"ಡೆವಿಲ್"ಗೆ ಪುನೀತ್ ಫ್ಯಾನ್ಸ್ ಸಪೋರ್ಟ್ ಬೇಡ ಎಂದ ದರ್ಶನ್ ಫ್ಯಾನ್ಸ್ !
ಕನ್ನಡದಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಫ್ಯಾನ್ಸ್ ವಾರ್ ಹೊಸದೇನು ಅಲ್ಲ. ಸ್ಟಾರ್ ನಟರ ನಡುವೆಯೂ ಸ್ಟಾರ್ ವಾರ್ ಆಗಿರುವ ಉದಾಹರಣೆ ಸಾಕಷ್ಟು ಇದೆ. ಇದೀಗ ಪವರ್ ಸ್ಟಾರ್ ದಿ. ಪುನೀತ್ ರಾಜ್‌ಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನಡುವೆ ಡೆವಿಲ್ ಚಿತ್ರದ ವಿಚಾರವಾಗಿ ಫ್ಯಾನ್ಸ್ ವಾರ್ ಪ್ರಾರಂಭವಾಗಿದೆ.
ಕನ್ನಡ ಚತ್ರರಂಗದಲ್ಲಿ ಕೋಟ್ಯಾಂತರ ಜನ ಅಭಿಮಾನಿಗಳನ್ನು ಹೊಂದಿರುವ ಪುನೀತ್‌ರಾಜ್ ಕುಮಾರ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಮೊದಲಿನಿಂದಲೂ ತುಸು ಜಾಸ್ತಿ ಎನಿಸುವಷ್ಟು ಮುನಿಸು ಇದೆ. ಇದೀಗ ಡೆವಿಲ್ ಚಿತ್ರದ ಪ್ರಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಹಾಗೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಶುರುವಾಗಿದೆ.

ಡೆವಿಲ್‌ಗೆ ಪುನೀತ್ ಅಭಿಮಾನಿಗಳ ಸಪೋರ್ಟ್ ಬೇಡ!
ಡೆವಿಲ್ ಸಿನಿಮಾ ಬರಲಿ,ಅದಕ್ಕೆ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಸಹ ಸಪೋರ್ಟ್ ಮಾಡ್ತೀವಿ. ನಾವೂ ಡೆವಿಲ್ ಸಿನಿಮಾ ನೋಡ್ತೀವಿ. ನಾವು ದರ್ಶನ್ ಜೊತೆಗೆ ಇರ್ತೀವಿ ಎಂದು ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯೊಬ್ಬರು ಹೇಳಿದ್ದಾರೆ. ಇದಕ್ಕೆ ದರ್ಶನ್ ಅಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾರು ಅಪ್ಪು, ಅಪ್ಪು ಹೆಸರು ಇಲ್ಲಿ ಬೇಡ. ಇದು ಡಿ- ಬಾಸ್ ಸಾಮ್ರಾಜ್ಯ ಕಣೋ. ಜೈ ಡಿ ಬಾಸ್, ಜೈ ಜೈ ಡಿ ಬಾಸ್ ಎನ್ನುವ ವಿಡಿಯೋ ವೈರಲ್ ಆಗಿದೆ.
ಅಪ್ಪು ಅಭಿಮಾನಿಗಳಿಂದ ತೀವ್ರ ವಿರೋಧ
ಈ ವಿಡಿಯೋಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ (ಅಪ್ಪು) ಅಭಿಮಾನಿಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಧಿಮಾಕು ಇರಬೇಕು ಗುರು.ಆದರೆ, ಇಷ್ಟೊಂದು ಧಿಮಾಕು ಇರಬಾರದು ಎಂದು ಅಪ್ಪು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದು ಕುಡುಕರ ಸಂಘ ಎಂದು ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ದರ್ಶನ್ ಅಭಿಮಾನಿಗಳು ಹಾಗೂ ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳು ಪರಸ್ಪರ ಬೈದುಕೊಂಡಿದ್ದಾರೆ.

