Pavithra Gowda: ಹೊಸ ಜೀವನ ಪ್ರಾರಂಭಿಸಿದ ಪವಿತ್ರಾ ಗೌಡ!
Pavithra Gowda: ಕನ್ನಡದ ನಟಿ ಹಾಗೂ ದರ್ಶನ್ ಗೆಳತಿ ಪವಿತ್ರಾ ಗೌಡ ಅವರು ಸಖತ್ ಮಿಂಚುತ್ತಿದ್ದಾರೆ. ರೇಣುಕಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ್ದ. ಇದೀಗ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಅವರು ಹೊಸ ಜೀವನ ಕಟ್ಟಿಕೊಳ್ಳುತ್ತಿದ್ದು. ತಮ್ಮ ಬ್ಯುಸಿನೆಸ್ ಅನ್ನು ಮರು ಪ್ರಾರಂಭ ಮಾಡಿದ್ದಾರೆ. ಸೀರೆಯಲ್ಲಿ ಸಖತ್ ಆಗಿ ಮಿಂಚುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ತಮ್ಮ ಬ್ಯುಸಿನೆಸ್ ಅನ್ನು ಅವರುಮರು ಪ್ರಾರಂಭ ಮಾಡಿದ್ದಾರೆ. ಕನ್ನಡದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಪವಿತ್ರಾ ಗೌಡ ಅವರು ಆ ಮೇಲೆ ಬ್ಯುಸಿನೆಸ್ ಪ್ರಾರಂಭ ಮಾಡಿದ್ದರು. ಆದರೆ ಆ ಬ್ಯುಸಿನೆಸ್ ಮಧ್ಯದಲ್ಲಿ ಸಕ್ಸಸ್ ಆಗಿರಲಿಲ್ಲ. ಅಷ್ಟೇ ಅಲ್ಲ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ ಮೇಲೆ ಈ ವ್ಯವಹಾರ ಪೂರ್ತಿ ತಲೆಕೆಳಗಾಗಿತ್ತು. ಇದೀಗ ಪ್ರೇಮಿಗಳ ದಿನದಂದೇ ಇದನ್ನು ಪವಿತ್ರಾ ಗೌಡ ಅವರು ರೀ ಔಪನ್ ಮಾಡಿದ್ದಾರೆ.
ಪವಿತ್ರಾ ಗೌಡ ಅವರು ಪ್ರೇಮಿಗಳ ದಿನದಂದೇ ತಮ್ಮ ವ್ಯವಹಾರವನ್ನು ಮರು ಪ್ರಾರಂಭಿಸಿದ್ದಾರೆ. ಈ ಮೂಲಕ ಸರ್‌ಪ್ರೈಸ್ ಕೊಟ್ಟಿದ್ದಾರೆ. ಕೆಲವು ವರ್ಷಗಳ ಹಿಂದೆಯೇ ಪವಿತ್ರಾ ಗೌಡ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ರೆಡ್ ಕಾರ್ಪೆಟ್ ಸ್ಟುಡಿಯೋ 777 ಲಾಂಚ್ ಮಾಡಿದ್ದರು. ಇದು ಪ್ರಾರಂಭದ ದಿನಗಳಲ್ಲಿ ಉತ್ತಮವಾಗಿ ನಡೆದುಕೊಂಡು ಬರುತ್ತಿತ್ತು. ಆದರೆ, ಕ್ರಮೇಣ ಇದರ ಮೇಲೆ ಹೆಚ್ಚು ಕೆಲಸ ಮಾಡುವುದಕ್ಕೆ ಪವಿತ್ರಾ ಗೌಡ ಅವರಿಗೆ ಸಮಯ ಸಿಕ್ಕಿರಲಿಲ್ಲ ಎಂದು ಹೇಳಲಾಗಿತ್ತು.

ಅಲ್ಲದೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಸೇರಿದ ಮೇಲೆ ಪವಿತ್ರಾ ಅಥವಾ ಅವರ ಸಂಬಂಧಿಕರು ಯಾರಿಂದಲೂ ಈ ವ್ಯವಹಾರವನ್ನು ನೋಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಎಲ್ಲರೂ ಕೇಸ್‌ನ ಟೆಂಕ್ಷನ್‌ನಲ್ಲಿದ್ದರು. ಈಚೆಗೆ ಪವಿತ್ರಾ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನು ಮುಂಜೂರಾಗಿದ್ದು. ಇದೀಗ ಅವರು ತಮ್ಮ ಹಳೆಯ ಕೆಲಸಗಳನ್ನು ಶುರು ಮಾಡಿದ್ದಾರೆ. ಶುಕ್ರವಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ ರೆಡ್ ಕಾರ್ಪೆಟ್ ಸ್ಟುಡಿಯೋ 777 ಅನ್ನು ಪವಿತ್ರ ಗೌಡ ಅವರು ಬಂದು ರೀ ಲಾಂಚ್ ಮಾಡಿದ್ದಾರೆ.
ರೇಂಜ್ ರೋವರ್ ಕಾರ್‌ನಲ್ಲಿ ಬಂದ ಪವಿತ್ರಾ: ಇನ್ನು ಶುಕ್ರವಾರ ಸ್ಟುಡಿಯೋ ರೀ ಲಾಂಚ್‌ಗೆ ಬಂದ ಪವಿತ್ರಾ ಅವರು ರೇಂಜ್ ರೋವರ್ ಕಾರ್‌ನಲ್ಲಿ ಬಂದಿಳಿದಿದ್ದಾರೆ. ರೇಂಜ್ ರೋವರ್ ಕಾರ್‌ನಲ್ಲಿ ಅವರು ಬಂದಿರುವ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸುತ್ತಲು ಬಾಡಿಗಾರ್ಡ್ ಇರುವುದು ಸಹ ವಿಡಿಯೋದಲ್ಲಿ ಇದೆ.

ದರ್ಶನ್ ಭೇಟಿ ಕುತೂಹಲ: ಇನ್ನು ಜೈಲಿನಿಂದ ಬಿಡುಗಡೆಯಾದ ಮೇಲೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಅವರು ಒಮ್ಮೆಯೂ ನೇರವಾಗಿ ಭೇಟಿಯಾಗಿಲ್ಲ. ಆತ್ಮೀಯರಾಗಿದ್ದ ಇವರಿಬ್ಬರು ರೇಣುಕಾಸ್ವಾಮಿ ಕೊಲೆ ಕೇಸ್‌ನ ನಂತರ ದೂರವಾಗಿದ್ದಾರೆ. ಹೀಗಾಗಿ ಮತ್ತೆ ಭೇಟಿಯಾಗಲಿದ್ದಾರೆಯೇ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಮೂಡಿದೆ. ಇನ್ನು ಕೆಲವರು ದರ್ಶನ್ ಅಭಿಮಾನಿಗಳು ಇವರಿಬ್ಬರು ಮತ್ತೆ ಭೇಟಿ ಮಾಡುವುದು ಬೇಡ ಅಂತಲೂ ಅಭಿಪ್ರಾಯಪಡುತ್ತಿದ್ದಾರೆ.
ಗೆಳತಿಯರು ಭಾಗಿ: ಇನ್ನು ಈ ಹಿಂದೆ ರೆಡ್ ಕಾರ್ಪೆಟ್ ಪ್ರಾರಂಭವಾದ ಸಂದರ್ಭದಲ್ಲಿ ದರ್ಶನ್ ಆತ್ಮೀಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ, ಈಗ ಪವಿತ್ರಾ ಗೌಡ ಅವರ ಗೆಳತಿಯರು ಮಾತ್ರ ರೀ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications