"ಇದ್ರೆ ನೆಮ್ದಿಯಾಗ್ ಇರ್ಬೇಕ್" ಸಾಂಗ್ ರಿಲೀಸ್ ಯಾವಾಗ? ಡೆವಿಲ್ ಚಿತ್ರತಂಡ ಮಾಹಿತಿ
ನಟ ದರ್ಶನ್ ಅವರ ಇದ್ರೆ ನೆಮ್ದಿಯಾಗ್ ಇರ್ಬೇಕ್ ಅನ್ನೋ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್ ಆಗಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ ಮೇಲೆ ಈ ಡೈಲಾಗ್ ಟ್ರೆಂಡಾಗಿತ್ತು. ಇದೇ ಕಾರಣಕ್ಕೆ ಅವರು ಜಾಮೀನಿನ ಮೇಲೆ ರಿಲೀಸ್ ಆದ ಮೇಲೆ ಡೆವಿಲ್ ಸಿನಿಮಾದಲ್ಲಿ ಇದ್ರೆ ನೆಮ್ದಿಯಾಗ್ ಇರ್ಬೇಕ್ ಎಂಬ ಸಾಲಿನಲ್ಲೇ ಮೊದಲ ಸಾಂಗ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಅಷ್ಟರಲ್ಲೇ ದರ್ಶನ್ ಅವರು ಮತ್ತೆ ಜೈಲು ಸೇರಿದ್ದರಿಂದ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಈಗ ಕೊನೆಗೂ ಆ ಹಾಡು ರಿಲೀಸ್ ಆಗುವ ದಿನಾಂಕ ಘೋಷಣೆಯಾಗಿದೆ.
ಕಳೆದ ವರ್ಷ ಡೆವಿಲ್ ಸಿನಿಮಾ ಶೂಟಿಂಗ್ ವೇಳೆಯೇ ರೇಣುಕಾಸ್ವಾಮಿ ಕೊಲೆ ಕೇಸ್ ಬೆಳಕಿಗೆ ಬಂದಿತ್ತು. ಈ ಆರೋಪದಲ್ಲಿ ದರ್ಶನ್ ಅವರನ್ನು ಬಂಧಿಸಿ ಜೈಲಿಗೆ ಕಳಿಸಿದ್ದರಿಂದ ಡೆವಿಲ್ ಶೂಟಿಂಗ್ ನಿಂತು ಹೋಯ್ತು, ರಿಲೀಸ್ ಡೇಟ್ ಕೂಡ ಮುಂದೂಡಲಾಯಿತು. ಆದರೆ ಹಲವು ತಿಂಗಳ ಬಳಿಕ ದರ್ಶನ್ ಅವರಿಗೆ ಜಾಮೀನು ಸಿಕ್ಕಿದ್ದರಿಂದ ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಶುರುವಾಗಿ ಬಹುತೇಕ ಪೂರ್ಣಗೊಂಡಿದೆ.

ಡಿಬಾಸ್ ಫ್ಯಾನ್ಸ್‌ಗೆ ಉತ್ಸಾಹ ತುಂಬಬೇಕು ಎಂದು ಪ್ಲ್ಯಾನ್ ಮಾಡಿದ್ದ ಡೆವಿಲ್ ಟೀಂ, ಇದ್ರೆ ನೆಮ್ದಿಯಾಗ್ ಇರ್ಬೇಕು ಟೈಟಲ್‌ನಲ್ಲೇ ಒಂದು ಸಾಂಗ್ ಮಾಡಿದೆ. ಆಗಸ್ಟ್ 15ರಂದು ಈ ಹಾಡು ರಿಲೀಸ್ ಮಾಡಲು ಮುಂದಾಗಿತ್ತು. ಇದೇ ಹೊತ್ತಲ್ಲಿ ಸುಪ್ರೀಂಕೋರ್ಟ್ ದರ್ಶನ್ ಅವರ ಜಾಮೀನು ರದ್ದು ಮಾಡಿದ್ದರಿಂದ ಅವರು ಮತ್ತೆ ಜೈಲು ಸೇರಬೇಕಾಯಿತು. ಹೀಗಾಗಿ ಆ ಸಾಂಗ್ ರಿಲೀಸ್ ಆಗಲಿಲ್ಲ. ಜೊತೆಗೆ ಡೆವಿಲ್ ಸಿನಿಮಾ ರಿಲೀಸ್ ಆಗೋದು ಅನುಮಾನ ಎಂಬ ಮಾತುಗಳು ಕೇಳಿಬಂದಿದ್ದವು.
