25 ವರ್ಷದ ಸಂಸಾರದಲ್ಲಿ ಬಿರುಗಾಳಿ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೊಮ್ಮೆ ಪವಿತ್ರಾ... Darshan Thoogudeepa
25 ವರ್ಷಗಳ ಹಿಂದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮದುವೆ ಆಗಿದ್ದರು, ಕನ್ನಡ ಸಿನಿಮಾ ರಂಗದ ಸೂಪರ್ ಹೀರೋ ಆಗಿ ಹವಾ ಇಟ್ಟಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ವಿಜಯಲಕ್ಷ್ಮೀ ಅವರ ಜೊತೆ ಸಪ್ತಪದಿ ತುಳಿದಿದ್ದರು. ಆದರೆ ಪವಿತ್ರಾ ಗೌಡ ಅವರ ಎಂಟ್ರಿ ನಂತರ ದೊಡ್ಡ ಬಿರುಗಾಳಿ ಎದ್ದಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇನ್ನೊಂದು ಕಡೆ ಕಳೆದ ಕೆಲವು ತಿಂಗಳಿಂದ ಡಿ-ಬಾಸ್ ದರ್ಶನ್ & ಪವಿತ್ರಾ ಗೌಡ ಮಾತು ಬಿಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಹೀಗಿದ್ದಾಗಲೇ, 25 ವರ್ಷದ ಸಂಸಾರದಲ್ಲಿ ಬಿರುಗಾಳಿ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೊಮ್ಮೆ ಪವಿತ್ರಾ...
ಅಂದಹಾಗೆ ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಸಂಪೂರ್ಣವಾಗಿ ದೂರವೇ ಆಗಿಹೋದ್ರಾ? ಅನ್ನೋ ಪ್ರಶ್ನೆ ಇದೀಗ ಮೂಡಿದೆ. 10 ವರ್ಷದ ಸ್ನೇಹ & ಪ್ರೀತಿ, ಪವಿತ್ರಾ ಗೌಡ ಅವರಿಂದ ಶಾಶ್ವತವಾಗಿ ದೂರವಾದ ಡಿ-ಬಾಸ್ ದರ್ಶನ್ ತೂಗುದೀಪ್ ಅವರು... ಅಂತಾನೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗಿದೆ. ಅಷ್ಟಕ್ಕೂ ಈ ರೀತಿ ಚರ್ಚೆ ನಡೆಯಲು ಕಾರಣ ಆಗಿರುವುದು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇತ್ತೀಚೆಗೆ ಪವಿತ್ರಾ ಗೌಡ ಅವರಿಂದ ಕಾಯ್ದುಕೊಳ್ಳುತ್ತಿರುವ ಅಂತರ. ಇದೇ ಕಾರಣದಿಂದಾಗಿ ಈಗ ಭಾರಿ ದೊಡ್ಡ ಪ್ರಶ್ನೆ ಮೂಡಿದ್ದು, ಸಂಚಲನ ಸೃಷ್ಟಿಯಾಗಿತ್ತು. ಆದರೆ ದಿಢೀರ್ ಇಬ್ಬರು ಮತ್ತೆ ಮಾತನಾಡಿದ್ದಾರೆ...

25 ವರ್ಷದ ಸಂಸಾರದಲ್ಲಿ ಬಿರುಗಾಳಿ...
ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಹೋಗಿ ಬಂದ ನಂತರ ಪವಿತ್ರಾ ಗೌಡ ಅವರಿಂದ ದೂರ ಇರುವಂತೆ ಕುಟುಂಬದ ಸದಸ್ಯರು ತಿಳಿಸಿದ್ದರು. ಹೀಗಾಗಿಯೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೂಡ ಈ ವಿಚಾರದಲ್ಲಿ ಅಂತರ ಕಾಯ್ದುಕೊಂಡಿದ್ದರು ಎನ್ನಲಾಗಿತ್ತು. ಆದರೆ ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆಗೆ ಅಂತಾ ಬಂದಿದ್ದ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತು ಪವಿತ್ರಾ ಗೌಡ ನಂಬರ್ ಪಡೆದಿದ್ದಾರೆ ಎಂಬ ಸುದ್ದಿ ಬಿರುಗಾಳಿ ಎಬ್ಬಿಸಿದೆ!
