Darshan Gang: ಕಾರ್ತಿಕ್‌ಗೆ ಅಮೌಂಟ್ ಆಫರ್ ಮಾಡಿದ್ದ ದರ್ಶನ್ ಗ್ಯಾಂಗ್ ಆರೋಪಿ ದೀಪಕ್
ಬೆಂಗಳೂರು ಜುಲೈ 5: ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನಕ್ಕೊಂದು ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಟ ದರ್ಶನ್ ಸೇರಿದಂತೆ 17 ಆರೋಪಿಗಳಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ. ಈ ಆರೋಪಿಗಳ ಪೈಕಿ ದೀಪಕ್ ಎಂಬ ಆರೋಪಿ ಕಾರ್ತಿಕ್ ಎಂಬಾತನಿಗೆ ಅಮೌಂಟ್ ಆಫರ್ ಮಾಡಿದ್ದ ಎನ್ನುವ ವಿಚಾರ ತಿಳಿದು ಬಂದಿದೆ.
ಕಾರ್ತಿಕ್‌ಗೆ ಅಮೌಂಟ್ ಆಫರ್ ಮಾಡಿದ್ದ ದರ್ಶನ್ ಗ್ಯಾಂಗ್ ಆರೋಪಿ ದೀಪಕ್ ಬಗ್ಗೆ ಬಗೆದಷ್ಟು ವಿಚಾರಗಳು ಹೊರಬರುತ್ತಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದೀಪಕ್ ಎ13 ಆರೋಪಿ. ಇವರು ಪ್ರಭಾವಿ ಶಾಸಕರ ತಂಗಿ ಮಗಳ ಗಂಡ ಎಂದು ತಿಳಿದು ಬಂದಿದೆ. ದೀಪಕ್ ಬಿಡುಗಡೆಗೆ ಸಾಕಷ್ಟು ಒತ್ತಡ ಪೊಲೀಸರ ಮೇಲಿದೆ ಎಂದು ಹೇಳಲಾಗುತ್ತಿದೆ.

ಮಾಜಿ ಸಚಿವರು ಹಾಗೂ ಶಾಸಕರು ದೀಪಕ್ ಬಿಡುಗಡೆಗೆ ಒತ್ತಡ ಹೇರಿದ್ದಾರೆನ್ನಲಾಗುತ್ತಿದೆ. ಈ ಮೂಲಕ ಆರೋಪಿ ದೀಪಕ್ ಉಳಿಸಲು ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಅಷ್ಟಕ್ಕೂ ಈ ದೀಪಕ್ ಮಾಡಿದ ಕೆಲಸ ಏನು ಗೊತ್ತಾ?
ಶಾಸಕರೊಬ್ಬರ ಬಳಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎಂಬ ವ್ಯಕ್ತಿಗೆ ದೀಪಕ್ ಹಣದ ಆಮಿಷ ಒಡ್ಡಿದ್ದನಂತೆ. ರೇಣುಕಾಸ್ವಾಮಿ ಕೊಲೆ ಆರೋಪವನ್ನು ಹೊತ್ತುಕೊಳ್ಳುವಂತೆ ಕಾರ್ತಿಕ್ ಮೇಲೆ ಒತ್ತಾಯ ಹೇರಿದ್ದ ದೀಪಕ್. ಸಾಲ ಮಾಡಿಕೊಂಡು ಓಡಾಡುತ್ತಿದ್ದ ಕಾರ್ತಿಕ್ ದೀಪಕ್ ಆಫರ್‌ಗೆ ಮೊದಮೊದಲು ಒಪ್ಪಿಕೊಂಡಿರಲಿಲ್ಲ. ಯಾವಾಗ ಶೆಡ್ಡಿನಲ್ಲಿ ದರ್ಶನ್ ಅವರನ್ನು ನೋಡಿದನೋ ಆಗ ಕಾರ್ತಿಕ್‌ಗೆ ದೀಪಕ್ ಮೇಲೆ ನಂಬಿಕೆ ಬಂದಿದೆ.
10 ಲಕ್ಷಕ್ಕೆ ಈ ಡೀಲ್ ಮಾಡಿಕೊಳ್ಳಲಾಗಿತ್ತು. ಕೊಲೆ ಆರೋಪ ಹೊತ್ತು ಶರಣಾದ ಬಳಿಕ ಬೇಲ್ ಕೊಡಿಸುತ್ತೇವೆ ಎಂದು ಕಾರ್ತಿಕ್‌ನೊಂದಿಗೆ ದೀಪಕ್ ಒಪ್ಪಂದ ಮಾಡಿಕೊಂಡಿದ್ದರು. ಅಲ್ಲದೆ ಶೆಡ್‌ನಲ್ಲಿ 30,000 ಸಂಬಳಕ್ಕೆ ಕೆಲಸ ಕೊಡಿಸುವುದಾಗಿಯೂ ಮಾತಾಗಿತ್ತಂತೆ. ಕಾರ್ತಿಕ್ ತನ್ನ ಸಾಲ ತೀರಿಸಲು ಈ ಡೀಲ್ ಒಪ್ಪಿಕೊಂಡಿದ್ದ ಎನ್ನಲಾಗಿದೆ.

ಆರಂಭದಲ್ಲಿ ಕಾರ್ತಿಕ್ ಇದಕ್ಕೆ ಒಪ್ಪಿಕೊಂಡಿರಲಿಲ್ಲ. ಶೆಡ್ಡಿನಲ್ಲಿ ಡಿ ಬಾಸ್ ನೋಡಿದ ಮೇಲೆ ದೀಪಕ್ ಮೇಲೆ ಕಾರ್ತಿಕ್‌ಗೆ ನಂಬಿಕೆ ಬಂದಿದೆ. ಬಳಿಕ ಇದಕ್ಕೆ ಕಾರ್ತಿಕ್ ಒಪ್ಪಿಕೊಂಡಿದ್ದಾರೆ. ನಂತರವಷ್ಟೇ ಪೊಲೀಸ್ ಠಾಣೆಗೆ ಹೋಗಿ ಕೊಲೆ ಮಾಡಿದ್ದು ನಾನೇ ಎಂದು ಕಾರ್ತಿಕ್ ಹೇಳಿದ್ದಾರೆ.
ಆದರೆ ಪೊಲೀಸರಿಗೆ ಕಾರ್ತಿಕ್ ಹೇಳುವ ಮಾತಿನ ಮೇಲೆ ನಂಬಿಕೆ ಬಂದಿಲ್ಲ. ಅನುಮಾನದ ವಾಸನೆ ಬರುತ್ತಿದ್ದಂತೆ ಪೊಲೀಸರು ತಮ್ಮದೇ ಆದ ಶೈಲಿಯಲ್ಲಿ ಬಾಯಿ ಬಿಡಿಸಿದ್ದಾರೆ. ಇದರಿಂದ ಕಾರ್ತಿಕ್ ಹಾಗೂ ದೀಪಕ್ ಪ್ಲ್ಯಾನ್ ಬಯಲಾಗಿದೆ. ಕೊಲೆ ಪ್ರಕರಣದಲ್ಲಿ ದರ್ಶನ್ ಭಾಗಿಯನ್ನು ಮರೆ ಮಾಚಲು ಈ ಎಲ್ಲಾ ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗುತ್ತಿದೆ.
ಆದರೀಗ ಈ ದೀಪಕ್ ಬಿಡುಗಡೆಗಾಗಿ ಪೊಲೀಸರ ಮೇಲೆ ಒತ್ತಡಗಳು ಹೆಚ್ಚಾಗಿವೆಯಂತೆ. ಪ್ರಭಾವಿ ವ್ಯಕ್ತಿಗಳ ಸಂಬಂಧಿಯಾಗಿರುವ ದೀಪಕ್ ಬಿಡುಗಡೆಗೆ ಸಾಕಷ್ಟು ಕರೆಗಳು ಸ್ವೀಕರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದುಡುಕಿ ಮಾಡಿದ ತಪ್ಪಿನಿಂದಾಗಿ ನಟ ದರ್ಶನ್ ಹಾಗೂ ಅವರ ಗ್ಯಾಂಗ್‌ಗೆ ಜೈಲೂಟಾ ಫಿಕ್ಸ್ ಆಗಿದೆ. ಸದ್ಯಕ್ಕೆ ದರ್ಶನ್ ಹಾಗೂ ಪವಿತ್ರಾ ಗೌಡ ಅವರಿಗೆ ಜೈಲೇ ಗತಿಯಾಗಿದೆ. ದರ್ಶನ್ ಸೇರಿದಂತೆ 17 ಆರೋಪಿಗಳಿಗೆ ಜುಲೈ 18ರವರೆಗೆ ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಆದೇಶಿಸಿದೆ.












Click it and Unblock the Notifications