ಆದರೆ ದರ್ಶನ್ ಅವರು ಜೈಲಿನಲ್ಲಿದ್ದರೂ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಡೆವಿಲ್ ಚಿತ್ರತಂಡ, ಆಗಸ್ಟ್ 24ರಂದು ಭಾನುವಾರ ಬೆಳಿಗ್ಗೆ 10.05ಕ್ಕೆ ದಿ ಡೆವಿಲ್ ಸಿನಿಮಾದ ಮೊದಲನೆ ಹಾಡು ಇದ್ರೆ ನೆಮ್ದಿಯಾಗ್ ಇರ್ಬೇಕ್ ಬಿಡುಗಡೆಯಾಗಲಿದೆ ಎಂದು ಅನೌನ್ಸ್ ಮಾಡಿದೆ. ಇದರಿಂದ ಡಿಬಾಸ್ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ದರ್ಶನ್ ಪರ ಪತ್ನಿ ಪ್ರಚಾರ
ದರ್ಶನ್ ಜೈಲು ಸೇರಿದ ಮೇಲೆ ಅವರ ಪರವಾಗಿ ಪತ್ನಿ ವಿಜಯಲಕ್ಷ್ಮಿ ಅವರು ಅಭಿಮಾನಿಗಳಿಗೆ ವಿಶೇಷ ಸಂದೇಶ ಕೊಟ್ಟಿದ್ದರು. ನನ್ನ ಪ್ರೀತಿಯ ಡಿಬಾಸ್ ಸೆಲೆಬ್ರಿಟಿಗಳೇ, ನಿಮ್ಮ ಚಾಲೆಂಜಿಂಗ್ ಸ್ಟಾರ್ ನಿಮ್ಮೆಲ್ಲರನ್ನೂ ತನ್ನ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ಅವರು ನಿಮ್ಮೊಂದಿಗೆ ನೇರವಾಗಿ ಸಂಪರ್ಕ ಸಾಧಿಸಲು ಹಿಂತಿರುಗುವವರೆಗೆ, ನಾನು ಅವರ ಸೋಷಿಯಲ್ ಮೀಡಿಯಾನ ನಿರ್ವಹಿಸುತ್ತೇನೆ. ಅವರ ಪರವಾಗಿ ಅಪ್ಡೇಟ್‌ಗಳು ಹಾಗೂ ಸಿನಿಮಾ ಪ್ರಚಾರದ ವಿಚಾರಗಳನ್ನ ಹಂಚಿಕೊಳ್ಳುತ್ತೇನೆ.
ನೀವು ತೋರಿಸುತ್ತಿರುವ ಪ್ರೀತಿ, ಪ್ರಾರ್ಥನೆಗಳು ಮತ್ತು ತಾಳ್ಮೆ ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಅಪಾರ ಶಕ್ತಿಯನ್ನು ನೀಡುತ್ತದೆ. ಈ ಒಗ್ಗಟ್ಟು ಹಾಗೂ ಪಾಸಿಟಿವ್‌ನೆಸ್ ಉಳಿಸಿಕೊಳ್ಳೋಣ. ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ. ನೀವು ಯಾವಾಗಲೂ ತಿಳಿದಿರುವ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ಕೃತಜ್ಞತೆ ಮತ್ತು ಪ್ರೀತಿಯಿಂದ ವಿಜಯಲಕ್ಷ್ಮಿ ದರ್ಶನ್ ಎಂದು ಹೇಳಿದ್ದರು.












Click it and Unblock the Notifications