Darshan-Pavithra Gowda: ದರ್ಶನ್ ಮತ್ತು ಪವಿತ್ರಾ ಗೌಡ ಮುಖಾ ಮುಖಿ ಭೇಟಿಗೆ ಮುಹೂರ್ತ ಫಿಕ್ಸ್ ?

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ 1, ನಟ ದರ್ಶನ್‌ ಎ2 ಆರೋಪಿಯಾಗಿದ್ದು, ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಆರು ಮಂದಿಗೆ ಜಾಮೀನು ಸಿಕ್ಕಿದೆ. ನಟ ದರ್ಶನ್‌ ಬೆನ್ನು ನೋವಿನ ಕಾರಣಕೊಟ್ಟು ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ, ಪವಿತ್ರಾ ಗೌಡ ಜಾಮೀನು ಅರ್ಜಿ ಹಲವು ಬಾರಿ ತಿರಸ್ಕೃತಗೊಂಡ ಬಳಿಕ ಬೇಲ್‌ ಸಿಕ್ಕಿದೆ.

ರೇಣುಕಾಸ್ವಾಮಿ ಕೇಸ್‌ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರಿಗೂ ಒಂದೇ ದಿನ ರೆಗ್ಯೂಲರ್ ಜಾಮೀನು ಮಂಜೂರಾಗಿದೆ. ಇತ್ತ ಆಸ್ಪತ್ರೆಯಿಂದ ಡಿಶ್ಚಾರ್ಜ್‌ ಆಗಿ ಬಂದ ನಟ ದರ್ಶನ್‌ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಜೈಲಿನಿಂದ ಹೊರಬಂದ್ಮೇಲೆ ಪವಿತ್ರಾ ಗೌಡ ಹಲವು ದೇವರ ಮೊರೆ ಹೋಗಿದ್ದು, ಸದ್ಯ ಪವಿತ್ರಾ ಗೌಡ ಅವರು ವಿಶ್ರಾಂತಿಯಲ್ಲಿದ್ದಾರೆ. ಜೈಲಿನಿಂದ ಹೊರಬಂದ್ಮೇಲೆ ಪವಿತ್ರಾ ಗೌಡ ಹಾಗೂ ದರ್ಶನ್ ಯಾವಾಗ ಮುಖಾ ಮುಖಿ ಆಗಲಿದ್ದಾರೆ ಎನ್ನುವ ಕುತೂಹಲ ಹುಟ್ಟಿಕೊಂಡಿದೆ.

Darshan and Pavithra Gowda s face-to-face meeting time fixed

ರೆಗ್ಯೂಲರ್ ಜಾಮೀನು ಸಿಕ್ಕಿದ ಬಳಿಕ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಆರಾಮಾಗಿ ಹೊರಗೆ ಓಡಾಡಿಕೊಂಡಿದ್ದಾರೆ. ಇಬ್ಬರೂ ಬೆಂಗಳೂರಿನಲ್ಲಿ ಭೇಟಿಯಾಗಬಹುದು ಎಂದು ಹೇಳಲಾಗಿದೆ. ಆರು ತಿಂಗಳ ಬಳಿಕ ಮತ್ತೆ ಒಟ್ಟಿಗೆ ಸೇರಿಕೊಳ್ಳಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಇದೂವರೆಗೂ ಅದು ಸಾಧ್ಯವಾಗಿಲ್ಲ. ಪವಿತ್ರಾ ಗೌಡ ಕೈಗೆ ದರ್ಶನ್ ಸಿಕ್ಕೇ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಇಬ್ಬರ ಭೇಟಿಗೂ ಒಂದು ದಿನ ಕೂಡ ಫಿಕ್ಸ್ ಆಗಿದೆಯಂತೆ.

ಆರು ತಿಂಗಳ ಬಳಿಕ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಮುಖಾ ಮುಖಿಗೆ ಮುಹೂರ್ತ ಕೂಡ ಫಿಕ್ಸ್ ಆಗಿದ್ದು, ಜನವರಿ 10ರಂದು ಇಬ್ಬರೂ ಕೋರ್ಟ್‌ನಲ್ಲಿ ಭೇಟಿಯಾಗಲಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗಳು ವಿಚಾರಣೆಗೆ ತಪ್ಪದೆ ಹಾಜರಾಗಬೇಕಿದೆ. ಹೀಗಾಗಿ 57ನೇ ಸಿಸಿಎಚ್ ನ್ಯಾಯಾಧೀಶರ ಮುಂದೆ ಅಷ್ಟೂ ಜನ ಆರೋಪಿಗಳು ಹಾಜರಾಗಬೇಕು. ಅದೇ ದಿನ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರೂ ಎದುರು ಬದುರಾಗುತ್ತಾರೆಂದು ನಿರೀಕ್ಷೆ ಮಾಡಲಾಗಿದೆ.

