ದರ್ಶನ್‌ಗೆ ಜಾಮೀನು: ನಟ ಧನ್ವೀರ್‌ ಫುಲ್‌ ಜೋಶ್‌ ಪೋಸ್ಟ್‌

ಬೆಂಗಳೂರು, ಡಿಸೆಂಬರ್‌ 13: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ನಟ ದರ್ಶನ್​ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಜೂನ್‌ 11ರಂದು ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ದರ್ಶನ್‌, ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿ ಕಳೆದ ಆರು ತಿಂಗಳು ಕಳೆದಿದ್ದರು. ಸದ್ಯ ಮಧ್ಯಂತರ ಜಾಮೀನಿನ ಮೇಲೆ ಹೊರ ಬಂದಿರುವ ದರ್ಶನ್‌ಗೆ ಇಂದು ಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ದರ್ಶನ್‌ಗೆ ಜಾಮೀನು ಸಿಗುತ್ತಿದ್ದಂತೆ ಅವರ ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಅಂದಿನಿಂದ ಇಂದಿನವರೆಗೂ ದರ್ಶನ್‌ ಜೊತೆ ನಿಂತ ನಟ ಧನ್ವೀರ್‌ ಗೌಡ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ದರ್ಶನ್‌ಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ನಟ ಧನ್ವೀರ್‌ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ತಾಯಿ ಚಾಮುಂಡೇಶ್ವರಿ ಫೋಟೋ ಹಂಚಿಕೊಂಡಿದ್ದು, ಜೊತೆಗೆ ಮತ್ತೊಂದು ವಿಶೇಷವಾದ ಪೋಸ್ಟ್‌ವೊಂದನ್ನು ಕೂಡ ಹಂಚಿಕೊಂಡಿದ್ದಾರೆ.

Darshan Gets Bail In Renukaswamy Murder Case Actor Dhanveer Shared Special Post

ನಟ ದರ್ಶನ್ ಜೊತೆಗಿರುವ ಫೋಟೋ ಹಂಚಿಕೊಂಡಿರುವ ಧನ್ವೀರ್‌, 'ಉಸಿರು ಇರುವ ವರೆಗೂ ಇರುತ್ತೇವೆ ನಿಮ್ಮ ಬೆನ್ನ ಹಿಂದೆ' ಎಂದು ಬರೆದುಕೊಂಡಿದ್ದಾರೆ. ನಟ ಧನ್ವೀರ್ ಮೊದಲಿನಿಂದಲೂ ದರ್ಶನ್‌ ಆಪ್ತರಾಗಿದ್ದು, ತಮ್ಮ ಸಿನಿಮಾ ರಂಗದ ಬೆಳವಣಿಗೆಗೆ ದರ್ಶನ್‌ ಕಾರಣ ಎನ್ನುತ್ತಿದ್ದರು. ಈ ಸ್ನೇಹ ಹೀಗೆ ಮುಂದುವರಿದುಕೊಂಡು ಬಂದಿತ್ತು.

ದರ್ಶನ್‌ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಸಂದರ್ಭದಲ್ಲಿಯೂ ಧನ್ವೀರ್, ದರ್ಶನ್‌ ಪರವಾಗಿ, ಅವರ ಕುಟುಂಬಸ್ಥರ ಜೊತೆ ನಿಂತಿದ್ದರು. ಆಪ್ತನಾಗಿದ್ದ ಧನ್ವೀರ್ ಈ ಪ್ರಕರಣದಲ್ಲಿ ದರ್ಶನ್‌ಗೆ ಆಪದ್ಭಾಂಧವ ಆದರು. ದರ್ಶನ್‌ ಜೈಲಿನಲ್ಲಿದ್ದಾಗಲೂ ಧನ್ವೀರ್ ಪದೇ ಪದೇ ಭೇಟಿ ಮಾಡುತ್ತಿದ್ದರು, ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಜೊತೆಯಲ್ಲಿ ತೆರಳಿ ಊಟ ಔಷಧಿ ಬಟ್ಟೆ ನೀಡಿ ಬರುತ್ತಿದ್ದರು. ಅಲ್ಲದೇ ಹೊರಗಡೆ ಜಾಮೀನಿಗಾಗಿ ಪ್ರಯತ್ನ ನಡೆಸುತ್ತಿದ್ದರು.

Darshan Gets Bail In Renukaswamy Murder Case Actor Dhanveer Shared Special Post

ದರ್ಶನ್‌ ಅನಾರೋಗ್ಯ ಕಾರಣದ ಮೇಲೆ ಕರ್ನಾಟಕ ಹೈಕೋರ್ಟ್​ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಈ ಷರತ್ತುಬದ್ಧ ಜಾಮೀನು ಸಿಕ್ಕ ಸಂದರ್ಭದಲ್ಲಿ ಧನ್ವೀರ್ ಗೌಡ, ದರ್ಶನ್‌ ಜಾಮೀನಿಗೆ ಶ್ಯೂರಿಟಿ ಕೊಟ್ಟಿದ್ದು, ಸಂಕಷ್ಟದ ದಿನಗಳಲ್ಲಿ ದರ್ಶನ್‌ಗೆ ಬಲವಾಗಿ ನಿಂತರು. ಇದೀಗ ದರ್ಶನ್‌ಗೆ ಜಾಮೀನು ಸಿಕ್ಕಿದ್ದು, ನಟ ಧನ್ವೀರ್ ಗೌಡ ಫುಲ್‌ ಖುಷಿಯಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+