Darshan Thoogudeepa: ಚಾಮುಂಡೇಶ್ವರಿ ದೇವಿ ಶಾಪಕ್ಕೆ ಗುರಿಯಾಗಿ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ...
ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ಹಿನ್ನೆಲೆ ಜಾಮೀನು ಸಿಗಬೇಕು ಅನ್ನೋದು ದರ್ಶನ್ ಅವರ ಅಭಿಮಾನಿಗಳ ಒತ್ತಾಯ. ಹೀಗೆ ದರ್ಶನ್ ತೂಗುದೀಪ್ ಮತ್ತೆ ಮೊದಲಿನ ರೀತಿ ಸಿನಿಮಾಗಳನ್ನ ಮಾಡುತ್ತಾ, ಅಭಿಮಾನಿಗಳಿಂದ 'ಡಿ-ಬಾಸ್.. ಡಿ-ಬಾಸ್..' ಅಂತಾ ಘೋಷಣೆ ಹಾಕಿಸಿಕೊಳ್ಳಬೇಕು ಎಂಬುದು ಕೋಟ್ಯಂತರ ಅಭಿಮಾನಿಗಳ ಆಸೆ ಆಗಿದೆ. ಇದೇ ಕಾರಣಕ್ಕೆ ಅಭಿಮಾನಿಗಳು ದೇವರಿಗೆ ವಿಶೇಷ ಪೂಜೆ ಮಾಡುತ್ತಿದ್ದಾರೆ. ಆದರೆ ಇಂತಹ ಸಮಯದಲ್ಲೇ, ಚಾಮುಂಡೇಶ್ವರಿ ದೇವಿ ಶಾಪಕ್ಕೆ ಗುರಿಯಾಗಿ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ...
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ ಅವರಿಗೆ ಒಂದಾದ ನಂತರ ಒಂದು ಸಮಸ್ಯೆ ಎದುರಾಗುತ್ತಿದೆ. ಆದರೆ ಈ ಎಲ್ಲಾ ಸಮಸ್ಯೆಗೆ ಚಾಮುಂಡೇಶ್ವರಿ ದೇವಿ ನೀಡಿರುವ ಶಾಪ ಕಾರಣ ಎಂಬ ಮಾತು ಇದೀಗ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ದರ್ಶನ್ ತೂಗುದೀಪ್ ದೇವತೆಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು ಈ ಕಾರಣಕ್ಕೆ ಇದೀಗ ನಟ ದರ್ಶನ್ ತೂಗುದೀಪ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿ ಬಳ್ಳಾರಿ ಜೈಲು ಸೇರಿ ಪರದಾಡುವ ಪರಿಸ್ಥಿತಿ ಬಂದಿದೆ ಎಂಬ ಚರ್ಚೆ ಶುರುವಾಗಿದೆ. ಇಷ್ಟು ಮಾತ್ರವಲ್ಲ, ಚಾಮುಂಡೇಶ್ವರಿ ದೇವಿ ಶಾಪಕ್ಕೆ ಗುರಿಯಾಗಿ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಲ್ಲಿ...

'ಅದೃಷ್ಟ ದೇವತೆ ಬಟ್ಟೆ ಬಿಚ್ಚಿ...'
ದರ್ಶನ್ ತೂಗುದೀಪ್ ಹಿಂದೆ ಕ್ರಾಂತಿ ರಿಲೀಸ್ ಸಮಯದಲ್ಲಿ ನ್ಯೂಸ್ ಚಾನೆಲ್‌ಗಳಿಗೆ ಸಂದರ್ಶನ ನೀಡುವಾಗ 'ಅದೃಷ್ಟ ದೇವತೆಯು ಬಾಗಿಲು ತಟ್ಟುವುದು ಅಪರೂಪ, ಅಂತಹ ಸಮಯದಲ್ಲಿ ಬಾಗಿಲು ತೆಗ್ದು, ಆಕೆಯನ್ನ ಹಿಡಿದು ರೂಮ್‌ಗೆ ಕರೆದುಕೊಂಡು ಬಂದು ಬಟ್ಟೆಯನ್ನು ಬಿಚ್ಚಿ ಕೂರಿಸಿಕೊಂಡು ಬಿಡಬೇಕು' ಎಂದಿದ್ದರು ಎಂಬ ಆರೋಪ ಡಿ-ಬಾಸ್ ದರ್ಶನ್ ತೂಗುದೀಪ್‌ರ ವಿರುದ್ಧ ಕೇಳಿಬಂದಿತ್ತು. ಈ ಆರೋಪಕ್ಕೆ ಸಂಬಂಧಪಟ್ಟ ವಿಡಿಯೋ ವೈರಲ್ ಆಗಿತ್ತು. ಹೀಗಾಗಿ ಇದೀಗ ಚಾಮುಂಡೇಶ್ವರಿ ದೇವಿ ಶಾಪಕ್ಕೆ ಗುರಿಯಾಗಿ ದರ್ಶನ್ ತೂಗುದೀಪ್ ಪರದಾಡುತ್ತಿದ್ದಾರೆ ಎಂಬ ಮಾತು ಓಡಾಡುತ್ತಿದೆ.
ದರ್ಶನ್ ಕುಟುಂಬಸ್ಥರ ವಿಶೇಷ ಪೂಜೆ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಜೈಲು ಸೇರಿದ ಕಾರಣಕ್ಕೆ ಇದೀಗ ದರ್ಶನ್ ತೂಗುದೀಪ್ ಅವರ ಕುಟುಂಬಸ್ಥರಿಗೆ ತುಂಬಾ ನೋವಾಗಿದೆ. ಹೀಗಾಗಿ ಕಟುಂಬದ ಸದಸ್ಯರು ಪದೇ ಪದೇ ವಿಶೇಷ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಾಗೇ ನಟರಾದ ದರ್ಶನ್ ತೂಗುದೀಪ್ ಆದಷ್ಟು ಬೇಗ ಬಿಡುಗಡೆ ಆಗಲಿ ಎಂದು ಚಾಮುಂಡೇಶ್ವರಿ ದೇವಿಗೆ ಕೂಡ ಈ ಸಮಯದಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿನಿಂದ ರಿಲೀಸ್ ಆಗಲಿ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ.
ದೇವರ ಬಳಿ 'ಡಿ-ಬಾಸ್' ಫ್ಯಾನ್ಸ್ ಪ್ರಾರ್ಥನೆ!
ದರ್ಶನ್ ತೂಗುದೀಪ್ ಅವರಿಗೆ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲೂ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಇದೀಗ ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬರಲಿ ಅಂತಾ ಕೋಟ್ಯಂತರ ಅಭಿಮಾನಿಗಳು ಆಶಿಸುತ್ತಿದ್ದಾರೆ. ಹೀಗೆ ಅಭಿಮಾನಿಗಳ ಆಶಯ ಈಡೇರಲಿ ಅಂತಾ ದೇವರ ಬಳಿ ಕೂಡ ಪ್ರಾರ್ಥನೆ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಯುವ ದಸರಾ ಕಾರ್ಯಕ್ರಮ ಕೂಡ ದರ್ಶನ್ ತೂಗುದೀಪ್ ಅವರ ಮೇಲೆ ಅಭಿಮಾನಿಗಳಿಗೆ ಎಷ್ಟು ಪ್ರೀತಿ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.












Click it and Unblock the Notifications