Actor Darshan: ಜೈಲಿನಿಂದಲೇ ಅಭಿಮಾನಿಗಳಿಗೆ ದೊಡ್ಡದಾಗಿ ಸಂದೇಶ ಕೊಟ್ಟ ದರ್ಶನ್!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರು ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, ಜಾಮೀನು ಪಡೆಯುವ ವಿಶ್ವಾಸದಲ್ಲಿದ್ದಾರೆ. ದರ್ಶನ್ ಜಾಮೀನು ಪಡೆದು ಹೊರ ಬರಲಿ ಎಂದು ಅವರ ಲಕ್ಷಾಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದರೂ, ನಟ ದರ್ಶನ್ ಇಂದು ನಗು ನಗುತ್ತಲೇ ಸಂಗೀತ ನಿರ್ದೇಶಕ ಹರಿಕೃಷ್ಣ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ದರ್ಶನ್‌ರನ್ನು ನೋಡಲು ಪ್ರತಿ ದಿನ ಹಲವು ಅಭಿಮಾನಿಗಳು ಜೈಲಿನ ಬಳಿ ಹೋಗುತ್ತಾರೆ. ಇಂದು ದರ್ಶನ್ ಹರಿಕೃಷ್ಣರನ್ನು ಭೇಟಿ ಮಾಡಲು ಸೆಲ್‌ನಿಂದ ಹೊರಬರುತ್ತಿದ್ದಂತೆ ಅಭಿಮಾನಿಗಳು ದರ್ಶನ್‌ಗೆ ಜೈಕಾರ ಹಾಕಿದ್ದಾರೆ. ಅಭಿಮಾನಿಗಳ ಕಡೆ ನಗು ನಗುತ್ತಲೇ ಸನ್ನೆ ಮಾಡಿದ್ದು, ಹೊರ ಬರುವ ಸಿಗ್ನಲ್ ಕೊಟ್ರಾ ಎನ್ನುವ ಪ್ರಶ್ನೆ ಎದುರಾಗಿದೆ.

ಅಭಿಮಾನಿಗಳನ್ನು ನೋಡಿದ ತಕ್ಷಣ ತಮ್ಮ ಕೈಯನ್ನು ಹೃದಯದ ಬಳಿ ಇಟ್ಟುಕೊಂಡ ಅವರು, ನೀವು ಹೃದಯದಲ್ಲಿದ್ದೀರಾ ಎನ್ನುವ ಸಂದೇಶ ಕೊಟ್ಟಿದ್ದಲ್ಲದೆ, ನಾನು ಶೀಘ್ರದಲ್ಲೇ ಹೊರ ಬರುತ್ತೇನೆ ಎನ್ನುವ ಸೂಚನೆ ಕೂಡ ಕೊಟ್ಟಿದ್ದಾರೆ. ದರ್ಶನ್‌ರ ಈ ಸನ್ನೆಯನ್ನು ನೋಡಿದ ಅಭಿಮಾನಿಗಳು ಇದೀಗ ಭಾರಿ ಖುಷಿಯಾಗಿದ್ದಾರೆ.
ದಸರಾ ಹಬ್ಬದ ವೇಳೆಗೆ ದರ್ಶನ್ ಬಿಡುಗಡೆಯಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು, ಇಂದು ಕೂಡ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದ್ದು, ದಸರಾಗೆ ಮುನ್ನ ದರ್ಶನ್ ಜಾಮೀನು ಸಿಗುವ ಸಾಧ್ಯತೆ ಕಡಿಮೆ ಇದೆ ಎನ್ನಲಾಗಿದೆ. ಇಂದೇ ಏನಾದರೂ ಜಾಮೀನು ಸಿಕ್ಕರೆ ಮಾತ್ರ ದರ್ಶನ್ ನಾಳೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಇಲ್ಲವಾದಲ್ಲಿ ದಸರಾ ಬಳಿಕವೇ ಅವರ ಜಾಮೀನು ಅರ್ಜಿ ಭವಿಷ್ಯ ನಿರ್ಧಾರವಾಗುವ ಸಾಧ್ಯತೆ ಇದೆ.
ದರ್ಶನ್ ಆರೋಗ್ಯ ಹೇಗಿದೆ?
ನಟ ದರ್ಶನ್ ಸದ್ಯ ಬೆನ್ನು ನೋವಿನಿಂದ ಬಳಲುತ್ತಿದ್ದು ದಿನೇ ದಿನೇ ನೋವು ಹೆಚ್ಚಾಗುತ್ತಿದೆ. ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ನಿರಾಕರಿಸಿದ್ದು, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವುದಾಗಿ ಜೈಲಿನ ವೈದ್ಯರಿಗೆ ಹೇಳಿದ್ದಾರೆ. ಇಂದು ನಟ ದರ್ಶನ್‌ನ ಆರೋಗ್ಯ ವರದಿಗಳು ಜೈಲು ಅಧಿಕಾರಿಗಳ ಕೈಸೇರಲಿದ್ದು, ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ, ಬೆಂಗಳೂರಿಗೆ ಕರೆತರುವ ಬಗ್ಗೆ ಕೂಡ ಯೋಚಿಸುವ ಸಾಧ್ಯತೆ ಇದೆ.
ಸೆಷನ್ಸ್ ಕೋರ್ಟ್‌ನಲ್ಲಿ ನಟ ದರ್ಶನ್‌ಗೆ ಜಾಮೀನು ಸಿಗದೇ ಇದ್ದರೆ ಅವರ ಆರೋಗ್ಯದ ಕಾರಣ ಕೊಟ್ಟು ಹೈಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಹಾಕುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ದರ್ಶನ್‌ಗೆ ಮಲಗಲು ಹಾಸಿಗೆ ವ್ಯವಸ್ಥೆ ಇಲ್ಲದ ಕಾರಣ ಅವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎನ್ನಲಾಗಿದೆ. ದಿನೇ ದಿನೇ ತೂಕ ಕಳೆದುಕೊಳ್ಳುತ್ತಿದ್ದು, ಆಪ್ತರು, ಕುಟುಂಬಸ್ಥರು ಭೇಟಿಗೆ ತೆರಳಿದಾಗ ಕೊಡುವ ಡ್ರೈಫ್ರೂಟ್ಸ್, ಹಣ್ಣುಗಳೇ ದರ್ಶನ್‌ಗೆ ಪ್ರೊಟೀನ್ ಮೂಲವಾಗಿವೆ.
ದಸರಾ ಹಬ್ಬಕ್ಕೆ ದರ್ಶನ್ ಹೊರಬರಲು ಸಾಧ್ಯವಾಗದೇ ಇದ್ದರೆ, ದೀಪಾವಳಿಗಾದರೂ ಹೊರ ಬರುವಂತಾಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಇದೀಗ ದರ್ಶನ್ ಕೂಡ ಅಭಿಮಾನಿಗಳಿಗೆ ಹೊರ ಬರುವ ಸೂಚನೆ ಕೊಟ್ಟಿರುವುದು ಖುಷಿ ಹೆಚ್ಚಿಸಿದೆ.












Click it and Unblock the Notifications