ನಟ ದರ್ಶನ್ ಶತ್ರು ಜೊತೆಗೆ ಕೈಜೋಡಿಸಿದ ದುನಿಯಾ ವಿಜಯ್ ಅಂತಾ... Darshan Thoogudeepa
ದರ್ಶನ್ ತೂಗುದೀಪ್ ಅವರ ಜೀವನದಲ್ಲಿ ಎಲ್ಲವೂ ಉಲ್ಟಾ ಆಗುತ್ತಿದೆ... ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬಾಕ್ಸ್ ಆಫಿಸ್ ಸುಲ್ತಾನ್ ಅಂತಾನೇ ಬಿರುದು ಕೂಡ ಪಡೆದಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಜೀವನ ಬಿರುಗಾಳಿಗೆ ಸಿಲುಕಿ ನರಳಿ ಹೋಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಬದುಕಿನಲ್ಲಿ ಬರೀ ನಡೆಯಬಾರದ ಘಟನೆಗಳೇ ನಡೆಯುತ್ತಿವೆ. ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಶತ್ರು ಜೊತೆಗೆ ಕೈಜೋಡಿಸಿದ ದುನಿಯಾ ವಿಜಯ್ ಅಂತಾ...
ಡಿ-ಬಾಸ್ ದರ್ಶನ್ ತೂಗುದೀಪ್ & ದುನಿಯಾ ವಿಜಯ್ ಅವರು ಹತ್ತಾರು ವರ್ಷದಿಂದಲೂ ಸ್ನೇಹಿತರು. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಮಾಡುವ ಮೊದಲೇ ಇಬ್ಬರ ಮಧ್ಯೆ ಸ್ನೇಹ ಇತ್ತು. ಹೀಗೆ ಇಬ್ಬರೂ ಒಬ್ಬರ ಸಿನಿಮಾಗೆ ಮತ್ತೊಬ್ಬರು ಬೆಂಬಲ ನೀಡುತ್ತಾ, ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದೂ ಇದೆ. ಆದರೆ ಯಾವಾಗ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬ ವ್ಯಕ್ತಿ ಬರ್ಬರ ಕೊಲೆ ನಡೆದು ಹೋಗಿತ್ತೋ, ಅಲ್ಲಿಂದ ಮುಂದೆ ಆಗಿದ್ದೆಲ್ಲ ಅಲ್ಲೋಲ ಕಲ್ಲೋಲ. ಹೀಗಿದ್ದಾಗಲೇ, ನಟ ದರ್ಶನ್ ತೂಗುದೀಪ್ ಶತ್ರು ಜೊತೆಗೆ ಕೈಜೋಡಿಸಿದ ದುನಿಯಾ ವಿಜಯ್ ಅಂತಾ...

ನಟ ದರ್ಶನ್ ತೂಗುದೀಪ್ ಶತ್ರು ಜೊತೆ ದುನಿಯಾ?
ಬೆಂಗಳೂರಿನ ಪಟ್ಟಣಗೆರೆ ಶೆಡ್‌ನ ಒಳಗೆ ರೇಣುಕಾಸ್ವಾಮಿಗೆ ಟಾರ್ಚರ್ ನೀಡಿ & ಭೀಕರವಾಗಿಯೇ ಕೊಲೆ ಮಾಡಿ ಬಾಡಿಯನ್ನು ರಾಜಕಾಲುವೆಯ ಪಕ್ಕಕ್ಕೆ ಎಸೆಯಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ತಲೆಗೆ ಸುತ್ತಿಕೊಂಡು ಜೈಲಿಗೆ ಕೂಡ ಹೋಗಿ ಬಂದಿದ್ದಾರೆ. ಈ ಕೊಲೆ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ & ದುನಿಯಾ ವಿಜಯ್ ಸ್ನೇಹವೂ ಹಾಳಾಗಿದೆ ಎಂಬ ಆರೋಪಗಳ ನಡುವೆ, ನಟ ದರ್ಶನ್ ತೂಗುದೀಪ್ ಶತ್ರು ಜೊತೆಗೆ ಕೈಜೋಡಿಸಿದ ದುನಿಯಾ ವಿಜಯ್ ಅಂತಾ...
ನಟ ದುನಿಯಾ ವಿಜಯ್ & ಡಿ-ಬಾಸ್ ದರ್ಶನ್...
ಹೌದು, ನಟ ದುನಿಯಾ ವಿಜಯ್ ಪ್ರಕೃತಿ ಬಗ್ಗೆ ಸಾಕಷ್ಟು ಪ್ರೀತಿ & ಗೌರವ ಇಟ್ಟುಕೊಂಡ ವ್ಯಕ್ತಿ. ಹೀಗಿದ್ದಾಗ ತಮ್ಮ ಮಾಸ್ತಿಗುಡಿ ಸಿನಿಮಾದಲ್ಲೂ ಪ್ರಕೃತಿ ರಕ್ಷಣೆ ಬಗ್ಗೆ ಅವರು ಹಲವು ಮಹತ್ವದ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡಿದ್ದರು. ಹೀಗಿದ್ದಾಗ ಕೇರೆ ಹಾವುಗಳನ್ನ ರಕ್ಷಣೆ ಮಾಡುವ ಕುರಿತು ವಿಡಿಯೋ ಒಂದನ್ನ ಮಾಡಿದ್ದಾರೆ ನಟ ದುನಿಯಾ ವಿಜಯ್ ಅವರು. ಈ ವಿಡಿಯೋನೇ ಇದೀಗ ಕಿಚ್ಚು ಹೊತ್ತಿಸಿದ್ದು, ನಟ ದರ್ಶನ್ ತೂಗುದೀಪ್ ಶತ್ರು ಜೊತೆಗೆ ಕೈಜೋಡಿಸಿದ ದುನಿಯಾ ವಿಜಯ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಶುರುವಾಗಿದೆ. ಅರೆ ಕೇರೆ ಹಾವುಗಳನ್ನ ರಕ್ಷಣೆ ಮಾಡುವ ಬಗ್ಗೆ ವಿಡಿಯೋ ಮಾಡೋದಕ್ಕೂ & ದುನಿಯಾ ವಿಜಯ್ ನಟ ದರ್ಶನ್ ತೂಗುದೀಪ್ ಅವರ ಶತ್ರು ಜೊತೆಗೆ ಕೈಜೋಡಿಸಿದ್ದಾರೆ ಎಂಬ ಆರೋಪಕ್ಕೂ ಏನು ಸಂಬಂಧ? ಅಂತಾ ಯೋಚನೆ ಮಾಡುತ್ತಿದ್ದೀರಾ, ಮುಂದೆ ಓದಿ.
ದುನಿಯಾ ವಿಜಯ್ ನಿಜಕ್ಕೂ ಮಾಡಿದ್ದೇನು?
ಅಂದಹಾಗೆ ನಟ ದುನಿಯಾ ವಿಜಯ್ ಅವರು ಹೀಗೆ ಕೇರೆ ಹಾವುಗಳನ್ನು ರಕ್ಷಣೆ ಮಾಡುವ ಕುರಿತು ವಿಡಿಯೋ ಮಾಡುವಾಗ ನಟ ವಿಜಯ್ ಅವರ ಪಕ್ಕದಲ್ಲಿ ಒಬ್ಬ ವಿವಾದಾತ್ಮಕ ವ್ಯಕ್ತಿ ನಿಂತಿರುವುದೇ ಇದೀಗ ಭಾರಿ ಬೆಂಕಿ ಹೊತ್ತಿಸಿದೆ. ಅಭಿಮಾನಿಗಳ ಪಾಲಿನ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಕೆಟ್ಟ ಕೆಟ್ಟದಾಗಿ ಮಾತನಾಡಿದ್ದಾರೆ ಎಂಬ ಆರೋಪ ಹೊತ್ತಿರುವ ಅಹೋರಾತ್ರ ಜೊತೆಗೆ ನಿಂತು ನಟ ದುನಿಯಾ ವಿಜಯ್ ವಿಡಿಯೋ ಮಾಡಿದ್ದಾರೆ. ಕೇರೆ ಹಾವು ರಕ್ಷಣೆ ಬಗ್ಗೆ ನಟ ದುನಿಯಾ ವಿಜಯ್ ಅವರು ಮಾತನಾಡುವಾಗ ಅಹೋರಾತ್ರ ಪಕ್ಕದಲ್ಲೇ ನಿಂತು ನಗುತ್ತಿದ್ದರು. ಇದೇ ವಿಚಾರ ಇದೀಗ ವಿವಾದದ ಕಿಡಿ ಹೊತ್ತಿಸಿದ್ದು, ನಟ ದರ್ಶನ್ ತೂಗುದೀಪ್ ಶತ್ರು ಜೊತೆಗೆ ಕೈಜೋಡಿಸಿದ ನಟ ದುನಿಯಾ ವಿಜಯ್ ಅಂತಾ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ & ದರ್ಶನ್ ಅವರ ಅಭಿಮಾನಿಗಳಿಂದ ಆಕ್ರೋಶವು ಕೂಡ ವ್ಯಕ್ತವಾಗಿದೆ.












Click it and Unblock the Notifications