊಂದು ಆಘಾತ ಎದುರಾಗಿದೆ. ಹಾಗೇ ಕೋಟಿ ಕೋಟಿ ಅಭಿಮಾನಿಗಳಿಗೆ ಇದು ಶಾಕ್ ನೀಡಿದೆ. ರೇಣುಕಾಸ್ವಾಮಿ ತಾಯಿ ಕಣ್ಣೀರು ಹಾಕಿ ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಶಾಪ...

Darshan Thoogudeepa And Renukaswamy Mother Reaction

ರೇಣುಕಾಸ್ವಾಮಿ ತಾಯಿ ಶಾಪ...

ಅಂದಹಾಗೆ ರೇಣುಕಾಸ್ವಾಮಿ ಕೊಲೆ ಕೇಸ್ ಹಿನ್ನೆಲೆಯಲ್ಲಿ ಹಲವು ಸಂಕಷ್ಟಕ್ಕೆ ಸಿಲುಕಿ ಭಾರಿ ಒದ್ದಾಟ ನಡೆಸಿದ್ದರು ಡಿ-ಬಾಸ್ ದರ್ಶನ್ ತೂಗುದೀಪ್ ಅವರು. ಹೀಗಿದ್ದಾಗ ಬೆನ್ನು ನೋವು ಹಿನ್ನೆಲೆ ಆಸ್ಪತ್ರೆಗೆ ಕೂಡ ಸೇರಿ, ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದಿದ್ದರು. ಇಷ್ಟೆಲ್ಲಾ ಘಟನೆಗಳ ಬೆನ್ನಲ್ಲೇ, ದಿಢೀರ್ ರೇಣುಕಾಸ್ವಾಮಿ ತಾಯಿ ಕಣ್ಣೀರು ಹಾಕಿ ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಶಾಪ...

ಕಣ್ಣೀರು ಹಾಕಿದರೆ ಶಾಪ ತಟ್ಟುತ್ತಾ?

ರೇಣುಕಾಸ್ವಾಮಿಗೆ ಮಗ ಹುಟ್ಟಿದ್ದು, ಇದೀಗ ಮನೆಗೆ ಬಂದ ಮೊಮ್ಮಗನನ್ನು ಕೊಲೆಯಾದ ರೇಣುಕಾಸ್ವಾಮಿಯ ಅಪ್ಪ & ಅಮ್ಮ ಬರಮಾಡಿಕೊಂಡು ಮುದ್ದಾಡಿದ್ದಾರೆ. ಅಲ್ಲದೆ ಇದೇ ವೇಳೆ ರೇಣುಕಾಸ್ವಾಮಿ ತಾಯಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಡಿಸೈನ್ ಡಿಸೈನ್ ಕಮೆಂಟ್ಸ್ ಬರುತ್ತಿವೆ. ಅಲ್ಲದೆ ಈ ರೀತಿ ರೇಣುಕಾಸ್ವಾಮಿ ತಾಯಿ ಹಾಕಿರುವ ಕಣ್ಣೀರಿನಿಂದ ಡಿ-ಬಾಸ್ ದರ್ಶನ್ ತೂಗುದೀಪ್‌ಗೆ ಶಾಪ ತಟ್ಟುತ್ತದೆ ಅಂತಲೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

ಒಟ್ನಲ್ಲಿ ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್ ಕೋರ್ಟ್‌ನಲ್ಲಿ ಇದ್ದು, ಇನ್ನೂ ವಿಚಾರಣೆಯ ಹಂತದಲ್ಲಿ ಇದೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯು ಕೂಡ ನಡೆಯುತ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಮತ್ತು ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳ ನಡುವೆ ಈ ಬಗ್ಗೆ ದೊಡ್ಡ ಕಿತ್ತಾಟ ಕೂಡ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಫೈಟಿಂಗ್ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+