ಇನ್ನೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೋರ್ಟ್ ಅನುಮತಿ ಪಡೆದು ಮೈಸೂರಿನ ಸಮೀಪ ಇರುವ ತಮ್ಮ ಫಾರ್ಮ್ ಹೌಸ್‌ನಲ್ಲಿ ಇದ್ದಾರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರ ಜೊತೆಗೆ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಆರಾಮಾಗಿ ಓಡಾಡಿಕೊಂಡಿರುವ ದೃಶ್ಯಗಳನ್ನು ಕೂಡ ಪ್ರಸಾರ ಆಗಿವೆ. ಹೀಗಾಗಿ ದರ್ಶನ್ ಫಾರ್ಮ್‌ಹೌಸ್‌ನಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಆದರೆ, ಪವಿತ್ರಾ ಗೌಡ ಮಾತ್ರ ಬೆಂಗಳೂರಿನಲ್ಲಿ ಅವರ ಸಂಬಂಧಿಯ ಅಪಾರ್ಟ್‌ಮೆಂಟ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ.

ಆರು ತಿಂಗಳ ಬಳಿಕ ದರ್ಶನ್‌ ಅವರನ್ನ ಭೇಟಿಯಾಗಲು ಪವಿತ್ರಾ ಗೌಡ ಹಂಬಲಿಸುತ್ತಿದ್ದರು ಎನ್ನಲಾಗಿದೆ. ಇತ್ತ ದರ್ಶನ್ ಹಾಗೂ ಪವಿತ್ರಾ ಗೌಡ ಭೇಟಿಗೆ ಕಾನೂನು ಅಡೆ ತಡೆ ಕೂಡ ಇದೆ ಎಂದು ಹೇಳಲಾಗುತ್ತಿದೆ. . ದರ್ಶನ್ ಕೋರ್ಟ್ ಅನುಮತಿ ಪಡೆದು ಮೈಸೂರಿಗೆ ಹೋಗಿದ್ದರೆ. ಇತ್ತ ದರ್ಶನ್ ಭೇಟಿ ಮಾಡುವುದಕ್ಕೆ ಪವಿತ್ರಾ ಗೌಡ ಮೈಸೂರಿಗೆ ಹೋಗಬೇಕಿದ್ರೆ ಅವರೂ ಕೂಡ ಕೋರ್ಟ್ ಅನುಮತಿಯನ್ನು ಪಡೆಯಬೇಕಿದೆ.

ರಿಲ್ಯಾಕ್ಸ್ ಮೂಡ್‌ನಲ್ಲಿ ನಟ ದರ್ಶನ್

ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕಿಡ್ನಾಪ್‌ ಮಾಡಿ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್‌ನಲ್ಲಿ ಕೊಲೆ ಮಾಡಿದ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್‌ ಜಾಮೀನು ‌ಸಿಕ್ಕಿದ್ದು, ಬರೋಬ್ಬರಿ 6 ತಿಂಗಳ ಬಳಿಕ ಶುಕ್ರವಾರ ಮೈಸೂರಿಗೆ ಆಗಮಿಸಿದ್ದಾರೆ. ದರ್ಶನ್‌ ಅವರು ತಮ್ಮ ಫಾರಂ ಹೌಸ್‌ ನಲ್ಲಿ ವಾಸ್ತವ್ಯ ಹೂಡಿದ್ದಾರೆ

ಮೈಸೂರು- ಟಿ. ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯಲ್ಲಿರುವ ವಿನೀಶ್ ದರ್ಶನ್ ಕಾಟೇವಾರಿ ಸ್ಟಡ್‌ ಫಾರಂ ಹೌಸ್‌ ಗೆ ಅಕ್ಕನ ಮಗ ಚಂದನ್ ,ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮೀ, ನಟ ಧನ್ವೀರ್, ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಜೊತೆಗೆ ರಿಲ್ಯಾಕ್ಸ್ ಮೂಡ್‌ನಲ್ಲಿ ದರ್ಶನ್‌ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+