ಡಿ-ಬಾಸ್ ದರ್ಶನ್ ತೂಗುದೀಪ್ ಅವರು...
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೊಸ ನಂಬರ್ ಅನ್ನ ಪವಿತ್ರಾ ಗೌಡ ಅವರಿಗೆ ನೀಡಿದ್ದಾರೆ ಎಂಬ ಸುದ್ದಿ ಕನ್ನಡ ನ್ಯೂಸ್ ಚಾನಲ್‌ಗಳ ಮೂಲಕ ಹೊರಗೆ ಬಿದ್ದಿದೆ. ಇನ್ನು ಈ ಸುದ್ದಿ ಹಬ್ಬಿದ ನಂತರ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೊತೆ ಕುಟುಂಬದ ಸದಸ್ಯರು ಅದರಲ್ಲೂ ಹೆಂಡತಿ ಕೋಪ ಮಾಡಿಕೊಂಡಿದ್ದಾರೆ ಎಂಬ ಸುದ್ದಿಯು ಹಬ್ಬಿದೆ!
ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, 25 ವರ್ಷದ ಸಂಸಾರದಲ್ಲಿ ಬಿರುಗಾಳಿ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೊಮ್ಮೆ ಪವಿತ್ರಾ ಗೌಡ ಜೊತೆ ಮಾತನಾಡಿದ್ದಕ್ಕೆ ಜಗಳ ಶುರು... ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಈಗ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಇದೆಲ್ಲಾ ಸುಳ್ಳೂ, ಇದಕ್ಕೆ ಅಧಿಕೃತ ಮಾಹಿತಿ ಇಲ್ಲ ಅಂತಾನು ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ಈವರೆಗು ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ, ಹೀಗಾಗಿ ಇದು ಗಾಳಿ ಸುದ್ದಿ ಎನ್ನಲಾಗಿದೆ. ಅಲ್ಲದೆ ಈ ರೀತಿ ಗಾಳಿ ಸುದ್ದಿ ಹಬ್ಬಿಸಿದವರ ವಿರುದ್ಧ ಡಿ-ಬಾಸ್ ಅಭಿಮಾನಿಗಳು ಗರಂ ಆಗಿದ್ದಾರೆ.
ಡಿ-ಬಾಸ್ ಅಭಿಮಾನಿಗಳಿಂದ ಭರ್ಜರಿ ಬೆಂಬಲ...
ಹೀಗಿದ್ದಾಗಲೇ ವಿಜಯಲಕ್ಷ್ಮೀ ದರ್ಶನ್ ಅವರ ಹೊಸ ಪೋಸ್ಟ್ ಕುತೂಹಲ ಡಬಲ್ ಮಾಡಿ ಗಮನ ಸೆಳೆದಿದೆ. ಪವಿತ್ರಾ ಗೌಡ ಅವರು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹೊಸ ಮೊಬೈಲ್ ನಂಬರ್ ಪಡೆದರು ಎಂಬ ಸುದ್ದಿ ಹಬ್ಬಿದ ನಂತರ, ಡಿ-ಬಾಸ್ ದರ್ಶನ್ ಅವರ ಜೊತೆಗೆ ನಿಂತಿರುವ ಫೋಟೋ ಅಪ್‌ಲೋಡ್ ಹಾಕಿ ಪ್ರೀತಿಯ ಸಂದೇಶ ನೀಡಿದ್ದಾರೆ. ಹೀಗೆ ಮತ್ತೆ ಫೈಟ್ ಶುರುವಾಯ್ತಾ? ಎಂಬ ಚರ್ಚೆ ಜೋರಾಗಿದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ವಿರೋಧಿಗಳು, ಪವಿತ್ರಾ ಗೌಡ & ವಿಜಯಲಕ್ಷ್ಮೀ ದರ್ಶನ್ ನಡುವೆ ಮತ್ತೆ ವಾರ್ ಶುರು ಅಂತಾ ಸುದ್ದಿ ಹಬ್ಬಿಸುತ್ತಿದ್ದಾರೆ. ಇದಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸರಿಯಾಗೇ ತಿರುಗೇಟು ನೀಡುತ್ತಿದ್ದಾರೆ.












Click it and Unblock the Notifications