ಡೆವಿಲ್‌ಗೆ ಯಾರ ಸಪೋರ್ಟ್ ಸಹ ಬೇಡ !
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರ ಡೆವಿಲ್ ಚಿತ್ರ ಹಿಟ್ ಆಗುವುದಕ್ಕೆ ನಮಗೆ ಯಾರ ಸಪೋರ್ಟ್ ಬೇಡ ಎಂದು ದರ್ಶನ್ ಅಭಿಮಾನಿಗಳು ಹೇಳಿದ್ದಾರೆ.
"ನಮಗೆ ಯಾವನ್ ಸಪೋರ್ಟ್ ಬೇಡ ಗುರು, ನಮ್ಮ ಬಾಸ್‌ಗೆ ನಾವು ಯಾವಾಗಲು ಜೊತೆಗೆ ಇರ್ತೀವಿ. ನಮಗೆ ಯಾವ ಹೀರೊ ಮತ್ತು ಹೀರೊ ಫ್ಯಾನ್ಸ್‌ಗಳ ಅವಶ್ಯಕತೆ ಬೇಕಾಗಿಲ್ಲ. ಮಧ್ಯದಲ್ಲಿ ಬಂದು ನಿಮ್ಮ ಹೀರೋಗಳ ಹೆಸರು ಹೇಳ್ಕೊಂಡು ಬೇಳೆಕಾಳು ಬೇಯಿಸ್ಕೊಳೋಕೆ ಬರಬೇಡಿ" ಎಂದು ದರ್ಶನ್ ಫ್ಯಾನ್ಸ್ ಬರೆದುಕೊಂಡಿದ್ದಾರೆ.

ನೋ ಫ್ಯಾನ್ಸ್ ವಾರ್ ಎಂದಿದ್ದ ಅಪ್ಪು ಫ್ಯಾನ್ಸ್
ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರು ನಿಧನರಾದ ಸಂದರ್ಭದಲ್ಲಿ ಪುನೀತ್‌ರಾಜ್‌ಕುಮಾರ್ ಅವರ ಅಭಿಮಾನಿಗಳು ಇನ್ಮುಂದೆ ನೋ ಫ್ಯಾನ್ಸ್ ವಾರ್ ಎಂದು ಭಾವುಕರಾಗಿ ಹೇಳಿದ್ದರು. ಅಲ್ಲದೇ ವಿವಿಧ ಸ್ಟಾರ್ ನಟರ ಫ್ಯಾನ್ಸ್ ಸಹ ಫ್ಯಾನ್ಸ್ ವಾರ್ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದರಿಂದ ಕನ್ನಡ ಚಿತ್ರರಂಗಕ್ಕೂ ಒಳ್ಳೆಯದು ಆಗುವುದಿಲ್ಲ. ಸುಮ್ಮನೆ ಮನಸ್ಸು ಕೆಡುತ್ತದೆ. ಫ್ಯಾನ್ಸ್ ವಾರ್ ಮಾಡುವುದು ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಇದೀಗ ಅಪ್ಪು ಅಭಿಮಾನಿಗಳೇ ಮುಂದೆ ಬಂದು ನಾವು ದರ್ಶನ್ ಅವರ ಡೆವಿಲ್ ಚಿತ್ರವನ್ನು ಬೆಂಬಲಿಸುತ್ತೇವೆ. ಡೆವಿಲ್ ಸಿನಿಮಾ ನೋಡುತ್ತೇವೆ ಎಂದು ಹೇಳಿದರೂ, ದರ್ಶನ್ ಅಭಿಮಾನಿಗಳು ದರ್ಪ ತೋರಿಸುತ್ತಿದ್ದಾರೆ. ದರ್ಶನ್ ಅಭಿಮಾನಿಗಳ ಈ ವರ್ತನೆ ಸರಿ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications